KSRTC ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್- ಪುರುಷರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ವಿತರಣೆ !!
KSRTC : ರಾಜ್ಯದ ಹೆಮ್ಮೆಯ KSRTC ಸಂಸ್ಥೆಯು ರಾಜ್ಯದ ಜನತೆಗೆ ಒಂದು ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಕ್ರಿಸ್ಮಸ್ ರಜೆಯ ಪ್ರಯುಕ್ತ ವಿವಿಧ ಸಾರಿಗೆ ಸೌಲಭ್ಯಗಳನ್ನು ಕಲ್ಪಿಸಿ ಭರ್ಜರಿ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲು ಮುಂದಾಗಿದೆ. ಈ ಮೂಲಕ ವೀಕೆಂಡ್ ನಲ್ಲಿ ಸಾಲು ಸಾಲು ರಜೆಯಿಂದ ಮನೆಕಡೆಗೆ ಹೊರಡುವವರಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಿದೆ.
ಹೌದು, ಬರುವ ವಾರಾಂತ್ಯದಲ್ಲಿ ನಾಲ್ಕನೇ ಶನಿವಾರ, ಭಾನುವಾರ ಸೇರಿ ಸೋಮವಾರವೂ ಕ್ರಿಸ್‌ಮಸ್(Christmas) ಹಬ್ಬದ ಸಾರ್ವಜನಿಕ ರಜೆ ಸೇರಿ ಸತತ ಮೂರು ದಿನ ರಜೆ ಇದೆ. ಈ ಸಂದರ್ಭದಲ್ಲಿ ಊರುಗಳಿಗೆ ತೆರಳುವವರಿಗಾಗಿ ಕೆಎಸ್‌ಆರ್‌ಟಿಸಿ ವಿಶೇಷ್ ಬಸ್ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಬಸ್‌ಗಳು ಲಭ್ಯವಿವೆ. ಡಿಸೆಂಬರ್ 22 ರಿಂದ 24 ರವರೆಗೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳು ಮತ್ತು ಅಕ್ಕ-ಪಕ್ಕದ ರಾಜ್ಯಗಳಿಗೆ ಈ ಬಸ್‌ಗಳು ಸಂಚಾರ ನಡೆಸಲಿದ್ದು ಇದರ ಜೊತೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಿದೆ.
ಎಲ್ಲಿಗೆಲ್ಲಾ ಸಂಚರಿಸಲಿದೆ KSRTC ಬಸ್ ?
ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ,ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ ಸೇರಿದಂತೆ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಬಸ್ ಗಳು ಹೊರಡಲಿವೆ. ಇನ್ನು ನೆರೆ ರಾಜ್ಯಗಳಾದ ತಮಿಳುನಾಡು, ಕೇರಳದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ. ಸದ್ಯ ಲಭ್ಯವಿರುವ ಬಸ್‌ಗಳ ಜತೆಗೆ ಈ 1,000 ವಿಶೇಷ ಬಸ್‌ಗಳ ಲಭ್ಯವಿರಲಿದ್ದು, ಪ್ರಯಾಣಿಕರು ಯಾವುದೇ ಜನ ದಟ್ಟಣೆ ಇಲ್ಲದೇ ಅರಾಮಾವಾಗಿ ಪ್ರಯಾಣ ಮಾಡಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಮುಂಗಡ ಬುಕ್ಕಿಂಗ್‌ಗೆ ಶೇ 10 ರಷ್ಟು ರಿಯಾಯಿತಿ
ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ರಾಜ್ಯದೊಳಗೆ ಪ್ರಯಾಣಿಸಲು ನಾಲ್ಕು ಅಥವಾ ಹೆಚ್ಚು ಪುರುಷ ಪ್ರಯಾಣಿಕರು ಅಥವಾ ಹೊರರಾಜ್ಯಕ್ಕೆ ಪ್ರಯಾಣಿಸಲು ಮಹಿಳೆ ಹಾಗೂ ಪುರುಷರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಮೂಲಕವೂ ಟಿಕೆಟ್ ಬುಕ್ ಮಾಡಬಹುದಾಗಿದೆ.