For the best experience, open
https://m.hosakannada.com
on your mobile browser.
Advertisement

Gold Price: ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ! ಬಜೆಟ್ ಮಂಡನೆ ಮರುದಿನವೇ ಮಹಿಳೆಯರಿಗೆ ಸಿಹಿ ಸುದ್ದಿ!

Gold Price: ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಮತ್ತೆ ಹಣಕಾಸು ಖಾತೆ ಪಡೆದಿರುವ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಬಜೆಟ್ ಮಂಡಿಸಿದರು.
10:58 AM Jul 24, 2024 IST | ಕಾವ್ಯ ವಾಣಿ
UpdateAt: 10:58 AM Jul 24, 2024 IST
gold price  ಚಿನ್ನದ ಬೆಲೆ 50 000 ರೂಪಾಯಿಗೆ ಕುಸಿತ  ಬಜೆಟ್ ಮಂಡನೆ ಮರುದಿನವೇ ಮಹಿಳೆಯರಿಗೆ ಸಿಹಿ ಸುದ್ದಿ
Advertisement

Gold Price: ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಮತ್ತೆ ಹಣಕಾಸು ಖಾತೆ ಪಡೆದಿರುವ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಬಜೆಟ್ ಮಂಡಿಸಿದರು. ಸದ್ಯ ಕೇಂದ್ರ ಸರ್ಕಾರ ಬಜೆಟ್ ವೇಳೆ ಘೋಷಣೆ ಮಾಡಿದ ಹೊಸ ಯೋಜನೆ ಪರಿಣಾಮ ಚಿನ್ನ & ಬೆಳ್ಳಿ ಬೆಲೆ (Gold Price) ಭಾರಿ ಕುಸಿತ ಕಾಣುತ್ತಿದ್ದು, ಶೀಘ್ರದಲ್ಲೇ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 50,000 ರೂಪಾಯಿಗೆ ಕುಸಿತವನ್ನ ಕಾಣುವ ಸಾಧ್ಯತೆ ಇದೆ.

Advertisement

ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮಹಿಳೆಯರ ಮೇಲೆ ಸಾಕಷ್ಟು ನಿರೀಕ್ಷೆಗಳು ಇದ್ದವು. ಯಾಕಂದ್ರೆ ಚಿನ್ನ & ಬೆಳ್ಳಿ ಬೆಲೆ ಕಳೆದ 1 ವರ್ಷದಲ್ಲಿ ಭಾರಿ ಏರಿಕೆ ಕಂಡಿದೆ. ಹೀಗಾಗಿ ಚಿನ್ನ & ಬೆಳ್ಳಿ ಬೆಲೆ ಇಳಿಕೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್-2024ರ ವೇಳೆ ಮಹತ್ವದ ಘೋಷಣೆ ಮಾಡಿದ್ದು, ಚಿನ್ನ & ಬೆಳ್ಳಿ ಮೇಲೆ ಇದ್ದ ಕಸ್ಟಮ್ಸ್‌ಗೆ ಮುಕ್ತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ, ಹೀಗಾಗಿ ಚಿನ್ನ & ಬೆಳ್ಳಿ ಬೆಲೆ ಕುಸಿತ ಕಾಣುತ್ತಿದೆ.

ಇದೀಗ ಕೇಂದ್ರ ಸರ್ಕಾರ ಬಜೆಟ್-2024ರ ಮೂಲಕ ಘೋಷಣೆ ಮಾಡಿರುವಂತೆ ಚಿನ್ನದ ಬೆಲೆ ಮತ್ತು ಬೆಳ್ಳಿ ಬೆಲೆ ಭಾರಿ ಕುಸಿತ ಕಾಣುವ ನಿರೀಕ್ಷೆ ಇದೆ. ನಿನ್ನೆ ಬಜೆಟ್ ಮುಗಿದ ನಂತರ ಒಂದೇ ದಿನಕ್ಕೆ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 29,900 ರೂಪಾಯಿ ಕುಸಿತ ಕಂಡಿದ್ದು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬಜೆಟ್ ಹಿನ್ನೆಲೆ ಕುಸಿತ ಕಂಡು ಪ್ರತಿ 100 ಗ್ರಾಂ 7,08,600 ರೂಪಾಯಿ ತಲುಪಿದೆ. ಹಾಗೇ ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭರ್ಜರಿ ಕುಸಿತ ಕಂಡಿದ್ದು 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 27,500 ರೂಪಾಯಿ ಇಳಿಕೆ ಆಗಿದೆ.

Advertisement

ಇದೀಗ 10 ಗ್ರಾಂ ಆಭರಣ ಚಿನ್ನದ ಬೆಲೆ 2,750 ರೂಪಾಯಿ ಇಳಿಕೆ ಕಂಡು, ಆಭರಣ ಚಿನ್ನದ ಬೆಲೆ ಇಳಿಕೆ ನಂತರ ಪ್ರತಿ 10 ಗ್ರಾಂಗೆ 64,950 ರೂಪಾಯಿಗೆ ಮಾರಾಟ ಆಗುತ್ತಿದೆ. ಬೆಳ್ಳಿಯ ಬೆಲೆ ಇದೀಗ ಕೆಜಿಗೆ 3,500 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಈಗ ಬೆಂಗಳೂರಲ್ಲಿ ಬೆಳ್ಳಿ ಪ್ರತಿ ಕೆಜಿಗೆ 88,000 ರೂಪಾಯಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಆಭರಣ ಚಿನ್ನ ಪ್ರತಿ 10 ಗ್ರಾಂಗೆ 50,000 ರೂಪಾಯಿಗೆ ತಲುಪುವ ನಿರೀಕ್ಷೆ ದಟ್ಟವಾಗಿದೆ.

Budget 2024: ಬಜೆಟ್ ಗಾತ್ರ 48.21 ಲಕ್ಷ ಕೋಟಿ – ಕೇಂದ್ರಕ್ಕೆ ಇಷ್ಟೊಂದು ಆದಾಯ ಬರೋದು ಎಲ್ಲಿಂದ ?

Advertisement
Advertisement
Advertisement