Gold bond scheme: ಪುನಃ ಬಂತು 8 ವರ್ಷಗಳಲ್ಲಿ 141% ರಿಟರ್ನ್ಸ್ ನೀಡಿರುವ ಗೋಲ್ಡ್ ಬಾಂಡ್ ಸ್ಕೀಂ!!
2024 ರ ಹಣಕಾಸು ವರ್ಷದ 4ನೇ ಸರಣಿಯ ಹಾಗೂ 2024ರ ಮೊದಲ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಫೆಬ್ರವರಿ 12ರಿಂದ ಆರಂಭವಾಗಲಿದೆ. ಈ ಬಾರಿ ಫೆಬ್ರವರಿ 16 ರ ವರೆಗೆ ಚಿನ್ನದ ಬಾಂಡ್‌ಗಳು ಖರೀದಿಗೆ ಲಭ್ಯ ಇರುತ್ತದೆ. ವಾಣಿಜ್ಯ ಬ್ಯಾಂಕ್‌ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್, ಕ್ಲಿಯರಿಂಗ್ ಕಾರ್ಪೊರೇಷನ್, ನಿರ್ದಿಷ್ಟ ಪೋಸ್ಟ್ ಆಫೀಸ್‌ಗಳು, ಷೇರು ವಿನಿಮಯ ಕೇಂದ್ರಗಳಲ್ಲಿ ಇವುಗಳನ್ನು ಕೊಂಡುಕೊಳ್ಳಬಹುದು.
ಇದನ್ನು ಓದಿ: HSRP NUMBER PLATE: ಈಗ ನಿಮ್ಮ ಮೊಬೈಲ್ ಫೋನ್ ನಲ್ಲೇ HSRP ಪ್ಲೇಟ್ ಬುಕ್ ಮಾಡಬಹುದು!!
ಹೈಲೈಟ್ಸ್:
2024 ರ ಹಣಕಾಸು ವರ್ಷದ 4ನೇ ಸರಣಿಯ ಹಾಗೂ 2024ರ ಮೊದಲ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಆರಂಭವಾಗಿದೆ.
ಇದೇ ಫೆಬ್ರವರಿ 12ರಿಂದ ಆರಂಭವಾಗಲಿರುವ ಯೋಜನೆ, ಫೆಬ್ರವರಿ 16ರ ವರೆಗೆ ಚಿನ್ನದ ಬಾಂಡ್‌ಗಳು ಖರೀದಿಸಲು ಅವಕಾಶವಿದೆ.
ವಾಣಿಜ್ಯ ಬ್ಯಾಂಕ್‌ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್, ಕ್ಲಿಯರಿಂಗ್ ಕಾರ್ಪೊರೇಷನ್‌ನಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ನಿರ್ದಿಷ್ಟ ಪೋಸ್ಟ್ ಆಫೀಸ್‌ಗಳು, ಷೇರು ವಿನಿಮಯ ಕೇಂದ್ರಗಳಲ್ಲಿಯೂ ಬಾಂಡ್‌ಗಳನ್ನು ಖರೀದಿಸಬಹುದು
ಹೊಸ ದಿಲ್ಲಿ: 2024 ರ ಹಣಕಾಸು ವರ್ಷದ 4ನೇ ಸರಣಿಯ ಹಾಗೂ 2024ರ ಮೊದಲ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಫೆಬ್ರವರಿ 12ರಿಂದ ಆರಂಭವಾಗಲಿದೆ. ಈ ಬಾರಿ ಫೆಬ್ರವರಿ 16 ರ ವರೆಗೆ ಚಿನ್ನದ ಬಾಂಡ್‌ಗಳು ಖರೀದಿಗೆ ಲಭ್ಯ ಇರುತ್ತದೆ. ವಾಣಿಜ್ಯ ಬ್ಯಾಂಕ್‌ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್, ಕ್ಲಿಯರಿಂಗ್ ಕಾರ್ಪೊರೇಷನ್, ನಿರ್ದಿಷ್ಟ ಪೋಸ್ಟ್ ಆಫೀಸ್‌ಗಳು, ಷೇರು ವಿನಿಮಯ ಕೇಂದ್ರಗಳಲ್ಲಿ ಇವುಗಳನ್ನು ಕೊಂಡುಕೊಳ್ಳಬಹುದು. ಸ್ಟಾಕ್ ಎಕ್ಸ್‌ಚೇಂಜುಗಳಾದ ಬಾಂಬೆ ಷೇರು ವಿನಿಮಯ ಮಾರುಕಟ್ಟೆ ಹಾಗೂ ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆಗಳಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ .
ಚಿನ್ನವನ್ನು ಬೌತಿಕವಾಗಿ ಸಂಗ್ರಹ ಮಾಡುವುದು ಕಷ್ಟ. ಇದರ ರಕ್ಷಿಸಲು ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಹುಟ್ಟಿದ್ದು ಸಾವರಿನ್ ಗೋಲ್ಡ್ ಬಾಂಡ್‌ಗಳು.
ಬೌತಿಕವಾಗಿ ಚಿನ್ನ ಹೊಂದುವುದಕ್ಕಿಂತ ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಹೊಂದುವುದು ಲಾಭದಾಯಕ. ಇದರಲ್ಲಿ ಮೇಕಿಗ್ ಶುಲ್ಕ ಇರುವುದಿಲ್ಲ.
ಹೂಡಿಕೆದಾರರಿಗೆ ಮೇಚುರಿತು ಯ ಸಮಯದಲ್ಲಿ ಪೂರ್ತಿ ಚಿನ್ನದ ಮಾರುಕಟ್ಟೆ ಮೌಲ್ಯದ ಬಡ್ಡಿ ಸಹಿತ ವಾಪಸ್ಸು ನೀಡುತ್ತಾರೆ.
ಶೇ. 141ರಷ್ಟು ರಿಟರ್ನ್ಸ್
2016 ಫೆಬ್ರವರಿ 8 ರಂದು ನೀಡಲಾಗಿದ್ದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಪ್ರತಿ ಗ್ರಾಂಗೆ 2,600 ರೂ. ಬೆಲೆ ನಿಗದಿಪಡಿಸಲಾಗಿತ್ತು. 8 ವರ್ಷದ ಮೇಚುರಿಟಿ ನೀಡಲಾಗಿದೆ. ಈ ಅನ್ವಯ 2024ರ ಫೆಬ್ರವರಿ 8ರಂದು ಇದರ ಅವಧಿ ಕೊನೆಗೊಳ್ಳಲಿದೆ.
ಈ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಪ್ರಕಟಣೆಯಲ್ಲಿ ಮೆಚುರಿಟಿ ಮೊತ್ತವನ್ನು ಘೋಷಿ ಸಲಾಗಿದೆ. ಇದರಲ್ಲಿ ಪ್ರತಿ ಯುನಿಟ್‌ಗೆ 6,271 ರೂ. ದರ ನಿಗದಿ ಪಡಿಸಿದೆ. ಈ ಕಾರಣದಿಂದ ಗೋಲ್ಡ್ ಬಾಂಡ್‌ದಾರರಿಗೆ ಶೇ. 141ರಷ್ಟು ರಿಟರ್ನ್ಸ್ ದೊರೆಯಲಿದೆ.
ಗೋಲ್ಡ್ ಬಾಂಡ್ ಖರೀದಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮತ್ತು ಡಿಜಿಟಲ್ ಮೋಡ್ ಮೂಲಕ ಪಾವತಿ ಮಾಡುವ ಹೂಡಿಕೆದಾರರಿಗೆ ಗ್ರಾಮ್‌ಗೆ 50 ರೂಪಾಯಿ ರಿಯಾಯಿತಿ ಸಿಗಲಿದೆ . ಚಂದಾದಾರಿಕೆ ಮಿತಿಯು ವ್ಯಕ್ತಿಗಳಿಗೆ 4 ಕೆಜಿ ಆಗಿದೆ. ಎಚ್‌ಯುಎಫ್‌ಗೆ 4 ಕೆಜಿ ಮತ್ತು ಟ್ರಸ್ಟ್‌ಗಳಿಗೆ 20 ಕೆಜಿ ಯ ವರೆಗಿದೆ.