ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Geyser Blast: ಈ ಸಣ್ಣ ತಪ್ಪಿನಿಂದ ಗೀಸರ್ ಬಾಂಬ್‌‌ನಂತೆ ಬ್ಲಾಸ್ಟ್ ಆಗುತ್ತೆ! ಅದಕ್ಕಾಗಿ ಈ ಮುನ್ನೆಚ್ಚರಿಕೆ ಇರಲಿ

01:03 PM Jul 29, 2024 IST | ಕಾವ್ಯ ವಾಣಿ
UpdateAt: 01:03 PM Jul 29, 2024 IST
Advertisement

Geyser Blast: ಗೀಸರ್ ಕೆಲವೊಮ್ಮೆ ನಿಮಗೆ ಸೂಚನೆ ನೀಡದೆ ಬಾಂಬ್‌ನಂತೆ (Geyser Blast) ಸ್ಫೋಟಿಸುವ ಸಾಧ್ಯತೆ ಹೆಚ್ಚು. ಯಾಕೆಂದರೆ ಮಳೆ ಬಂದಾಗ (rainy season) ವಿದ್ಯುತ್ ಶಾರ್ಟ್ ಸರ್ಕ್ಯೂಟ್ (electric short circuit ) ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಮನೆಯಲ್ಲಿರುವ ಪ್ರತಿಯೊಂದು ಎಲೆಕ್ಟ್ರಾನಿಕ್ ವಸ್ತುಗಳು ಅದರಲ್ಲೂ ಮುಖ್ಯವಾಗಿ ಎಸಿ, ಗೀಸರ್ ಗಳ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಅದರಲ್ಲೂ ಮಳೆಗಾಲದಲ್ಲಿ ಗೀಸರ್ ಕುರಿತು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಹೌದು, ನಾವು ಮಾಡುವ ಒಂದು ಸಣ್ಣ ತಪ್ಪು ಗೀಸರ್ ಸ್ಫೋಟಕ್ಕೆ ಕಾರಣವಾಗಬಹುದು.

Advertisement

ಮಳೆಗಾಲದಲ್ಲಿ ನೀರು ತುಂಬಾ ತಂಪಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಮಳೆಗಾಲದಲ್ಲಿ ಗೀಸರ್ ಆನ್ ಮಾಡಲು ಯೋಚಿಸುತ್ತಾರೆ. ಆದರೆ ಮಳೆಯ ಕಾರಣದಿಂದ ಗೀಸರ್ ಅನ್ನು ಆನ್ ಮಾಡುವುದರಿಂದ ತುಂಬಾ ಅಪಾಯಕಾರಿ.

ಶಾರ್ಟ್ ಸರ್ಕ್ಯೂಟ್ ಅಪಾಯ:

Advertisement

ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶವು ಹೆಚ್ಚಾಗಿರುತ್ತದೆ. ಇದು ಶಾರ್ಟ್ ಸರ್ಕ್ಯೂಟ್ ಅಪಾಯವನ್ನು ಹೆಚ್ಚಿಸುತ್ತದೆ. ಗೀಸರ್ ಸಂಪರ್ಕದಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಬಹುದು ಮತ್ತು ಬೆಂಕಿಯ ಅಪಾಯವೂ ಇದೆ. ಈ ಅಪಾಯ ತಪ್ಪಿಸಲು ಗೀಸರ್‌ನ ವೈರಿಂಗ್ ಸರಿಯಾಗಿ ಮಾಡಲಾಗಿದೆಯೇ ಮತ್ತು ಅದರಲ್ಲಿ ಯಾವುದೇ ದೋಷವಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ತುಕ್ಕಿನಿಂದ ಸಮಸ್ಯೆ:

ಮಳೆಗಾಲದಲ್ಲಿ ತೇವಾಂಶದಿಂದಾಗಿ ಗೀಸರ್‌ನ ಲೋಹದ ಭಾಗಗಳು ತುಕ್ಕು ಹಿಡಿಯಬಹುದು. ಇದು ಗೀಸರ್‌ನ ಕ್ವಾಲಿಟಿ ಕಡಿಮೆ ಮಾಡುತ್ತದೆ ಮತ್ತು ಅದರ ಕಾರ್ಯ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಇನ್ನು ಗೀಸರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಿ. ಇದರಿಂದ ಅದು ತುಕ್ಕು ಹಿಡಿಯುವುದಿಲ್ಲ ಮತ್ತು ಅದು ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತದೆ.

ವಿದ್ಯುತ್ ಬಳಕೆ:

ಸಾಮಾನ್ಯವಾಗಿ ಮಳೆಗಾಲದಲ್ಲಿ ತಾಪಮಾನ ಕಡಿಮೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗೀಸರ್ ನಿಂದ ಬಿಸಿ ನೀರು ಉತ್ಪಾದಿಸಲು ಹೆಚ್ಚಿನ ವಿದ್ಯುತ್ ಅಗತ್ಯವಿರುತ್ತದೆ. ವಿದ್ಯುತ್ ಪೂರೈಕೆಯಲ್ಲಿ ಉಂಟಾಗುವ ವ್ಯತ್ಯಾಸಗಳು ಗೀಸರ್ ಸ್ಫೋಟಕ್ಕೆ ಕಾರಣವಾಗುತ್ತದೆ.

ನೀರಿನ ಗುಣಮಟ್ಟ:

ಮಳೆನೀರು ಸಾಮಾನ್ಯವಾಗಿ ಕಲ್ಮಶಗಳನ್ನು ಹೊಂದಿರುತ್ತದೆ. ಇದು ಗೀಸರ್ ಒಳಗೆ ಸೇರಿಕೊಂಡು ಅದರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ನೀವು ಇಲೆಕ್ಟ್ರಾನಿಕ್ ವಸ್ತು ಖರೀದಿಸುವವಾಗ ಉತ್ತಮ ಗುಣಮಟ್ಟದ ವಸ್ತು ಅನ್ನು ಖರೀದಿಸಿ. ಮುಖ್ಯವಾಗಿ ಗೀಸರ್ ಅನ್ನು ಓವರ್‌ಲೋಡ್ ಮಾಡಬೇಡಿ.

Related News

Advertisement
Advertisement