For the best experience, open
https://m.hosakannada.com
on your mobile browser.
Advertisement

Technology News: ನಿಮ್ಮ ಇಂಧನ ಬಳಕೆಯ ಸ್ಕೂಟರನ್ನೇ ಎಲೆಕ್ಟ್ರಿಕ್‌ ಸ್ಕೂಟರಾಗಿ ಪರಿವರ್ತಿಸುವುದು ಹೇಗೆ ಗೊತ್ತೇ? ಬೆಂಗಳೂರಿನ ಸ್ಟಾರ್ಟಪ್‌ ಒಂದರ ಸಾಧನೆ

Technology News: ಇಂದಿನ ದಿನಗಳಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚುತ್ತಿರುವ ಕಾರಣದಿಂದ ಜನರು ಎಲೆಕ್ಟ್ರಿಕ್‌ ವಾಹನ ಖರೀದಿಸಬೇಕು ಎಂದು ತುದಿಕಾಲಿನಲ್ಲಿ ನಿಂತಿದ್ದಾರೆ.
12:20 PM Jul 25, 2024 IST | ಸುದರ್ಶನ್
UpdateAt: 12:20 PM Jul 25, 2024 IST
technology news  ನಿಮ್ಮ ಇಂಧನ ಬಳಕೆಯ ಸ್ಕೂಟರನ್ನೇ ಎಲೆಕ್ಟ್ರಿಕ್‌ ಸ್ಕೂಟರಾಗಿ ಪರಿವರ್ತಿಸುವುದು ಹೇಗೆ ಗೊತ್ತೇ  ಬೆಂಗಳೂರಿನ ಸ್ಟಾರ್ಟಪ್‌ ಒಂದರ ಸಾಧನೆ
Advertisement

Technology News: ಇಂದಿನ ದಿನಗಳಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚುತ್ತಿರುವ ಕಾರಣದಿಂದ ಜನರು ಎಲೆಕ್ಟ್ರಿಕ್‌ ವಾಹನ ಖರೀದಿಸಬೇಕು ಎಂದು ತುದಿಕಾಲಿನಲ್ಲಿ ನಿಂತಿದ್ದಾರೆ. ಭಾರತದಲ್ಲಿಯೂ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಬಹುತೇಕ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ದುಬಾರಿಯಾದುದರಿಂದ ಜನರು ಖರೀದಿಸಲು ಹಿಂದೆ ಮುಂದೆ ನೋಡುತ್ತಾ ನಿರಾಸೆಯಲ್ಲಿದ್ದಾರೆ.

Advertisement

ಆದರೆ, ಈಗ ಅಂತಹ ಎಲೆಕ್ಟ್ರಿಕ್ ವಾಹನ ಪ್ರಿಯರಿಗೆ ಒಂದು ಗುಡ್ ನ್ಯೂಸ್ ಕಾದಿದೆ. ಈಗ ಬೆಂಗಳೂರಿನಲ್ಲಿರುವ ಸ್ಟಾರ್ಟಪ್‌ ಕಂಪನಿಯೊಂದರಲ್ಲಿ ತಾವು ಪ್ರಸ್ತುತ ಬಳಕೆ ಮಾಡುತ್ತಿರುವ ಇಂಧನ ಬಳಕೆಯ ಸ್ಕೂಟರ್‌ಗಳನ್ನು ಎಲೆಕ್ಟ್ರಿಕ್‌ ಸ್ಕೂಟರ್‌ ಆಗಿ ಪರಿವರ್ತಿಸುವ ಸುವರ್ಣವಕಾಶವನ್ನು ಬೆಂಗಳೂರಿನ ಸ್ಟ್ರಾಟ್ಅಪ್ ಕಂಪೆನಿ ಆರಂಭಿಸಿದೆ.

Rajasthan: ಕಾಂಗ್ರೆಸ್ ಜಾರಿಗೊಳಿಸಿದ್ದ ಎರಡು ಉಚಿತ ಯೋಜನೆಗಳನ್ನು ರದ್ದು ಮಾಡಿದ ಬಿಜೆಪಿ ಸರ್ಕಾರ- ಇನ್ಮುಂದೆ ರಾಜ್ಯದ ಜನತೆಗೆ ಸಿಗೋಲ್ಲ ಈ 2 ಫ್ರೀ ಸ್ಕೀಮ್ !!

Advertisement

ಈ ಸಿಹಿಸುದ್ದಿಯ ಮೂಲಕ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಲಾಗದವರು ತಮ್ಮಲ್ಲಿರುವ ಇಂಧನ ಬಳಕೆಯ ಸ್ಕೂಟರನನ್ನು ಎಲೆಕ್ಟ್ರಿಕ್‌ ಸ್ಕೂಟರ್‌ ಆಗಿ ಬದಲಾಯಿಸಿಕೊಳ್ಳಬಹುದು. ಎಲೆಕ್ಟ್ರಿಕ್ ವಾಹನ ಪ್ರಿಯರು ಈ ಸಿಹಿ ಸುದ್ದಿ ಸದುಪಯೋಗ ಪಡಿಸಿಕೊಂಡರೆ ಉತ್ತಮ. ಇದರಿಂದ ನಮ್ಮ ದೇಶದ ಇಂಜೆನಿಯರ್ ಗಳಿಗೆ ಬಹುಬೇಡಿಕೆ ಹೆಚ್ಚಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹೊಸ ಹೊಸ ಸ್ಟ್ರಾಟ್ ಅಪ್ ಗಳು ಜನರಿಗೆ ಅನುಕೂಲ ಮಾಡಿಕೊಟ್ಟರೆ ನಮ್ಮ ದೇಶ ಭಾರತ ಮುಂದುವರಿಯುವರಿತ್ತಿರುವ ರಾಷ್ಟ್ರ ಎನ್ನುವುದಕ್ಕೆ ಅಡೆತಡೆ ಇರುವುದಿಲ್ಲ.

2018ರಲ್ಲಿ ಸ್ಟಾರ್ಯಾ ಎಂಬ ಕಂಪೆನಿ ಓಪನ್ ಆಗಿದ್ದು ಇದು ಪೆಟ್ರೋಲ್ ಬಳಕೆಯ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸುತ್ತಿದೆ. ರವಿಕುಮಾರ್‌ ಜಗನ್ನಾಥ ಎನ್ನುವವರು ಈ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ.

ಸ್ಟಾಯ್ರ್ಯಾ ಕಂಪೆನಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸಮತಟ್ಟಾದ ರಸ್ತೆಯಲ್ಲಿ ಗಂಟೆಗೆ 85 ಕಿ.ಮೀ ವೇಗದಲ್ಲಿ ಓಡುತ್ತದೆ. ಇದರಲ್ಲಿ 21 ವೋಲ್ಟ್ ಬ್ಯಾಟರಿ ಬಳಸಲಾಗುತ್ತಿದೆ. ಸ್ಟಾರ್ಯಾ ಸಂಸ್ಥೆಯು ತಂತ್ರಜ್ಞಾನ ವಿಚಾರದಲ್ಲಿ 4 ಪೇಟೆಂಟ್‌ ಪಡೆದಿದೆ. ಹಳೆಯದಾದ ಬಜಾಜ್ ಚೇತಕ್, ಹೋಂಡಾ ಕೆನೆಟಿಕ್ ನಂತಹ ವಾಹನಗಳನ್ನು ಬಿಟ್ಟು ಉಳಿದೆಲ್ಲಾ ಬಹುತೇಕ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರ್ಗಳನ್ನಾಗಿ ಪರಿವರ್ತಿಸುತ್ತಿದೆ.

Advertisement
Advertisement
Advertisement