For the best experience, open
https://m.hosakannada.com
on your mobile browser.
Advertisement

Rajastan: ನ್ಯಾಯಕ್ಕಾಗಿ ಗ್ಯಾಂಗ್ ರೇಪ್ ಸಂತ್ರಸ್ತೆಯ ಹೋರಾಟ - ಬಟ್ಟೆ ಬಿಚ್ಚು ಎಂದ ಜಡ್ಜ್ !!

07:20 PM Apr 04, 2024 IST | ಸುದರ್ಶನ್ ಬೆಳಾಲು
UpdateAt: 07:20 PM Apr 04, 2024 IST
rajastan  ನ್ಯಾಯಕ್ಕಾಗಿ ಗ್ಯಾಂಗ್ ರೇಪ್ ಸಂತ್ರಸ್ತೆಯ ಹೋರಾಟ   ಬಟ್ಟೆ ಬಿಚ್ಚು ಎಂದ ಜಡ್ಜ್

Rajasthan: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಮುಗಿಯದ ಅಧ್ಯಾಯವಾಗಿದೆ. ದಿನಕ್ಕೊಂದು ಇಂತಹ ಅಘಾತಕಾರಿ ಘಟನೆಗಳ ಬಗ್ಗೆ ಕೇಳುತ್ತಿರುವುದು ನಿಜಕ್ಕೂ ವಿಷಾದನೀಯ. ಹೀಗೆ ಅತ್ಯಾಚಾರಕ್ಕೊಳಗಾದ ಎಷ್ಟೋ ಸಂತ್ರಸ್ತೆಯರು ಕುಗ್ಗಿ ಹೋಗಿದ್ದಾರೆ. ಕೆಲವರು ಸೆಟೆದು ನಿಂತು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬ ಮಹಿಳೆಯೂ ಕೂಡ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಧೃತಿಗೆಡದೆ ಧೈರ್ಯದಿಂದ ನ್ಯಾಯಕ್ಕಾಗಿ ಹೋರಾಡಲು ಸಿದ್ಧಳಾಗಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಆದರೆ ಆರಂಭದಲ್ಲೇ ಆಕೆಗೆ ದೊಡ್ಡ ಆಘಾತ ಎದುರಾಗಿದೆ.

Advertisement

ಹೌದು, ರಾಜಸ್ಥಾನದ(Rajastan) ಜೈಪುರದಲ್ಲಿ ಹಿಂದ್ವಾನಿ ಸಿಟಿ(Hindwani) ಆವರಣದಲ್ಲಿನ ದಲಿತ ಮಹಿಳೆ ಮೇಲೆ ಮಾರ್ಚ್ 30ರ ಸಂಜೆ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಕಾಮುಕರು ದಲಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸಾಮೂಹಿತ ಅತ್ಯಾಚಾರ(Gang Rape) ಕ್ಕೊಳಗಾದ ದಲಿತ ಮಹಿಳೆಯೊಬ್ಬಳು ಮಾನಸಿಕ, ದೈಹಿಕವಾಗಿ ಆಘಾತಕ್ಕೊಳಗಾಗಿದ್ದರು ತನ್ನ ಮೇಲೆರಗಿ ಕಾಮ ತೃಷೆ ತೀರಿಸಿಕೊಂಡವರ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಹಿಂದ್ವಾನ್ ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್‌ ಮೆಟ್ಟಿಲೇರಿದ್ದಾಳೆ. ಆದರೆ ಜಿಲ್ಲಾ ನ್ಯಾಯಾಲಯದ ಜಡ್ಜ್ ಮುಂದೆ ಹೇಳಿಕೆ ದಾಖಲಿಸಲು ತೆರಳಿದ ಮಹಿಳೆಗೆ ಆಘಾತವಾಗಿದೆ. ಏನೆಂದರೆ ದೇಹದ ಗಾಯದ ಗುರುತು ಪರಿಶೀಲಿಸಲು ಮಹಿಳೆಗೆ ನ್ಯಾಯಾದೀಶರೇ ಬಟ್ಟೆ ಬಿಚ್ಚಲು ಹೇಳಿದ ಘಟನೆ ನಡೆದಿದೆ.

ಅಂದಹಾಗೆ ಜಡ್ಜ್ ಮುಂದೆ ಹೇಳಿಕೆ ದಾಖಲಿಸಿ ಹೊರಬಂದ ಮಹಿಳೆಯನ್ನು ಮತ್ತೆ ಕರೆಸಿಕೊಳ್ಳಲಾಗಿದೆ. ಈ ವೇಳೆ ರೇಪ್ ನಡೆದಾಗ ದೇಹದ ಮೇಲೆ ಆಗಿರುವ ಗಾಯವನ್ನು ಪರಿಶೀಲಿಸಬೇಕು ಎಂದ ಜಡ್ಜ್ ಬಟ್ಟೆ ಬಿಚ್ಚಲು ಹೇಳಿದರು. ನಾನು ಬಟ್ಟೆ ಬಿಚ್ಚಲು ನಿರಾಕರಿಸಿದೆ. ಮಹಿಳಾ ಸಿಬ್ಬಂದಿಗಳಿದ್ದರೆ ನಾನು ಬಚ್ಚೆ ಬಿಚ್ಚಿ ಗಾಯದ ಗುರುತು ತೋರಿಸುತ್ತಿದ್ದೆ, ಆದರೆ ಜಡ್ಜ್ ಮುಂದೆ ಗಾಯದ ಗುರುತು ತೋರಿಸಲು ನಿರಾಕರಿಸಿದ್ದೇನೆ ಎಂದು ಸಂತ್ರಸ್ತ ಮಹಿಳೆ ಎಫ್ಐಆರ್‌ನಲ್ಲಿ ಹೇಳಿದ್ದಾರೆ. ಸದ್ಯ ಇದೀಗ ಜಡ್ಜ್ ವಿರುದ್ಧ ಸೆಕ್ಷನ್ 345ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭಿಸಿದ್ದಾರೆ.

Advertisement

Advertisement
Advertisement
Advertisement