ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

New Rule: ಜು.1 ರಿಂದ ಹೊಸ ಅಪರಾಧ ಕಾನೂನುಗಳು ಜಾರಿ! ಕೇಂದ್ರದಿಂದ ಜಾರಿ!

New Rule: ಹೊಸ ಅಪರಾಧ ಕಾನೂನುಗಳ ಹಿಡಿತಕ್ಕೆ ಬಹುತೇಕ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಆನ್ಸೆನ್ ತರಗತಿ ನಡೆಸಿ ಕಾನೂನು ಜಾರಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
09:35 AM May 27, 2024 IST | ಕಾವ್ಯ ವಾಣಿ
UpdateAt: 09:35 AM May 27, 2024 IST
Advertisement

New Rule: ಜುಲೈ 1ರಿಂದ ಮೂರು ಹೊಸ ಅಪರಾಧ (New Rule) ಕಾನೂನುಗಳು ದೇಶದೆಲ್ಲೆಡೆ ಜಾರಿಯಾಗಲಿದ್ದು, ಅವುಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಲು ಪೊಲೀಸರಿಗೆ ತರಬೇತಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ.

Advertisement

ಇದನ್ನೂ ಓದಿ: Aadhar Card Update: ನಿಮ್ಮಲ್ಲಿರುವ ಹಳೆಯ ಆಧಾರ್‌ ಜೂನ್‌ 14 ರ ನಂತರ ಅಮಾನ್ಯಗೊಳ್ಳಲಿದೆಯೇ? UIDAI ಹೇಳಿಕೆ ಇಲ್ಲಿದೆ

ಹೌದು, ಹೊಸ ಅಪರಾಧ ಕಾನೂನುಗಳ ಹಿಡಿತಕ್ಕೆ ಬಹುತೇಕ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಆನ್ಸೆನ್ ತರಗತಿ ನಡೆಸಿ ಕಾನೂನು ಜಾರಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

Advertisement

ಇದನ್ನೂ ಓದಿ: Bank Holiday : ಜೂನ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 10 ದಿನ ರಜೆ !!

ಅಲ್ಲದೇ ಕ್ರಾಂತಿಕಾರಕ ಕಾನೂನು ಎಂದೇ ಹೇಳಲಾಗುವ ಮೂರು ಕಾಯ್ದೆಗಳ ಪರಿಣಾಮಕಾರಿ ಜಾರಿಗೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು, ಹಿಂದಿನ ಭಾರತೀಯ ದಂಡ ಸಂಹಿತೆ ಐಪಿಸಿ 1860, ಅಪರಾಧ ದಂಡ ಸಂಹಿತೆ- 1973, ಭಾರತೀಯ ಸಾಕ್ಷ್ಯ ಕಾಯಿದೆ -1872ಕ್ಕೆ ಬದಲಾಗಿ ಹೊಸದಾಗಿ ಭಾರತೀಯ ನ್ಯಾಯ ಸಂಹಿತೆ(BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮ ಕಾಯ್ದೆಗಳು ಜಾರಿಗೆ ಬರಲಿವೆ.

ಸದ್ಯ ಮೂಲ ಕಾಯ್ದೆಗಳಲ್ಲಿದ್ದ ಅಂಶಗಳನ್ನೇ

ಹೊಸ ಕಾಯ್ದೆಯಲ್ಲಿ ಸೇರ್ಪಡೆ ಮಾಡಿದ್ದರೂ ಬದಲಾವಣೆಗೆ

ಅನುಗುಣವಾಗಿ ಹೊಸ ಅಂಶಗಳನ್ನು

ಸೇರಿಸಲಾಗಿದೆ. ಹೊಸ ಕಾಯ್ದೆಗಳ

ಜಾರಿಗೆ ಸಂಪೂರ್ಣ ಹೊಣೆ ಪೊಲೀಸರ ಮೇಲಿದೆ. ಹೀಗಾಗಿ ಗೃಹ ಸಚಿವಾಲಯ ಈ ಮೊದಲೇ ಎಲ್ಲಾ ರಾಜ್ಯಗಳಿಗೆ ಕಾನೂನುಗಳ ಬಗ್ಗೆ ಪೊಲೀಸರು ಮತ್ತು ಕಾರಾಗೃಹ ಸಿಬ್ಬಂದಿಗೆ ಜಾಗೃತಿ ಮೂಡಿಸಲು ಸೂಚನೆ ನೀಡಿದ್ದು, ರಾಜ್ಯಗಳು ಕೂಡ ಅನುಷ್ಠಾನಕ್ಕೆ ಸಜ್ಜಾಗುತ್ತಿವೆ.

Related News

Advertisement
Advertisement