For the best experience, open
https://m.hosakannada.com
on your mobile browser.
Advertisement

i Phone: ಈಕೆಗೆ 20 ಜನ ಲವ್ವರ್‌; ಪ್ರತಿಯೊಬ್ಬರಿಂದ ಪಡೆದ್ಳು ಒಂದೊಂದು ಐಫೋನ್‌; ನಂತರ ಫೋನ್ ಮಾರಿ ಮಾಡಿದ್ದೇನು?‌ ಗೊತ್ತೇ?

i Phone: 20 ಬಾಯ್‌ ಫ್ರೆಂಡ್‌ಗಳಿಂದ ಐಫೋನ್‌ಗಳನ್ನು ಗಿಫ್ಟ್ (i phone gift) ರೂಪದಲ್ಲಿ ಪಡೆದುಕೊಂಡು, ಮಾಯವಾಗಿದ್ದಾಳೆ. ಅರೆ! ಐಪೋನ್ ಲವ್ವರ್ ಪ್ಲಾನ್ ಏನಿದು ನೋಡೋಣ ಬನ್ನಿ.
03:27 PM Jul 09, 2024 IST | ಕಾವ್ಯ ವಾಣಿ
UpdateAt: 03:27 PM Jul 09, 2024 IST
i phone  ಈಕೆಗೆ 20 ಜನ ಲವ್ವರ್‌  ಪ್ರತಿಯೊಬ್ಬರಿಂದ ಪಡೆದ್ಳು ಒಂದೊಂದು ಐಫೋನ್‌  ನಂತರ ಫೋನ್ ಮಾರಿ ಮಾಡಿದ್ದೇನು ‌ ಗೊತ್ತೇ
Advertisement

i Phone Gift: ನೀವು ಈ ರೀತಿಯು ಮೋಸ ಹೋಗೋ ಚಾನ್ಸ್ ಇದೆ. ಸ್ವಲ್ಪ ಹುಷಾರಾಗಿರಿ. ಹೌದು, ಇಲ್ಲೊಬ್ಬಳು ಚಾಲಾಕಿ ತನ್ನ 20 ಬಾಯ್‌ ಫ್ರೆಂಡ್‌ಗಳಿಂದ ಐಫೋನ್‌ಗಳನ್ನು ಗಿಫ್ಟ್ (i phone gift) ರೂಪದಲ್ಲಿ ಪಡೆದುಕೊಂಡು, ಮಾಯವಾಗಿದ್ದಾಳೆ. ಅರೆ! ಐಪೋನ್ ಲವ್ವರ್ ಪ್ಲಾನ್ ಏನಿದು ನೋಡೋಣ ಬನ್ನಿ.

Advertisement

ಸೋಶಿಯಲ್ ಮೀಡಿಯಾದಲ್ಲಿ ಕಳ್ಳತನ, ಅಪಘಾತಾ ಸಂಬಂಧ ಇತರೆ ಮಾಹಿತಿ ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಅಂತೆಯೇ @tech_grammm ಎಂಬ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದ್ದು, ಯುವತಿಯೊಬ್ಬಳು ತನ್ನ 20 ಬಾಯ್‌ಫ್ರೆಂಡ್‌ಗಳಿಂದ ಐಫೋನ್‌ಗಳನ್ನು ಗಿಫ್ಟ್ (i phone gift) ರೂಪದಲ್ಲಿ ಪಡೆದುಕೊಂಡಿದ್ದಾಳೆ. ಗೆಳೆಯರಿಂದ ಪಡೆದ ಐಫೋನ್‌ಗಳನ್ನು ಮಾರಾಟ ಮಾಡಿ ಮನೆ ಖರೀದಿಸಿದ್ದಾಳೆ (House Purchase) ಎನ್ನುವ  ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ.

ಈ ಪೋಸ್ಟ್ 171 ಮಿಲಿಯನ್‌ ವ್ಯೂವ್ ಪಡೆದುಕೊಂಡಿದ್ದು, 1,60,000ಕ್ಕೂ ಅಧಿಕ ಬಾರಿ ಶೇರ್ ಆಗಿದೆ. ನೂರಾರು ನೆಟ್ಟಿಗರು ಈ ಪೋಸ್ಟ್‌ಗೆ ಕಮೆಂಟ್ ಸಹ ಮಾಡಿದ್ದಾರೆ. ಈ ಪ್ರೀತಿ ಅನ್ನೋದು ಹೀಗೇನೆ ತಾನೇ. ಪ್ರೀತಿಗೆ ಕಣ್ಣಿಲ್ಲ ಹಾಗೇನೇ ಪ್ರೀತಿಗೆ ಬೆಲೆ ಕಟ್ಟೋಕಾಗಲ್ಲ ಅಂದು ನಕ್ಕಿದ್ದಾರೆ.

Advertisement

ಜೊತೆಗೆ ನಿಜವಾಗಿ ಪ್ರೀತಿಸುವವರಿಗೆ ಇಂದು ಕಿಂಚಿತ್ತು ಬೆಲೆ ಇಲ್ಲ ಅನ್ನೋದು ಇದರಿಂದಲೇ ಗೊತ್ತಾಗುತ್ತೆ ಅಂತ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬಹುತೇಕರು ಯುವತಿಯ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಯುವತಿ ಕುರಿತಾದ ಪೋಸ್ಟ್‌ನ್ನು @tech_grammm ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಚೀನಾದ ಬ್ಲಾಗರ್ ಪ್ರೌಡ್‌ ಕಿಯಾಬಾ (Qiaoba) ಎಂಬವರು ಯುವತಿಯ ಕಥೆಯನ್ನು ರಿವೀಲ್ ಮಾಡಿದ್ದರು.  ಕ್ಷಿಯೋಲಿ (Xiaoli) ಎಂಬ ಯುವತಿ ಬ್ಲಾಗರ್ ಪ್ರೌಡ್‌ ಕಿಯಾಬಾ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಳು. ಸ್ನೇಹಿತರ ಮನವೊಲಿಸಿ ಹೇಗೆ ಐಫೋನ್ ಪಡೆದುಕೊಂಡೆ ಎಂಬ ವಿಚಾರವನ್ನು ಈಕೆ ಜೊತೆ ಕ್ಷಿಯೋಲಿ ಹೇಳಿಕೊಂಡಿದ್ದಳು. ನಂತರ ಐಫೋನ್ ಮಾರಾಟ ಮಾಡಿದ್ದರಿಂದ ಮನೆಯೊಂದರ ಖರೀದಿಗೆ ಬೇಕಾಗುವಷ್ಟು ಡೌನ್‌ ಪೇಮೆಂಟ್ ಹಣವನ್ನು ಪಡೆದುಕೊಂಡಿದ್ದಳು ಎಂದು ಬ್ಲಾಗರ್ ಹೇಳಿದ್ದರು.

ಯುವತಿ ಕ್ಷಿಯೋಲಿ ಎಲ್ಲಾ 20 ಐಫೋನ್ ಮಾರಾಟ ಮಾಡಿ $17,815 (14 ಲಕ್ಷ 87 ಸಾವಿರದ 93 ರೂಪಾಯಿಗಳು) ಹಣ ಪಡೆದುಕೊಂಡಿದ್ದು, ಯುವತಿ ಕ್ಷಿಯೋಲಿ ಬಡ ಕುಟುಂಬದಿಂದ ಬಂದ ಕಾರಣ, ಮನೆ ಖರೀದಿಗಾಗಿ ಈ ಮಾರ್ಗವನ್ನು ಯುವತಿ ಆಯ್ಕೆ ಮಾಡಿಕೊಂಡಿದ್ದಳು ಎಂದು ಬ್ಲಾಗರ್ ಹೇಳಿದ್ದಾರೆ.

Advertisement
Advertisement
Advertisement