ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Free Sewing Machine: ಮಹಿಳೆಯರಿಗೆ ಸಿಹಿ ಸುದ್ದಿ- ಉಚಿತ ಹೊಲಿಗೆ ಯಂತ್ರ ವಿತರಣೆಗೆ ಮುಂದಾದ ಸರ್ಕಾರ, ತಕ್ಷಣ ಹೀಗೆ ಅರ್ಜಿ ಹಾಕಿ

04:40 PM Dec 26, 2023 IST | ಅಶ್ವಿನಿ ಹೆಬ್ಬಾರ್
UpdateAt: 04:40 PM Dec 26, 2023 IST
Advertisement

Free Sewing Machine Scheme 2023: ಸರ್ಕಾರ ಗ್ರಾಮೀಣ ಕುಶಲಕರ್ಮಿ, ಗುಡಿ ಕೈಗಾರಿಕೆಯನ್ನು ಬೆಂಬಲಿಸುವ ಸಲುವಾಗಿ ಉಚಿತ ಹೊಲಿಗೆ ಯಂತ್ರ (Free Sewing Machine Scheme 2023) ಯೋಜನೆಯನ್ನು ರೂಪಿಸಿದೆ. ಇದರ ಜೊತೆಗೆ ಉಚಿತವಾಗಿ ಸುಧಾರಿತ ಉಪಕರಣಗಳನ್ನು ಪಡೆಯಲು ಬಯಸಿದರೆ ನಿಮಗೆ ಮುಖ್ಯ ಮಾಹಿತಿ ಇಲ್ಲಿದೆ.

Advertisement

 

2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ವೃತ್ತಿನಿರತ ಗ್ರಾಮೀಣ ಕುಶಲಕರ್ಮಿ/ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡಿರುವ(Free Sewing Machine Scheme In Karnataka) ಅರ್ಹ ಅಭ್ಯರ್ಥಿಗಳು ತಮ್ಮ ವೃತ್ತಿ ಮುಂದುವರೆಸಿಕೊಂಡು ಹೋಗಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸೌಲಭ್ಯವನ್ನು ಪಡೆಯಲು ಬಯಸುವವರು ಆನ್‌ಲೈನ್‌ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Advertisement

 

ಯೋಜನೆ 1: ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ: (Holige Yantra Scheme)

ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ವಿದ್ಯುತ್ ಚಾಲಿತ ಮರಗೆಲಸ, ದೋಬಿ, ಗಾರೆಕೆಲಸ, ಕಮ್ಮಾರಿಕೆ, ಕ್ಷೌರಿಕ ಮತ್ತು ವಿದ್ಯುತ್‌ ಚಾಲಿತ ಹೊಲಿಗೆಯಂತ್ರ (Free Sewing Machine Scheme) ಉಪಕರಣಗಳನ್ನು ಪಡೆಯಲು ಅವಶ್ಯಕ ದಾಖಲೆಗಳು ಹೀಗಿವೆ

 

# ಪಾಸ್ಪೋರ್ಟ್ ಗಾತ್ರದ ಭಾವಚಿತ್ರ

# ಜಾತಿ ಪ್ರಮಾಣ ಪತ್ರ

# ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ

# ರೇಷನ್ ಕಾರ್ಡ್/ ವೋಟರ್ ಐ.ಡಿ ಹೊಂದಿದ್ದಲ್ಲಿ ಪ್ರತಿ ಲಗತ್ತಿಸಬೇಕು.

# ಮರಗೆಲಸ, ಗಾರೆಕೆಲಸ, ಕ್ಷೌರಿಕ ಹಾಗೂ ಧೋಬಿ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ಧೃಡೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ

 

ಯೋಜನೆ 2: ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ (Subsidy) ಯೋಜನೆಯಡಿ ಸಹಾಯಧನ ಪಡೆಯಲು ಅಗತ್ಯ ದಾಖಲೆಗಳು ಹೀಗಿವೆ:

#ಪಾಸ್ಪೋರ್ಟ್ ಗಾತ್ರದ ಭಾವಚಿತ್ರ

# ಜಾತಿ ಪ್ರಮಾಣ ಪತ್ರ

# ಬ್ಯಾಂಕ್ ಪಾಸ್ ಪುಸ್ತಕ

# ನಿಗದಿತ ನಮೂನೆಯಲ್ಲಿ ಬ್ಯಾಂಕ್‌ನಿಂದ ಸಾಲ ಮಂಜೂರಾತಿ/ಬಿಡುಗಡೆಯಾಗಿರುವ ಪತ್ರ ಬೇಕಾಗುತ್ತದೆ.

 

ಯೋಜನೆ 3: ಕುಶಲ ಕರ್ಮಿಗಳಿಗೆ ಬಡ್ಡಿ ಸಹಾಯಧನ

ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಲು ಈ ದಾಖಲೆಗಳು ಬೇಕಾಗುತ್ತವೆ.

 

# ಪಾಸ್ಪೋರ್ಟ್ ಗಾತ್ರದ ಭಾವಚಿತ್ರ

# ಜಾತಿ ಪ್ರಮಾಣ ಪತ್ರ

# ಬ್ಯಾಂಕ್ ಪಾಸ್ ಪುಸ್ತಕ

# ನಿಗದಿತ ನಮೂನೆಯಲ್ಲಿ ಬ್ಯಾಂಕಿನಿಂದ ಸಾಲ ಮಂಜೂರಾತಿ ಹಾಗೂ ಬಿಡುಗಡೆಯಾಗಿರುವ ಪತ್ರ

# ಉದ್ಯಮ ನೋಂದಣಿ ಪತ್ರ

# ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಿಗಿ ಪತ್ರ

# ಬ್ಯಾಂಕಿನಿಂದ ಬಡ್ಡಿ ಸಹಾಯಧನದ ನಮೂನೆ ಪತ್ರ

ಹೆಚ್ಚಿನ ಮಾಹಿತಿಗಾಗಿ ಸಂಬಂದಪಟ್ಟ ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳು/ ಉಪ ನಿರ್ದೇಶಕರ ಕಛೇರಿ, ಗ್ರಾಮೀಣ ಕೈಗಾರಿಕೆಗಳು (ಖಾದಿ ಮತ್ತು ಗ್ರಾಮೋದ್ಯೋಗ), ಇವರನ್ನು ಸಂಪರ್ಕಿಸಬಹುದು.

Related News

Advertisement
Advertisement