For the best experience, open
https://m.hosakannada.com
on your mobile browser.
Advertisement

Free Ration: ರೇಷನ್ ಕಾರ್ಡ್'ದಾರರಿಗೆ ಇನ್ಮುಂದೆ ಕಾಂಡೋಮ್ ಸೇರಿ ಈ 46 ವಸ್ತು ಉಚಿತ !

Free Ration: ಮೋದಿ ಕೇಂದ್ರ ಸರ್ಕಾರದ (Central Government) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ದೇಶದಾದ್ಯಂತ ಇರುವ ಪ್ರತಿ ಕುಟುಂಬಕ್ಕೂ ಕೂಡ ಪಡಿತರ ಚೀಟಿಯನ್ನು (Ration Card) ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ.
08:15 AM May 11, 2024 IST | ಸುದರ್ಶನ್ ಬೆಳಾಲು
UpdateAt: 08:17 AM May 11, 2024 IST
free ration  ರೇಷನ್ ಕಾರ್ಡ್ ದಾರರಿಗೆ ಇನ್ಮುಂದೆ ಕಾಂಡೋಮ್ ಸೇರಿ ಈ 46 ವಸ್ತು ಉಚಿತ
Advertisement

Free Ration: ಮೋದಿ ಕೇಂದ್ರ ಸರ್ಕಾರದ (Central Government) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ದೇಶದಾದ್ಯಂತ ಇರುವ ಪ್ರತಿ ಕುಟುಂಬಕ್ಕೂ ಕೂಡ ಪಡಿತರ ಚೀಟಿಯನ್ನು (Ration Card) ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದ ಕುಟುಂಬಗಳನ್ನು ಗುರುತಿಸಿ APL / BPL / AAY ಎನ್ನುವ 3 ಮಾದರಿಯ ಪಡಿತರ ಚೀಟಿಯನ್ನು ಜನರಿಗೆ ನೀಡುತ್ತಿದೆ. ಜತೆಗೆ ಈ ಪಡಿತರ ವ್ಯವಸ್ಥೆಗೆ ರಾಜ್ಯ ಸರ್ಕಾರದ (State government) ಸಹಭಾಗಿತ್ವ ಕೂಡಾ ಇದೆ.

Advertisement

ಈ ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ವಿಶೇಷ ಸವಲತ್ತುಗಳನ್ನು ಪಡಿತರ ಚೀಟಿ ಮೂಲಕ ನೀಡುತ್ತಿವೆ. ಪಡಿತರ ಚೀಟಿಯ ಮುಖ್ಯ ಉದ್ದೇಶವು ಪ್ರತಿ ತಿಂಗಳು ಕುಟುಂಬಗಳಿಗೆ ಉಚಿತವಾಗಿ ಮತ್ತು ಕನಿಷ್ಠ ಬೆಲೆಗೆ ತಿಂಗಳ ಬಳಕೆಯ ಆಹಾರ ಧಾನ್ಯಗಳನ್ನು ನೀಡುವುದಾಗಿದೆ.

ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅಪರೂಪದ ದಾಖಲೆ; ನಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಆಟಗಾರ

Advertisement

ಈಗ ಕೇಂದ್ರ ಸರ್ಕಾರದ ಕಡೆಯಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆ ಕಾಳು ಮುಂತಾದ ಧಾನ್ಯಗಳು ವಿತರಣೆ ಆಗುತ್ತಿವೆ. 'ಒನ್ ನೇಶನ್ ಒಂದೇ ರೇಷನ್' ಕಾನ್ಸೆಪ್ಟ್ ನಡಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತನ್ನ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಈಗ ಲಭ್ಯ ಆಗುತ್ತಿದೆ. ಇದು ಔದ್ಯೋಗಿಕ ಕಾರಣದಿಂದ ಊರೂರು ಹೋಗಬೇಕಾದ ಜನರಿಗೆ ಅನುಕೂಲ ಆಗುತ್ತಿದೆ.

ಇನ್ನು ಕರ್ನಾಟಕದ ಕಾಂಗ್ರೆಸ್ ಪಕ್ಷವು (Congress Party) ತನ್ನ ಗ್ಯಾರಂಟಿಗಳಲ್ಲಿ (Annabhagya gyaranty Scheme ) ಒಂದಾಗಿ ಅನ್ನಬಾಗ್ಯ ಯೋಜನೆಯ ವಿಷಯವನ್ನು ಕೂಡ ಸೇರಿಸಲಾಗಿತ್ತು. ಅಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೇಂದ್ರದಿಂದ ನೀಡುತ್ತಿರುವ 5 Kg ಪಡಿತರವನ್ನು 10 Kgಗೆ ಏರಿಸಲಾಗುವುದು ಎನ್ನುವ ಭರವಸೆ ನೀಡಿದ್ದ ಪ್ರಕಾರ ಇಂದು ಪ್ರತಿ ಸದಸ್ಯನಿಗೂ ಈಗ 10 KG ಪಡಿತ ನೀಡಲಾಗುತ್ತಿದೆ. ಪಡಿತರದ ಸ್ಟಾಕ್ ಕೊರತೆ ಇದ್ದುದರಿಂದ 5 KG ಅಕ್ಕಿ ಕೊಟ್ಟು, ಬಾಕಿ 5 KG ಅಕ್ಕಿ ಬದಲಿಗೆ ಮನೆಯ ಪ್ರತಿ ಸದಸ್ಯನಿಗೆ ರೂ.170 ರಂತೆ ಆ ಕುಟುಂಬದ ಮುಖ್ಯಸ್ಥನ ಖಾತೆಗೆ DBT ಮೂಲಕ ವರ್ಗಾವಣೆ ಶುರು ಮಾಡಲಾಗಿದೆ.

ಈಗ ಇನ್ನೊಂದು ಮಹತ್ವದ ಯೋಜನೆಗೆ ದೇಶದ ಮತ್ತೊಂದು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸ್ಕೀಂ ದೇಶದ ಎಲ್ಲರ ಗಮನ ಸೆಳೆದಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರವು (U.P Government) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಪಡಿತರದಲ್ಲಿ ಅಕ್ಕಿ,ರಾಗಿ, ಗೋಧಿ ಜೊತೆಗೆ ಇನ್ನು 46 ವಸ್ತುಗಳನ್ನು ಉಚಿತ ಹಂಚಲು ಪಟ್ಟಿ ತಯಾರಿಸಿದೆ. ಆ ಪಟ್ಟಿ ಪ್ರಕಾರ ಯಾವೆಲ್ಲಾ ವಸ್ತುಗಳು ಅಲ್ಲಿವೆ ಎನ್ನುವುದರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ.

ಆಯಾ 46 ವಸ್ತುಗಳು:
* ಕಾಫಿ, ಹಾಲು ಮತ್ತು ಹಾಲಿನ ಪ್ಯಾಕೆಟ್‌ಗಳು
* ಟೂತ್‌ಪೇಸ್ಟ್
* ನಮ್ಕೀನ್
* ಬಿಸ್ಕತ್ತುಗಳು
* ಬ್ರೆಡ್
* ಒಣ ಹಣ್ಣುಗಳು
* ಮಸಾಲೆಗಳು
* ಟೀ ಪ್ಯಾಕೆಟ್‌ಗಳು
* ಶಾಂಪೂ
* ಸೋಪು
* ಆಡಳಿತ ಸಾಮಗ್ರಿಗಳು
* ರಾಜ್ಮಾ
* ಕ್ರೀಮ್
* ಸೋಯಾ ಬೀನ್
* ಹಾಲು ಎಲೆ
* ಕನ್ನಡಿ
* ಸಿಹಿತಿಂಡಿಗಳು
* ಪ್ಯಾಕ್ ಮಾಡಿದ ಹಾಲಿನ ಪುಡಿ
* ಬೇಬಿ ಬಟ್ಟೆಗಳು
* ಹೊಸೈರಿ. ಉಳಿದ ವಸ್ತುಗಳನ್ನು ಕೆಳಗೆ ನೀಡಲಾಗಿದೆ.

* ಬಾಚಣಿಗೆ
* ವಾಷಿಂಗ್ ಪೌಡರ್
* ಟೂತ್ ಬ್ರಷ್
* ಧೂಪದ್ರವ್ಯ
* 5 KG ಗ್ಯಾಸ್ ಸಿಲಿಂಡರ್
* ಸೊಳ್ಳೆ ಪರದೆ
* ಪಾತ್ರೆ ತೊಳೆಯುವ ಬಾರ್
* ಟಾರ್ಚ್
* ವಿದ್ಯುತ್ ಪರಿಕರಗಳು
* ಗೋಡೆ ಗಡಿಯಾರ
* ಬೆಂಕಿಕಡ್ಡಿಗಳು
* ಬೀಗ
* ಛತ್ರಿ
* ಪೊರಕೆ
* ಮಾಪ್
* ವಾಲ್ ಹ್ಯಾಂಗರ್
* ರೇನ್‌ಕೋಟ್
* ಬೂಟುಗಳು
* ನೈಲಾನ್ / ಪ್ಲಾಸ್ಟಿಕ್ ಹಗ್ಗ
* ನೀರಿನ ಪೈಪ್
* ಖನಿಜಯುಕ್ತ ನೀರು
* ಕೈ ತೊಳೆಯುವುದು
* ಪ್ಲಾಸ್ಟಿಕ್
* ಬಾತ್ರೂಮ್ ಕ್ಲೀನರ್
* ಶೇವಿಂಗ್ ಕ್ರೀಮ್
* ಬೇಬಿ ಕೇರ್ ಉತ್ಪನ್ನಗಳು
* ಸಾಬೂನುಗಳು
* ಡೈಪರ್ಗಳು
* ಮಸಾಜ್ ಎಣ್ಣೆಗಳು
* ಸ್ಯಾನಿಟರಿ ನ್ಯಾಪ್ಕಿನ್ಗಳು
* ಕಾಂಡೋಮ್‌ ಗಳು
* ವೈಬ್ಸ್ ಬಾಡಿ ಲೋಷನ್ ಗಳು.

ಇದನ್ನೂ ಓದಿ: Kantilal Bhuria: ಇಬ್ಬರು ಹೆಂಡತಿ ಇರೋ ಗಂಡನಿಗೆ 2 ಲಕ್ಷ - ಕಾಂಗ್ರೆಸ್ ನಾಯಕನಿಂದ ಗ್ಯಾರಂಟಿ ಘೋಷಣೆ !!

Advertisement
Advertisement
Advertisement