For the best experience, open
https://m.hosakannada.com
on your mobile browser.
Advertisement

Puttur: ಪುತ್ತೂರು: CBI ಕೋರ್ಟ್‌ ದೃಶ್ಯ ಸೃಷ್ಟಿ ಮಾಡಿದ ವಂಚಕರು: ವೈದ್ಯರು ನಂಬಿದ್ದು ಈ ವೀಡಿಯೋ ಕರೆ

Puttur: ಪುತ್ತೂರಿನ ಆಸ್ಪತ್ರೆಯ ವೈದ್ಯರಿಂದ ಲಕ್ಷಾಂತರ ರೂಪಾಯಿ ಹಣ ದೋಚಿದ ಪ್ರಕರಣದಲ್ಲಿ ವಂಚಕರು ಸಿಬಿಐ ಕೋರ್ಟ್‌ ದೃಶ್ಯವನ್ನು ಸೃಷ್ಟಿಸಿ ನಂಬಿಸಿ ಕೃತ್ಯ ಎಸಗಿದ್ದಾರೆ ಎಂದು ವಂಚನೆಗೆ ಒಳಗಾಗಿರುವ ದೂರು ನೀಡಿದ್ದಾರೆ.
08:45 AM Apr 02, 2024 IST | ಸುದರ್ಶನ್
UpdateAt: 08:48 AM Apr 02, 2024 IST
puttur  ಪುತ್ತೂರು  cbi ಕೋರ್ಟ್‌ ದೃಶ್ಯ ಸೃಷ್ಟಿ ಮಾಡಿದ ವಂಚಕರು  ವೈದ್ಯರು ನಂಬಿದ್ದು ಈ ವೀಡಿಯೋ ಕರೆ

Puttur: ಪುತ್ತೂರಿನ ಆಸ್ಪತ್ರೆಯ ವೈದ್ಯರಿಂದ ಲಕ್ಷಾಂತರ ರೂಪಾಯಿ ಹಣ ದೋಚಿದ ಪ್ರಕರಣದಲ್ಲಿ ವಂಚಕರು ಸಿಬಿಐ ಕೋರ್ಟ್‌ ದೃಶ್ಯವನ್ನು ಸೃಷ್ಟಿಸಿ ನಂಬಿಸಿ ಕೃತ್ಯ ಎಸಗಿದ್ದಾರೆ ಎಂದು ವಂಚನೆಗೆ ಒಳಗಾಗಿರುವ ದೂರು ನೀಡಿದ್ದಾರೆ.

Advertisement

ಮಾ.28 ರಂದು ಬೆಳಗ್ಗೆ ಅಪರಿಚಿತ ಸಂಖ್ಯೆಯಿಂದ ವೈದ್ಯರಿಗೆ ಕರೆ ಬಂದಿತ್ತು. ತಾವು ಸಿಬಿಐ ಪೊಲೀಸರೆಂದು ವೈದ್ಯರಿಗೆ ಹೇಳಿದ್ದು, ವೈದ್ಯರ ವಾಟ್ಸಪ್‌ಗೆ ಪಾನ್‌, ಆಧಾರ್‌ ಮತ್ತಿತರ ದಾಖಲೆಗಳ ಫೋಟೋ ಆಸ್ಪತ್ರೆಯ ಚಿತ್ರಗಳನ್ನು ಕಳುಹಿಸಿದ್ದರು. ಈ ಪ್ರಕರಣಕ್ಕೆ ಕುರಿತಂತೆ ಕೆಲವು ದಾಖಲೆಗಳನ್ನು ಕೂಡಾ ಕೊಟ್ಟಿದ್ದರು. ಇದರಿಂದ ತಾನು ಆತಂಕಕ್ಕೆ ಒಳಗಾಗಿ ಹಣ ಪಾವತಿ ಮಾಡಿದೆ ಎಂದು ವೈದ್ಯರು ಪೊಲೀಸರ ಬಳಿ ಹೇಳಿದ್ದರು ಎಂಬ ಮಾಹಿತಿ ವರದಿಯಾಗಿದೆ.

ಅಪರಿಚಿತರು ವೈದ್ಯರ ಅರಿವಿಗೆ ಬಾರದ ಹಾಗೆ ಅವರ ಫೋನ್‌ ಕರೆ ಬ್ಲಾಕ್‌ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಲಸ ಮಾಡುವ ಆಸ್ಪತ್ರೆಯ ಇತರ ಕೆಲವು ವೈದ್ಯರು ಅವರಿಗೆ ಕರೆ ಮಾಡಿದಾಗ "ನಾಟ್‌ ರೀಚಬಲ್‌, ಬ್ಯುಸಿʼ ಎಂಬ ಸಂದೇಶ ಬರುತ್ತಿತ್ತು. ಅರ್ಧ ತಾಸಿನೊಳಗೆ ಮಾತುಕತೆ ನಡೆದು ವೈದ್ಯರು ಹಣ ಪಾವತಿಸಿ ಕೂಡಾ ಆಗಿತ್ತು.

Advertisement

ಇದನ್ನೂ ಓದಿ: Shivaraj K R Pete: ʼಕಾಮಿಡಿ ಕಿಲಾಡಿʼ ಶಿವರಾಜ್‌ ಕೆ ಆರ್‌ ಪೇಟೆ ಮಹಿಳೆ ಜೊತೆ ಅನುಚಿತ ವರ್ತನೆ

ಆದರೆ ಯಾವಾಗ ಎರಡನೇ ಬಾರಿ ಹಣದ ಬೇಡಿಕೆ ಬಂತೋ ಆವಾಗ ವೈದ್ಯರು ತನ್ನ ಆಪ್ತರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಇದು ವಂಚಕರ ಜಾಲ ಆಗಿರಬಹುದು ಎಂದು ಸಲಹೆ ನೀಡಿದ್ದಾರೆ ಜೊತೆಗೆ ಅಪರಿಚಿತ ವ್ಯಕ್ತಿಯು ವಾಟ್ಸ್‌ಪ್‌ ಮೂಲಕ ನೀಡಿದ ಎಲ್ಲಾ ದಾಖಲೆ ಪತ್ರಗಳು ಕೂಡಾ " ಡಿಲೀಟ್‌ ಫಾರ್‌ ಎವರಿ ವನ್‌" ಆಗಿತ್ತು.

ದಿಲ್ಲಿ ಪೊಲೀಸರೆಂದು ನಂಬಿಸಿ ಪುತ್ತೂರಿನ ವೈದ್ಯರಿಂದ 16.5 ಲಕ್ಷ ರೂ. ವರ್ಗಾವಣೆ ಮಾಡಿಸಿದ್ದಾರೆ. ದಿಲ್ಲಿಯಲ್ಲಿ ಮಾದಕ ವಸ್ತು, ಅಕ್ರಮ ಹಣ, ಮಾನವ ಕಳ್ಳಸಾಗಾಟ ಕುರಿತು ಪ್ರಕರಣ ದಾಖಲು ಮಾಡಲಾಗಿದೆ ಎಂದು ನಂಬಿಸಿದ್ದರು. ಬಂಧನ ವಾರೆಂಟ್‌ ಕೂಡಾ ಆಗಿದೆ ಎಂದು ಹೇಳಿಸಿ, ಹಣ ಲೂಟಿ ಮಾಡಿದ್ದರು.

ಈ ವಂಚಕರು ಎಷ್ಟೊಂದು ಚಾಲಾಕಿತನದಿಂದ ಕೆಲಸ ಮಾಡಿದ್ದಾರೆಂದರೆ ನೀವು ದಿಲ್ಲಿಯ ಸಿಬಿಐ ಕೋರ್ಟ್‌ ಗೆ ಹಾಜರಾಗಬೇಕು. ನೀವು ಇಲ್ಲಿಗೆ ಬರಲು ಆಗದಿದ್ದರೆ ಆನ್‌ಲೈನ್‌ ಮೂಲಕ ಕೇಸ್‌ ಮಾಡುತ್ತೇವೆ. ನಂತರ ಇವರು ವೀಡಿಯೋ ಕರೆ ಮಾಡಿ ಸಿಬಿಐ ಪೊಲೀಸರನ್ನು ಹೋಲುವ ವ್ಯಕ್ತಿಗಳನ್ನು ತೋರಿಸಿದ್ದ. ವೀಡಿಯೋ ಕರೆ ಮಾಡಿ ನ್ಯಾಯಾಧೀಶರು ಕುಳಿತಿರುವ ಕೋರ್ಟ್‌ ಸಭಾಂಗಣದ ದೃಶ್ಯಗಳನ್ನು ತೋರಿಸಿದ್ದರು ಎನ್ನಲಾಗಿದೆ. ಇದರಿಂದ ಬೆದರಿದ ಡಾಕ್ಟರ್‌ ಇದೆಲ್ಲ ನಿಜ ಇರಬಹುದು ಎಂದು ವೈದ್ಯರು ಹೇಳಿದ್ದರೆನ್ನಲಾಗಿದೆ.

ಇದನ್ನೂ ಓದಿ: Puttur Fire Incident: ಪುತ್ತೂರು ಹರ್ಷ ಶೋರೂಂ ಗೋದಾಮಿನಲ್ಲಿ ಬೆಂಕಿ ಅನಾಹುತ

Advertisement
Advertisement