ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Fraud: ಎಚ್ಚರ ಜನರೇ ಎಚ್ಚರ...! ನಿಮ್ಮ ದುಡ್ಡು ದೋಚಲು ಹೊಸ ದಾರಿ ಹಿಡಿದ ದುಷ್ಟರು

Fraud: ಯಾವಾಗಲೂ ಒಂದೇ ರೀತಿಯ ವಂಚನೆಯಿಂದ ಜನ ಜಾಗೃತರಾಗಿದ್ದನ್ನು ಮನಗಂಡ ಇಂತವರು ಇದೀಗ ಇನ್ನೊಂದು ದಾರಿಯ ಮೂಲಕ ಯಾಮಾರಿಸಲು ಸಜ್ಜಾಗಿದ್ದಾರೆ. ಅದುವೇ ರಿಜಿಸ್ಟರ್‌ ಪೋಸ್ಟ್‌ ಮೂಲಕ.
11:44 AM Jul 09, 2024 IST | ಸುದರ್ಶನ್
UpdateAt: 11:44 AM Jul 09, 2024 IST
Advertisement

Fraud: ಇತ್ತೀಚೆಗೆ ಸುಲಿಗೆ ಪ್ರಯತ್ನಗಳು ಆನ್‌ಲೈನ್‌ ಮೂಲಕ ಭಾರೀ ಎಗ್ಗಿಲ್ಲದೆ ನಡೆಯುತ್ತಿರುವ ಕುರಿತು ವರದಿಯಾಗುತ್ತಲೇ ಇರುತ್ತದೆ. ಇದೀಗ ಹೊಸದೊಂದು ಪ್ರಯತ್ನಕ್ಕೆ ದುಷ್ಕರ್ಮಿಗಳು ಮಾಡಿದ್ದಾರೆ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡಾ ಇರುತ್ತಾರೆ. ಹಾಗಾಗಿ ಜನರು ಇಂತಹ ಯಾವುದೇ ಆಮಿಷಗಳಿಗೆ ಒಳಗಾಗದೇ ವಂಚನೆಗೊಳಗಾಗಬಾರದು.

Advertisement

ಯಾವಾಗಲೂ ಒಂದೇ ರೀತಿಯ ವಂಚನೆಯಿಂದ ಜನ ಜಾಗೃತರಾಗಿದ್ದನ್ನು ಮನಗಂಡ ಇಂತವರು ಇದೀಗ ಇನ್ನೊಂದು ದಾರಿಯ ಮೂಲಕ ಯಾಮಾರಿಸಲು ಸಜ್ಜಾಗಿದ್ದಾರೆ. ಅದುವೇ ರಿಜಿಸ್ಟರ್‌ ಪೋಸ್ಟ್‌ ಮೂಲಕ.

ಮನೆಯ ವಿಳಾಸಕ್ಕೆ ರಿಜಿಸ್ಟರ್‌ ಪೋಸ್ಟನ್ನು ಕಳುಹಿಸಿ, ಲಕ್ಷಾಂತರ ರೂಪಾಯಿ ಬಂದಿದೆ ಎಂದು ಹೇಳಿ ಮೋಸ ಮಾಡುವ ದಂಧೆ ಶುರುವಾಗಿದೆ. ಈ ಖೆಡ್ಡಾಕ್ಕೆ ಕೆಲವರು ಬಿದ್ದಾಗಿದೆ. ಈ ಕುರಿತು ವ್ಯಕ್ತಿಯೊಬ್ಬರು ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಮಾಹಿತಿ ನೀಡಿದ್ದಾರೆ.

Advertisement

ರಿಜಿಸ್ಟರ್‌ ಪೋಸ್ಟ್‌ ನಿಮ್ಮ ಮನೆಗೆ ಎಲ್ಲಿಂದಲೋ ಬರುತ್ತೆ ಅಂದ್ಕೊಳ್ಳಿ. ಕವರ್‌ ಮೇಲೆ ಬಾರ್‌ ಕೋಡ್‌ ಮುದ್ರಿತವಾಗಿರುತ್ತದೆ. ಕವರ್‌ ಓಪನ್‌ ಮಾಡಿದರೆ ಅದರಲ್ಲಿ ಕೂಪನ್‌ ಇರುತ್ತದೆ.

ಮೀಶೋ ಅಥವಾ ಇನ್ಯಾವುದೋ ಕಂಪನಿದ್ದು. ಅದರಲ್ಲೊಂದು ಅಪ್ಲಿಕೇಶನ್‌ ಇರುತ್ತದೆ. ಈ ಕೂಪನ್‌ನಲ್ಲಿ ಹನ್ನೆರಡು ಲಕ್ಷ ಬಹುಮಾನ ಎಂದು ಇರುತ್ತದೆ. ಬರುವ ಅಪ್ಲಿಕೇಶನ್‌ ಮೀಶೋ ಆನ್ಲೈನ್‌ ಶಾಪಿಂಗ್‌ ಪ್ರೈ ಲಿ. ಹೆಸರಿನಲ್ಲಿ ಅಥವಾ ಇನ್ಯಾವುದೋ ಕಂಪನಿ ಹೆಸರಲ್ಲಿ ಇರಬಹುದು.

ಅಪ್ಲಿಕೇಶನ್‌ ಖಾಲಿ ಇರುತ್ತದೆ. ಕೋಲ್ಕತ್ತಾ ವಿಳಾಸ ಇರುತ್ತದೆ. ಕೂಪನ್‌ ಸ್ಕ್ರ್ಯಾಚ್‌ ಮಾಡಿದರೆ 12,80,000 ಹಣ ಬಂದಿದೆ ಎಂದು ಪ್ರಿಂಟ್‌ ಆಗಿರುತ್ತದೆ. ಇದನ್ನು ತಿಳಿಯಲು ಎಸ್‌ಎಂಎಸ್‌ ಕಳುಹಿಸಿ ಅಥವಾ ಕೂಪನ್‌ ಮೇಲಿರುವ ಸ್ಕ್ಯಾನರ್‌ ಕೋಡನ್ನು ಸ್ಕ್ಯಾನ್‌ ಮಾಡಿ ಎಂದು ಬರೆದಿರಲಾಗಿರುತ್ತದೆ.

ಇದು ವಂಚನೆ ಜಾಲ ಕ್ರಿಮಿನಲ್‌ ನವರದ್ದು ಎಂದು ನೀವು ಅಂದುಕೊಂಡು ಸುಮ್ಮನಾದರೆ ನೀವು ಬಚಾವ್...ದುಡ್ಡಿನ ಆಸೆಗೆ ಬಿದ್ದರೆ ಸ್ಕ್ಯಾನ್‌ ಮಾಡಿದರೆ ಗೋತಾ...ನಿಮ್ಮ GPay ಮತ್ತು PhonePay ಮೂಲಕದ ಎಲ್ಲಾ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಯಾವ ಬ್ಯಾಂಕ್‌ ಅಕೌಂಟ್‌ ನೋಂದಣಿಯಾಗಿದೆಯೋ, ಆ ಖಾತೆಯ ದುಡ್ಡೆಲ್ಲ ಅವರ ಪಾಲಾಗುತ್ತದೆ.

ಹಾಗಾಗಿ ಎಚ್ಚರ ಜನರೇ ಎಚ್ಚರ. ಯಾರೂ ನಮಗೆ ಲಕ್ಷಗಟ್ಟಲೇ ದುಡ್ಡನ್ನು ಸುಮ್ಮನೇ ಕೊಡುವುದಿಲ್ಲ. ಇದನ್ನು ನಂಬಬೇಡಿ, ನಂಬಿ ಮೋಸಹೋಗಬೇಡಿ.

Dakshina Kannada: ಚಾಂದಿನಿ ಚಿಕಿತ್ಸೆ ಪ್ರಕರಣ, ವರದಿ ಸಲ್ಲಿಕೆಗೆ ಸೂಚನೆ

 

Advertisement
Advertisement