For the best experience, open
https://m.hosakannada.com
on your mobile browser.
Advertisement

Kateelu: ಕಟೀಲಿನ 'ಮಹಾಲಕ್ಷ್ಮೀ' ಆನೆ ನೋಡಲು ಸ್ವಿಸರ್ಲ್ಯಾಂಡ್'ನಿಂದ ಸೈಕಲ್ ಏರಿ ಬಂದ ವಿದೇಶಿಗರು !!

09:15 AM Feb 10, 2024 IST | ಹೊಸ ಕನ್ನಡ
UpdateAt: 09:19 AM Feb 10, 2024 IST
kateelu  ಕಟೀಲಿನ  ಮಹಾಲಕ್ಷ್ಮೀ  ಆನೆ ನೋಡಲು ಸ್ವಿಸರ್ಲ್ಯಾಂಡ್ ನಿಂದ ಸೈಕಲ್ ಏರಿ ಬಂದ ವಿದೇಶಿಗರು
Advertisement

Kateelu: ಸೈಕಲ್ ನಲ್ಲೇ ಇಪ್ಪತ್ತೆರಡು ರಾಷ್ಟ್ರಗಳನ್ನು ಸುತ್ತಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನಲ್ಲಿ ಭ್ರಾಹ್ಮರಿಯಾಗಿ ನೆಲೆನಿಂತು, ಭಕ್ತರನ್ನು ಪೊರೆವ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಾಲಕ್ಷ್ಮೀ ಆನೆಯನ್ನು ನೋಡಲು ಇಬ್ಬರು ಪ್ರವಾಸಿಗರು ಸ್ವಿಸರ್ಲ್ಯಾಂಡ್'ನಿಂದ ಆಗಮಿಸಿದ್ದಾರೆ.

Advertisement

ಇದನ್ನೂ ಓದಿ: Government Employee Salary: 8 ನೇ ವೇತನ ಆಯೋಗ ಜಾರಿ ಕುರಿತು ಮಹತ್ವದ ಮಾಹಿತಿ

ಹೌದು, ಕಟೀಲು(Kateelu) ದೇವಳದ ಮಹಾಲಕ್ಷ್ಮೀ(Mahalakshmi) ಆನೆ ಅಂದರೆ ಕರಾವಳಿಗರೆಲ್ಲರಿಗೂ ಅಚ್ಚುಮೆಚ್ಚು. ಸಾಧು ಸ್ವಭಾವದ ಮಹಾಲಕ್ಷ್ಮಿ ಕ್ರಿಕೆಟ್, ಫುಟ್ಬಾಲ್ ಆಡೋದರಿಂದಲೂ ಭಕ್ತರ ಗಮನವನ್ನು ಸೆಳೆದಿದೆ. ಕರಾವಳಿ ಜನರ ಈ ಅಚ್ಚುಮೆಚ್ಚಿ ಮಹಾಲಕ್ಷ್ಮಿಯನ್ನು ಕಾಣಲು ದೂರದ ಸ್ವಿಜರ್ಲ್ಯಾಂಡ್(Switzerland)ದೇಶದಿಂದ ಇಬ್ಬರು ಪ್ರವಾಸಿಗರು ಕಟೀಲು ಕ್ಷೇತ್ರಕ್ಕೆ ಸೈಕಲ್‌ನಲ್ಲಿ ಆಗಮಿಸಿದ್ದಾರೆ.

Advertisement

ಅಂದಹಾಗೆ ಸೈಕಲ್ ನಲ್ಲೇ ಪ್ರಪಂಚ ಸುತ್ತುತ್ತಿರುವ ಇವರ ಹೆಸರು ಕ್ಲಾಡಿಯೋ ಬ್ರಾಂಡ್ಲಿ ಮತ್ತು ಉರ್ಸ್.ಇಪ್ಪತ್ತೆರಡರ ಹರೆಯ ಕ್ಲಾಡಿಯೋ ತನ್ನ ಅಂಕಲ್ ಉರ್ಸ್ ಜೊತೆಗೆ ಸದ್ಯ ಪ್ರಪಂಚ ಪರ್ಯಟನೆಯಲ್ಲಿದ್ದಾರೆ.ಕಳೆದ 2022 ರ ಸೆಪ್ಟೆಂಬರ್ ಏಳರಂದು ಸ್ವಿಜರ್ಲ್ಯಾಂಡ್ ನಿಂದ ಸೈಕಲ್ ಪ್ರಯಾಣಿಸಿದ ಇವರು ಮಂಗೋಲಿಯಾ,ಮಧ್ಯ ಏಷ್ಯಾ,ಇರಾನ್,ಒಮಾನ್ ರಾಷ್ಟ್ರಗಳನ್ನು ಕ್ರಮಿಸಿ ಸದ್ಯ ಮಂಗಳೂರಿನ ಕಟೀಲುನಲ್ಲಿದ್ದಾರೆ.ಒಮಾನ್ ನಿಂದ ಕೊಚ್ಚಿನ್ ಗೆ ಆಗಮಿಸಿದ ಇವರು ಕಳೆದ ಎಂಟು ದಿನಗಳಿಂದ ಭಾರತ ಪ್ರವಾಸದಲ್ಲಿದ್ದಾರೆ. ಸದ್ಯ ದ.ಕದ ಕಟೀಲಿಗೆ ಆಗಮಿಸಿದ್ದಾರೆ.

ತಮ್ಮ ಪ್ರಯಾಣದ ಕುರಿತು ಪ್ರತಿಕ್ರಿಯಿಸಿದ ಅವರು ಗೂಗಲ್‌ನಲ್ಲಿ ಮಹಾಲಕ್ಷ್ಮಿಯ ಬಗ್ಗೆ ಅರಿತಿದ್ದೇವೆ. ಈ ಆನೆಯ ವಿಶೇಷತೆಗಳ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡಿದ್ದೇವೆ. ನೋಡಿ ತುಂಬಾ ಖುಷಿಯಾಯಿತು. ಭಾರತದ ಜನರು ತುಂಬಾ ಒಳ್ಳೆಯವರು. ಜನರು ತುಂಬಾ ಕೇರ್ ಮಾಡುತ್ತಾರೆ. ಸೈಕಲ್ ನನ್ನ ಬೆಸ್ಟ್ ಫ್ರೆಂಡ್. ಸೈಕಲ್‌ಗೆ ನನ್ನ ಬೆಸ್ಟ್ ಫ್ರೆಂಡ್ ಟಿಂಟನ್‌ನ ಹೆಸರಿಟ್ಟಿದ್ದೇನೆ ಎಂದು ಹೇಳಿದ್ದಾರೆ.

Advertisement
Advertisement
Advertisement