ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Men Health: ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರಗಳಿವು : ತಪ್ಪದೆ ಬಳಸಿ

Men Health: ನಮಗೆ ಪ್ರತಿನಿತ್ಯ  ದೊರೆಯುವ ಆಹಾರ ಪದಾರ್ಥಗಳಿಂದಲೇ ಲೈಂಗಿಕ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಬಹುದು. ಹಾಗಾದರೆ ಯಾವುದು ಆ ಆಹಾರ? ಇಲ್ಲಿದೆ ಉತ್ತರ
11:11 AM Apr 09, 2024 IST | ಸುದರ್ಶನ್
UpdateAt: 11:11 AM Apr 09, 2024 IST
Image Source: ShutterStock
Advertisement

Men Health: ಪ್ರತಿಯೊಬ್ಬ ವ್ಯಕ್ತಿ ತನ್ನ ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಏಕೆಂದರೆ ಅದು ಜೀವನದ ಒಂದು ಭಾಗವಾಗಿದ್ದು, ಮುಂದಿನ ಪೀಳಿಗೆಯ ಸೃಷ್ಟಿಗಾಗಿ ಲೈಂಗಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಹಾಗಾದರೆ ಈ ಲೈಂಗಿಕ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಲು ಏನು ಮಾಡಬೇಕು? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆ ಉತ್ತರ ನಮಗೆ ಪ್ರತಿನಿತ್ಯ  ದೊರೆಯುವ ಆಹಾರ ಪದಾರ್ಥಗಳಿಂದಲೇ ಲೈಂಗಿಕ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಬಹುದು.

Advertisement

ಲೈಂಗಿಕ ಆರೋಗ್ಯವನ್ನು ಉತ್ತಮವಾಗಿಸಲು ಸೇವಿಸಬೇಕಾದ ಆಹಾರ ಪದಾರ್ಥಗಳು :

ಬೆಣ್ಣೆ ಹಣ್ಣು : ದೇಹಕ್ಕೆ ಅತ್ಯಂತ ತಂಪು ನೀಡುವ ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಫೋಲಿಕ್ ಆಸಿಡ್ ಸಮೃದ್ಧವಾಗಿರುತ್ತದೆ. ಈ ಹಣ್ಣನ್ನು ತಿನ್ನುವ ಮೂಲಕ ನಮ್ಮ ದೇಹದಲ್ಲಿ ರಿಫ್ರೆಶ್ ಅನುಭವ ಉಂಟಾಗುತ್ತದೆ. ಹಾಗೆಯೇ ದೇಹದಲ್ಲಿ ತುಂಬಾ ಉಷ್ಣ ಹೆಚ್ಚಾದಾಗ ಅದನ್ನು  ತಗ್ಗಿಸಲು ಈ ಹಣ್ಣು ತುಂಬಾ ಸಹಾಯ ಮಾಡುತ್ತದೆ. ಹಾಗೆಯೇ ಈ ಹಣ್ಣಿನಲ್ಲಿರುವ ವಿಟಮಿನ್ ಬಿ 6 ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.

Advertisement

ಕುಂಬಳಕಾಯಿಯ ಬೀಜಗಳು : ಕುಂಬಳಕಾಯಿ ಬೀಜಗಳು ಪುರುಷರಲ್ಲಿ ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬಾ ಸಹಾಯಕವಾಗಿದೆ‌. ಈ ಕುಂಬಳ ಬೀಜಗಳು ಪುರುಷರ ವೃಷಣಗಳಿಂದ ಉತ್ಪತ್ತಿಯಾಗುವ ಟೆಸ್ಟೋಸ್ಟೆರಾ ಹಾರ್ಮೋನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಬೀಜಗಳಲ್ಲಿ ಮೆಗ್ನೀಷಿಯಂ ಕಬ್ಬಿಣ ಸೇರಿದಂತೆ ವಿವಿಧ ಪೋಷಕಾಂಶಗಳು ಇರುವುದರಿಂದ ದೇಹದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಹಕಾರಿಯಾಗಿದೆ.

ಕಲ್ಲಂಗಡಿ ಹಣ್ಣು : ಕಲ್ಲಂಗಡಿ ಹಣ್ಣು ಸಹ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಕಲ್ಲಂಗಡಿ ಹಣ್ಣು ನಮ್ಮ ದೇಹದಲ್ಲಿನ ಅರ್ಜಿನೈನ್ ಮತ್ತು ಅಮೈನೊ ಬಿಡುಗಡೆ ಮಾಡುವ ಸಿಟ್ರುಲಿನ್ ಅಂಶವನ್ನು ಹೊಂದಿರುತ್ತದೆ. ಇದು  ದೇಹದಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸಿ, ರಕ್ತದ ಹರಿವನ್ನು ನಿಯಂತ್ರಿಸುತ್ತದೆ.

ಒಣಹಣ್ಣುಗಳು : ಮಾರುಕಟ್ಟೆಯಲ್ಲಿ ದೊರೆಯುವ ವಾಲ್ ನಟ್, ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಪಿಸ್ತಾ ಈ ಒಣ ಹಣ್ಣುಗಳಲ್ಲಿ ಅಮೈನೋ ಆಮ್ಲ ಹೆಚ್ಚಾಗಿರುತ್ತದೆ. ಈ ಮೂಲಕ ಲೈಂಗಿಕ ಅಂಗಗಳಲ್ಲಿ ರಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತವೆ.

ಬಾಳೆಹಣ್ಣು : ಬಾಳೆಹಣ್ಣು, ಮಾನವನ ದೇಹದ ಜೀರ್ಣಕ್ರಿಯೆಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಬಾಳೆಹಣ್ಣಿನ ಇರುವ ಪೊಟ್ಯಾಶಿಯಂ ಅಂಶ ಪುರುಷರ ಲೈಂಗಿಕತೆಯಲ್ಲಿ ಸ್ನಾಯುವಿನ ಹಿಗ್ಗುವಿಕೆಗೆ ಸಹಾಯ ಮಾಡುತ್ತದೆ. ಹಾಗೆಯೇ ಪುರುಷರ ವೃಷಣಗಳಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪತ್ತಿಗೂ ಸಹಾಯ ಮಾಡುತ್ತದೆ.

ಡಾರ್ಕ್ ಚಾಕೊಲೇಟ್ : ಸಾಮಾನ್ಯವಾಗಿ ಚಾಕಲೇಟ್ ಗಳನ್ನು ಕಂಡರೆ ಅನೇಕ ಮಂದಿಗೆ ತುಂಬಾ ಇಷ್ಟವಿರುತ್ತದೆ. ಅದರಲ್ಲೂ ಡಾರ್ಕ್ ಚಾಕಲೇಟ್ ಗಳು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಈ ಡಾರ್ಕ್ ಚಾಕಲೇಟ್ ಗಳು ಮೆದುಳಿನ ಸಿರೊಟೋನಿನ್ ಹಾಗೂ ಡೊಪಮೈನ್ ಅಂಶವನ್ನು ಇದು ಹೆಚ್ಚಿಸುತ್ತದೆ ಹಾಗೆಯೇ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಗರಿ ಕತ್ತರಿಸಲು ತೆಂಗಿನ ಮರವೇರಿ ಬಿಸಿಲಿಗೆ ಅಲ್ಲೇ ಪ್ರಜ್ಞೆ ತಪ್ಪಿದ ಯುವಕ; ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ

Advertisement
Advertisement