ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Flipkart Big Diwali Sale : ಶುರುವಾಯ್ತು ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ದೀಪಾವಳಿ ಸೇಲ್ | ಸ್ಮಾರ್ಟ್ ಫೋನ್ ಗಳ ಮೇಲೆ ಬಂಪರ್ ಆಫರ್!!!

09:46 AM Oct 19, 2022 IST | ಹೊಸ ಕನ್ನಡ
UpdateAt: 09:50 AM Oct 19, 2022 IST
Advertisement

ಭಾರತದಲ್ಲಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಶಾಪಿಂಗ್ ಕೂಡ ಬಹಳ ಜೋರಾಗಿರುತ್ತದೆ. ಹಬ್ಬದ ಸಲುವಾಗಿ ಕೆಲವು ಕಂಪನಿಗಳು ವಿಶೇಷ ಆಫರ್ಗಳನ್ನು ಸಹ ನೀಡುತ್ತದೆ. ಈಗಾಗಲೇ ದೇಶದ ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆಗಳಲ್ಲಿ ದೀಪಾವಳಿ ಪ್ರಯುಕ್ತ ಮೇಳಗಳು ಶುರುವಾಗಿದೆ.

Advertisement

ಫ್ಲಿಪ್‌ಕಾರ್ಟ್ ನಲ್ಲಿ ಇಂದಿನಿಂದ ಬಿಗ್ ದಿವಾಳಿ ಸೇಲ್ ನೇರವಾಗಿ ಆಗಿದೆ. ಬಳಕೆದಾರರು ನಿನ್ನಯೇ ಈ ಮೇಳದ ಪ್ರಯೋಜನ ಪಡೆದಿದ್ದರು. ಈ ಅವಧಿಯಲ್ಲಿ ಹೊಸ ಗ್ಯಾಜೆಟ್ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಡಿಸ್ಕೌಂಟ್ ಮತ್ತು ವಿಶೇಷ ಕೊಡುಗೆ ಲಭ್ಯವಾಗಲಿದೆ.

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ. 45 ರ ತನಕ ರಿಯಾಯಿತಿ v. ರಿಯಲ್‌ಮಿ, ಪೋಕೋ ಮತ್ತು ರೆಡ್ಮಿ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ ಫೋನ್‌ಗಳಿಗೆ ಭಾರೀ ರಿಯಾಯಿತಿ ನೀಡುತ್ತಿದೆ. ಇದಿಷ್ಟೇ ಅಲ್ಲದೆ ಈ ಸ್ಮಾರ್ಟ್‌ಫೋನ್‌ಗಳನ್ನು ಕೊಂಡುಕೊಳ್ಳಲು ಎಕ್ಸ್‌ಚೇಂಜ್‌ ಅಫರ್‌ ಸಹ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಇಎಂಐ ಆಯ್ಕೆಯನ್ನೂ ನೀಡಲಾಗಿದೆ. ಪ್ರಮುಖವಾಗಿ ಈ ಸೇಲ್‌ನಲ್ಲಿ ಆ್ಯಪಲ್‌ ಐಫೋನ್‌ 13, ಐಫೋನ್‌ 13 ಮಿನಿ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 , ರಿಯಲ್‌ಮಿ 9i 5G ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತದೆ.

Advertisement

ಐಫೋನ್ 13 128GB ಮಾಡೆಲ್ ಅನ್ನು ನೀವು ದಿವಾಳಿ ಸೇಲ್​ನಲ್ಲಿ 69,990 ರೂ. ಬದಲಾಗಿ 59,990 ರೂ. ಗೆ ಖರೀದಿಸಬಹುದು. ಇದರ ಮೇಲೆ 10,000 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ. ಅಂತೆಯೆ ಎಸ್​ಬಿಐ ಬ್ಯಾಂಕ್ ಆಫರ್ ಕೂಡ ಲಭ್ಯವಿದ್ದು 2,000 ರೂ. ಗಳ ಡಿಸ್ಕೌಂಟ್ ಪಡೆಯಬಹುದು. ಹಳೆಯ ಐಫೋನನ್ನೇ ಎಕ್ಸ್​ಚೇಂಜ್ ಮಾಡುವಿರಿ ಎಂದಾದರೆ ಇನ್ನೂ ಹೆಚ್ಚಿನ ರಿಯಾಯಿತಿಯಲ್ಲಿ ಐಫೋನ್ 13 ಪಡೆದುಕೊಳ್ಳಬಹುದು.

ಐಫೋನ್ 12 ಮಿನಿ 36,990 ರೂ. ಗೆ ಮಾರಾಟ ಕಂಡರೆ, ಐಫೋನ್ 11 31,990 ರೂ. ಗೆ ಮಾರಾಟ ಆಗುತ್ತಿದೆ. ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. ನೀವು ಹೊಸ ಮಾಡೆಲ್ ಐಫೋನ್ 14 ಮೇಲೆ ಲೈಕ್ ಆಗಿದ್ದರೆ 79,9000 ರೂ. ಗೆ ಕೊಂಡುಕೊಳ್ಳಬಹುದು.

ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇ. 80 ರ ವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಈ ರಿಯಾಯಿತಿ ಒಳಗೆ ಸ್ಮಾರ್ಟ್ ವಾಚ್‌ಗಳು, ಹೆಡ್‌ಫೋನ್‌ಗಳು, ವೈರ್‌ಲೆಸ್ ಇಯರ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಅನೇಕ ಪ್ರೊಡೆಕ್ಟ್ ಗಳು ಒಳಗೊಂಡಿದೆ.

ಲ್ಯಾಪ್‌ಟಾಪ್‌ ಮೇಲೆ ಶೇ. 50 ರಷ್ಟು ರಿಯಾಯಿತಿ ಇದೆ. ಬಲಿಷ್ಠವಾದ ಗೇಮಿಂಗ್ ಲ್ಯಾಪ್‌ಟಾಪ್‌ಗಳು ರೂ. 50,990 ರಿಂದ ಮಾರಾಟವಾಗುತ್ತವೆ. ಪ್ರಿಂಟರ್‌ಗಳು ಮತ್ತು ಮಾನಿಟರ್‌ಗಳು ಮಾರಾಟದಲ್ಲಿ ಶೇ. 80 ರಷ್ಟು ರಿಯಾಯಿತಿ ಲಭ್ಯ ಇರುತ್ತವೆ.

ಈ ವಿಶೇಷ ರಿಯಾಯಿತಿ ಬೆಲೆಯಲ್ಲಿ ಜನರು ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ. ಯಾರಿಗುಂಟು ಯಾರಿಗಿಲ್ಲ ಅನ್ನೋತರ ಜನರು ತಾ ಮುಂದು ತಾ ಮುಂದು ಅಂತಾ ಶಾಪಿಂಗ್ ಮಾಡುವ ಭರದಲ್ಲಿ ಇದ್ದಾರೆ.

Related News

Advertisement
Advertisement