ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

First Lunar Eclipse on Holi Day: ಮೊದಲ ಚಂದ್ರಗ್ರಹಣ ಹೋಳಿ ಹಬ್ಬದ ದಿನ ಗೋಚರ, ಪೆನಂಬ್ರಾಲ್ ಚಂದ್ರಗ್ರಹಣ ಅಂದ್ರೇನು ?

11:17 AM Mar 24, 2024 IST | ಸುದರ್ಶನ್
Image Credit Source: New24 Hindi

First Lunar Eclipse on Holi Day: ಈ ವರ್ಷ ಚಂದ್ರಗ್ರಹಣ ಬರುತ್ತಿದೆ. ಆಶ್ಚರ್ಯ ಅಂದ್ರೆ ಇದೇ ಹೋಳಿ ಹಬ್ಬದಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. (First Lunar Eclipse on Holi Day) ಈ ಚಂದ್ರಗ್ರಹಣ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಏಕೆಂದರೆ ಇದು ಸಂಪೂರ್ಣ ಚಂದ್ರಗ್ರಹಣವಲ್ಲ, ಬದಲಿಗೆ ಇದನ್ನು ಪೆನಂಬ್ರಾಲ್ ಚಂದ್ರಗ್ರಹಣ ಎನ್ನುತ್ತಾರೆ. ಹಾಗಾದರೆ ಪೆನಂಬ್ರಾಲ್ ಚಂದ್ರಗ್ರಹಣ ಅಂದ್ರೆ ಏನು, ಅದು ಯಾವಾಗ ಗೋಚರಿಸುತ್ತದೆ, ಜೊತೆಗೆ ಭಾರತದಲ್ಲಿಯೂ ನಾವು ಇದನ್ನು ನೊಡಬಹುದಾ ಅನ್ನೋದನ್ನು ನೋಡೋಣ. ಅಲ್ಲದೆ, ಚಂದ್ರಗ್ರಹಣದ ಸಮಯದಲ್ಲಿ ಮಾಡಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

Advertisement

ಬಣ್ಣದ ಹಬ್ಬವನ್ನು ನಾಳೆ, ಮಾರ್ಚ್ 25 ರಂದು ಆಚರಿಸಲಿದ್ದು, ನಾಳೆಯೇ ಚಂದ್ರಗ್ರಹಣ ನಡೆಯಲಿದೆ. ನಾಳೆ ಭಾರತೀಯ ಕಾಲಮಾನದ ಪ್ರಕಾರ, ಗ್ರಹಣವು ಬೆಳಿಗ್ಗೆ 10:23 ಕ್ಕೆ ಪ್ರಾರಂಭವಾಗಿ 3:23 ರವರೆಗೆ ಅಂತ್ಯವಾಗುತ್ತದೆ. ಆದರೆ ಗ್ರಹಣದ ಪೂರ್ಣ ಅವಧಿ ಸಂಜೆ 4:39 ರವರೆಗೆ ಇರುತ್ತದೆ. ಅದೃಷ್ಟ ವೋ ದುರಾದೃಷ್ಟವೋ ಗೊತ್ತಿಲ್ಲ ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಆದ್ದರಿಂದ ನಾಸ್ತಿಕರಿಗೆ ಒಂದು ಶುಭ ಸುದ್ದಿ ಏನೆಂದರೆ ಭಾರತದಲ್ಲಿ ಯಾವುದೇ ಸೂತಕದ ನಿಯಮಗಳು ಇರಲ್ಲ. ಮೊದಲಿಗೆ ಪೆನಂಬ್ರಾಲ್ ಚಂದ್ರಗ್ರಹಣ ಅಂದ್ರೆ ಏನು ಎಂದು ನೋಡೋಣ.

ರಾಷ್ಟ್ರಪತಿ ವಿರುದ್ಧವೇ ಸುಪ್ರೀಂ ಕೋರ್ಟು ಮೆಟ್ಟಲು ಹತ್ತಿದ ಕೇರಳ ಸರ್ಕಾರ

Advertisement

ಪೆನಂಬ್ರಾಲ್ ಚಂದ್ರಗ್ರಹಣ ಅಂದ್ರೆ ಏನು?
ಚಂದ್ರನ ಎಲ್ಲಾ ಭಾಗವು ಭೂಮಿಯ ಪೆನಂಬ್ರಾಕ್ಕೆ ಹಾದುಹೋದಾಗ ಪೆನಂಬ್ರಾಲ್ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಚಂದ್ರನ ಯಾವುದೇ ಭಾಗವು ಭೂಮಿಯ ಅಂಬ್ರಾದಲ್ಲಿ ಇರುವುದಿಲ್ಲ. ಪೆನಂಬ್ರಾವು ಚಂದ್ರನ ಮೇಲ್ಮೈಯಲ್ಲಿ ಮಬ್ಬಾಗಿಸುತ್ತದೆ.

Indian Women: ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು ಮನೆಕೆಲಸ ಮಾಡುತ್ತಾರೆ- ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ !

ಚಂದ್ರಗ್ರಹಣವನ್ನು ಎಲ್ಲಿ ನೋಡಬಹುದು?
ಆಗಲೇ ಹೇಳಿದಂತೆ, ನಾಸ್ತಿಕರು ತಮ್ಮ ಅದೃಷ್ಟ ಅಂದುಕೊಳ್ಳಬಹುದು, ನಾಸ್ತಿಕರು" ಅಯ್ಯೋ ಗ್ರಹಣ ನೋಡೋ ಭಾಗ್ಯ ಈ ಬಾರಿ ಭಾರತೀಯರಿಗೆ ಇಲ್ಲವಲ್ಲ' ಅಂತ ಬೇಜಾರಾಗಬಹುದು. ಯಾಕೆಂದರೆ ಈ ಬಾರಿ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ದಕ್ಷಿಣ, ಪಶ್ಚಿಮ ಯುರೋಪ್,ಪೂರ್ವ ಏಷ್ಯಾ, ಆಸ್ಟ್ರೇಲಿಯಾ,ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ, ದಕ್ಷಿಣ ಅಮೆರಿಕಾ, ಆಫ್ರಿಕಾ, ಅಟ್ಲಾಂಟಿಕ್ ಸಾಗರ, ಪೆಸಿಫಿಕ್ ಮಹಾಸಾಗರ, ದಕ್ಷಿಣ ಧ್ರುವ ಮತ್ತು ಉತ್ತರ ಧ್ರುವದಲ್ಲಿ ಈ ಪೆನಂಬ್ರಾಲ್ ಚಂದ್ರಗ್ರಹಣ ಗೋಚರಿಸುತ್ತದೆ.

ಇದು ಪೆನಂಬ್ರಾಲ್ ಅಂದರೆ ಭಾಗಶಃ ಚಂದ್ರಗ್ರಹಣವಾದ್ದರಿಂದ ಇದರ ಪರಿಣಾಮ ಹೆಚ್ಚು ಗೋಚರಿಸುವುದಿಲ್ಲ. ಪೆನಂಬ್ರಾಲ್ ಚಂದ್ರಗ್ರಹಣದಲ್ಲಿ ಚಂದ್ರನ ನೆರಳು ಭೂಮಿಯ ಹೊರಭಾಗದಲ್ಲಿ ಮಾತ್ರ ಬೀಳುವ ಕಾರಣ ಚಂದ್ರನು ಸ್ವಲ್ಪ ಮಾತ್ರವೇ ಮಸುಕಾಗುತ್ತಾನೆ. ಆದ್ದರಿಂದ ಈ ಚಂದ್ರಗ್ರಹಣ ಪರಿಣಾಮ ಗಾಢತೆ ಹೊಂದಿರುವುದಿಲ್ಲ.

ಇದನ್ನೂ ಓದಿ: ಯುವಕನಿಂದ ಹಾಡಹಗಲೇ ಯುವತಿ ಮೇಲೆ ಚಾಕು ಇರಿತ; ವಿಡಿಯೋ ವೈರಲ್

ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು?
ಭಾರತದಲ್ಲಿ ಹೋಳಿ ಹಬ್ಬದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಕಾರಣ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಈ ಬಾರಿಗೆ ಭಾರತೀಯರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಗ್ರಹಗತಿ, ಗ್ರಹಣ ಸೂತಕ ಇತ್ಯಾದಿಗಳ ಬಗ್ಗೆ ನಂಬಿಕೆ ಇರುವವರು ಕೂಡ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಬಹುದು. ಈ ಸಾರಿ ಉಪವಾಸ, ಪಥ್ಯ, ವಿಶೇಷ ಶುದ್ಧೀಕರಣ ಕಾರ್ಯ ಏನೂ ಬೇಕಾಗಿಲ್ಲ. ನಾಳೆ ಬಣ್ಣದ ಓಕುಳಿ ಎಗ್ಗಿಲ್ಲದೆ ಸಾಗಲಿ.

Advertisement
Advertisement
Next Article