For the best experience, open
https://m.hosakannada.com
on your mobile browser.
Advertisement

Fire Accident: ಕೊಂಡ ಹಾಯುವಾಗ ಮುಗ್ಗರಿಸಿ ಬಿದ್ದ ವೀರಗಾಸೆ ಪೂಜಾರಿ; ದೇವರ ಹೊತ್ತ ಅರ್ಚಕ ಜಸ್ಟ್‌ ಮಿಸ್‌

11:32 AM Mar 22, 2024 IST | ಹೊಸ ಕನ್ನಡ
UpdateAt: 12:36 PM Mar 22, 2024 IST
fire accident  ಕೊಂಡ ಹಾಯುವಾಗ ಮುಗ್ಗರಿಸಿ ಬಿದ್ದ ವೀರಗಾಸೆ ಪೂಜಾರಿ  ದೇವರ ಹೊತ್ತ ಅರ್ಚಕ ಜಸ್ಟ್‌ ಮಿಸ್‌

Mandya Fire Accident: ಬಸವೇಶ್ವರ ಕೊಂಡೋತ್ಸವದ ಸಂದರ್ಭದಲ್ಲಿ ಕೊಂಡ ಹಾಯುವ ವೇಳೆ ವೀರಗಾಸೆ ಪೂಜಾರಿಯೊಬ್ಬರು ಎಡವಿದ ಘಟನೆಯೊಂದು ನಡೆದಿದೆ. ಕೊಂಡ ಹಾಯುವ ವೇಳೆ ಬಿದ್ದು, ಮೈ ಕೈ ಸುಟ್ಟುಕೊಂಡಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಇದನ್ನೂ ಓದಿ: Bridge Collapse: ನಿರ್ಮಾಣ ಹಂತದ ಸೇತುವೆ ಕುಸಿತ : 1 ಸಾವು, 9 ಮಂದಿಗೆ ಗಂಭೀರ ಗಾಯ

ಬಸವೇಶ್ವರ ಜಾತ್ರಾಮಹೋತ್ಸವ ಅಗ್ನಿ ಕೊಂಡೋತ್ಸವದಲ್ಲಿ ಹುಳಗನಹಳ್ಳಿ ಗ್ರಾಮದಲ್ಲಿ ನಡೆಯುತ್ತಿತ್ತು. ಈ ವೇಳೆ ಕೊಂಡ ಹಾಯಲು ಓಡಿ ಬರುವಾಗ ವೀರಗಾಸೆ ಪೂಜಾರಿ ಮುಗ್ಗರಿಸಿ ಬಿದ್ದಿದ್ದು, ಕೂಡಲೇ ಅಲ್ಲಿದ್ದವರು ಆತನನ್ನು ಬೆಂಕಿಯಿಂದ ಮೇಲಕ್ಕೆತ್ತಿದ್ದಾರೆ.

Advertisement

ಇದನ್ನೂ ಓದಿ: Mangaluru: ಹುಡುಕಿ ವಿಚಾರದಲ್ಲಿ ಕಾಲೇಜು ಹುಡುಗರ ಗಲಾಟೆ; ಯುವಕನಿಗೆ ಹಿಗ್ಗಾಮುಗ್ಗ ಹಲ್ಲೆಗೈದ ಲವ್ವರ್‌; ವೀಡಿಯೋ ವೈರಲ್

ಆದರೆ ಅನಂತರ ದೇವರನ್ನು ಹೊತ್ತುಕೊಂಡು ಕೊಂಡ ಹಾಯಲು ಪೂಜಾರಿ ಮುಂದಾಗಿದ್ದು, ಆತನೂ ಕೊಂಡಕ್ಕೆ ಬೀಳುವಾಗ ಕೈಯಲ್ಲಿದ್ದ ದೇವರನ್ನೇ ಬಿಟ್ಟು ಪಾರಾಗಿರುವ ಘಟನೆ ನಡೆದಿದೆ. ವಿರಗಾಸೆ ಪೂಜಾರಿಯನ್ನು ಮಂಡ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

Advertisement
Advertisement