ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

HSRP Number Plate: ಕೆಲವೇ ದಿನಗಳು ಬಾಕಿ; 'HSRP' ನಂಬ‌ರ್ ಪ್ಲೇಟ್ ಹಾಕಿಸದಿದ್ರೆ ದಂಡ ಫಿಕ್ಸ್ ! ವಾಹನ ಸವಾರರೇ ಎಚ್ಚರ!

HSRP Number Plate: ಕೆಲವೇ ದಿನಗಳು ಬಾಕಿ ಉಳಿದಿದೆ. ವಾಹನ ಸವಾರ ಜೂನ್ 12 ರೊಳಗೆ HSRP' ನಂಬರ್ ಪ್ಲೇಟ್ ಅಳವಡಿಸದಿದ್ರೆ ದಂಡ ಬೀಳುವುದಂತು ಖಚಿತ. 
11:11 AM May 29, 2024 IST | ಕಾವ್ಯ ವಾಣಿ
UpdateAt: 11:20 AM May 29, 2024 IST
Advertisement

HSRP Number Plate: ಕರ್ನಾಟಕ ಸಾರಿಗೆ ಇಲಾಖೆಯ ಎಲ್ಲ ವಾಹನಗಳಿಗೂ HSRP ನಂಬರ್ ಪ್ಲೇಟ್ (High Security Registration Number Plate) ಕಡ್ಡಾಯ ಮಾಡಲಾಗಿದ್ದು, ಇದೀಗ ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ಗಡುವನ್ನು ನೀಡಲಾಗಿದೆ. ಹೌದು, ಕೆಲವೇ ದಿನಗಳು ಬಾಕಿ ಉಳಿದಿದೆ. ವಾಹನ ಸವಾರ ಜೂನ್ 12 ರೊಳಗೆ HSRP' ನಂಬರ್ ಪ್ಲೇಟ್ ಅಳವಡಿಸದಿದ್ರೆ ದಂಡ ಬೀಳುವುದಂತು ಖಚಿತ.

Advertisement

ಇದನ್ನೂ ಓದಿ: Karnataka Education: ಪೋಷಕರೇ ಇತ್ತ ಗಮನಿಸಿ; ಈ ಬಾರಿ 1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ಇಲ್ಲ

ಏಪ್ರಿಲ್ 2019 ಮೊದಲು ನೋಂದಣಿ ಮಾಡಿಸಿದ್ದ ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ನಂಬ‌ರ್ ಪ್ಲೇಟ್ (HSRP) ಅವಳಡಿಕೆ ಕಡ್ಡಾಯ ಮಾಡಿ ಸಾರಿಗೆ ಆದೇಶ ಹೊರಡಿಸಿತ್ತು. ಫೆಬ್ರವರಿ 17ರೊಳಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ಡೆಡ್ ಲೈನ್ ನೀಡಿತ್ತು. ನಂತರ ಮೇ.31 ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ಜೂ.12 ರವರೆಗೆ ಸಮಯ ನಿಗದಿ ಮಾಡಲಾಗಿದೆ.

Advertisement

ಇದನ್ನೂ ಓದಿ: Karnataka Seeds Price: ರೈತರಿಗೆ ಶಾಕಿಂಗ್‌ ನ್ಯೂಸ್‌; ಬಿತ್ತನೆ ಬೀಜ ದರ ರಾಜ್ಯದಲ್ಲಿ ಏರಿಕೆ

ಮುಖ್ಯವಾಗಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್ ಅಳವಡಿಕೆಯನ್ನ ಕಡ್ಡಾಯ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ (HSRP ) ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.

HSRP ನಂಬರ್ ಪ್ಲೇಟ್ ಆಳವಡಿಕೆ ಮಾಡಲು ಆನ್ ಲೈನ್ ಮೂಲಕ ನೋಂದಣಿ ಮಾಡಿಸಬೇಕಾಗಿದ್ದು, ಈ ಸಮಯದಲ್ಲಿ ತಾಂತ್ರಿಕ ತೊಂದರೆಗಳು ಉಂಟಾದರೆ ಅದನ್ನು ಬಗೆಹರಿಸಲು ಸಹಾಯವಾಣಿಯನ್ನು ಸಾರಿಗೆ ಇಲಾಖೆ ಆರಂಭಿಸಿದೆ. ಇದಕ್ಕಾಗಿ ವಾಹನ ಮಾಲೀಕರು ಬೆಳಗ್ಗೆ 10 ರಿಂದ ಸಂಜೆ 5.30 ತನಕ ಸಹಾಯವಾಣಿ ಸಂಖ್ಯೆ 94498 63429/94498 63426 ಗಳಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ. ಅಥವಾ ವೆಬ್ ಸೈಟ್ ಮೂಲಕ ವಾಹನಗಳಿಗೆ HSRP ನಂಬ‌ರ್ ಪ್ಲೇಟ್ ನೋಂದಣಿ ಮಾಡಿಕೊಳ್ಳಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

Related News

Advertisement
Advertisement