For the best experience, open
https://m.hosakannada.com
on your mobile browser.
Advertisement

Film Actress Sada: ನನಗೆ ಬೇಕಾದದ್ದು ಮದುವೆ ಆದ್ರೆ ಮಾತ್ರ ಸಿಗುತ್ತೆ ಅನ್ನೋದು ಶುದ್ಧ ಸುಳ್ಳು!

Film Actress Sada: ನಾನು ಮದುವೆ ವಿರೋಧಿಯಲ್ಲ, ಆದರೆ ನನಗೆ ಅರೆಂಜ್ ಮ್ಯಾರೇಜ್ ಇಷ್ಟವಿಲ್ಲ ಎಂದಿದ್ದಾರೆ.
03:29 PM Jun 16, 2024 IST | ಕಾವ್ಯ ವಾಣಿ
UpdateAt: 03:29 PM Jun 16, 2024 IST
film actress sada  ನನಗೆ ಬೇಕಾದದ್ದು ಮದುವೆ ಆದ್ರೆ ಮಾತ್ರ ಸಿಗುತ್ತೆ ಅನ್ನೋದು ಶುದ್ಧ ಸುಳ್ಳು
Advertisement

Film Actress Sada: ಕನ್ನಡದಲ್ಲಿ ಮೊನಾಲಿಸಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ  ನಟನೆ ಮಾಡಿರುವ ಸದಾ (Film Actor Sada)  ಎಂಬ ಅಪ್ಸರೆ ಬಗ್ಗೆ ನೀವು ತಿಳಿದಿರಬಹುದು. ಒಂದು ಕಾಲದಲ್ಲಿ ಸಿನಿ ಇಂಡಸ್ಟ್ರಿಯ ಬಹುಬೇಡಿಕೆ ನಟಿಯಾಗಿದ್ದ ಸದಾ ಇದೀಗ ಸಿನಿ ರಂಗದಿಂದ ದೂರ ಉಳಿದಿದ್ದಾರೆ. ಸದಾ ತೆಲುಗಿನ ಜಯಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಮೊದಲ ಚಿತ್ರದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟರು. ಅಲ್ಲಿಂದಾಚೆಗೆ ತೆಲುಗು ಮತ್ತು ತಮಿಳಿನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು.

Advertisement

ಸದ್ಯಕ್ಕೆ ಸಾಲು ಸಾಲು ಸಿನಿಮಾ ಸೋಲುಗಳಿಂದ ಸಿನಿಮಾ ಅವಕಾಶಗಳು ಸದಾ ಕೈತಪ್ಪಿ ಸಿನಿಮಾದಿಂದ ದೂರ ಉಳಿದಿದ್ದಾರೆ. ಆದರೆ, ಇತ್ತೀಚೆಗೆ ಕಿರುತೆರೆಗೆ  ಎಂಟ್ರಿ ನೀಡಿದ್ದು, ಬಿಬಿ ಜೋಡಿ ಮತ್ತು ಡ್ಯಾನ್ಸ್ ವಿಥ್ ಯು ಹೆಸರಿನ ಟಿವಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಅಂದ್ರೆ ಸದಾ ಜೊತೆಗೆ ಹೀರೋಯಿನ್ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರೆಲ್ಲಾ ವೈವಾಹಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಸದಾ ಅವರಿಗೆ 39 ವರ್ಷ ವಯಸ್ಸಾಗಿದ್ದರೂ ಕೂಡ ಇನ್ನೂ ಮದುವೆ  ಮಾಡಿಕೊಳ್ಳದೇ ಬಿಂದಾಸ್ ಆಗಿದ್ದಾರೆ ಎನ್ನೋ ಮಾತು ಅವರ ಬಾಯಿಯಿಂದಲೇ ಹೊರಬಂದಿದೆ.

Advertisement

ಹೌದು, ಇತ್ತೀಚೆಗಷ್ಟೇ ಸದಾ ಅವರು ಮದುವೆಯ ಕುರಿತು ಮಾಡಿರುವ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ನಾನು ಮದುವೆ ವಿರೋಧಿಯಲ್ಲ, ಆದರೆ ನನಗೆ ಅರೆಂಜ್ ಮ್ಯಾರೇಜ್ ಇಷ್ಟವಿಲ್ಲ ಎಂದಿದ್ದಾರೆ. ಯಾರೆಂದು ತಿಳಿಯದವನನ್ನು ಮದುವೆಯಾಗಿ ಅವನ ಜೊತೆಯಲ್ಲಿರುವುದು ನನಗೆ ಇಷ್ಟವಿಲ್ಲ. ನನಗೆ ಪ್ರೇಮ ವಿವಾಹ ಇಷ್ಟ ಎಂದಿದ್ದಾರೆ.

ಅನುಭವದಲ್ಲಿ ಹೇಳುವುದಾದರೆ ನನ್ನ ತಾಯಿ ಮತ್ತು ತಂದೆ ಕೂಡ ಪ್ರೀತಿಸಿ ಮದುವೆಯಾದವರು ಅವರ ಜೀವನ ಕಣ್ಣಾರೆ ಕಂಡಿರುತ್ತೇನೆ. ಆದ್ದರಿಂದ ಅದಕ್ಕೆ ನನಗೂ ಲವ್ ಮ್ಯಾರೇಜ್ ಇಷ್ಟ. ಆದರೆ ನಾನು ಇಲ್ಲಿಯವರೆಗೆ ಒಬ್ಬಂಟಿಯಾಗಿರಲು ಕಾರಣ ನನಗೆ ಒಳ್ಳೆಯ ವ್ಯಕ್ತಿ ಸಿಗದಿರುವುದು. ಈಗ ನಾನು ವೃತ್ತಿಪರ ಜೀವನದಲ್ಲಿ ತುಂಬಾ ಸಂತೋಷವಾಗಿದ್ದೇನೆ. ಆದರೆ, ಮದುವೆಯಾದರೆ ಇಷ್ಟು ಸಂತೋಷ, ನಾನು ಅಂದುಕೊಂಡ ಜೀವನ ಸಿಗುತ್ತದೆ ಎಂಬ ಭರವಸೆ ಇಲ್ಲ, ಒಟ್ಟಿನಲ್ಲಿ ನನಗೆ ಬೇಕಾದದ್ದು ಮದುವೆ ಆದ್ರೆ ಮಾತ್ರ ಸಿಗುತ್ತೆ ಅನ್ನೋದು ಶುದ್ಧ ಸುಳ್ಳು ಎಂದು ಸ್ಟ್ರಾಂಗ್ ಆಗಿ ಹೇಳಿದ್ದಾರೆ.

Advertisement
Advertisement
Advertisement