Sumalatha Ambarish: ಪ್ರತಿಷ್ಠಿತ ಬ್ಯಾಂಕ್ ವಿರುದ್ಧ ಹೋರಾಟ - ಬಡ್ಡಿ, ದಂಡ ಸಮೇತ 40 ಲಕ್ಷ ವಸೂಲಿ ಮಾಡಿದ ಸುಮಲತಾ !!
Sumalatha Ambarish: ಬ್ಯಾಂಕ್ ಗಳಲ್ಲಿ ಏನಾದರೂ ಕಣ್ತಪ್ಪಿನಿಂದ ಸಣ್ಣ ಪುಟ್ಟ ಹಣದ ಸಮಸ್ಯೆ ಆದಾಗ ಯಾರು ಗುದ್ದಾಡುತ್ತಾರೆ, ಸ್ವಲ್ಪ ಹಣವಲ್ಲವೇ? ಹೋದರೆ ಹೋಯಿತು ಬಿಡಿ ಎಂದು ಕೈ ಚೆಲ್ಲಿ ಉದಾಸೀನ ತೋರುವವರೇ ಹೆಚ್ಚು. ಆದರೆ ಸ್ವಲ್ಪವೇ ಹೋಗಲಿ, ಹೆಚ್ಚೇ ಹೋಗಲಿ ಅದು ಹಣವೇ ಅಲ್ಲವೆ. ಇಂತಹ ಸಮಯದಲ್ಲಿ ನಾವು ಹೇಗಾದರೂ ಅದನ್ನು ಪಡೆದೇ ತೀರಬೇಕೆಂಬ ಹಟದಿಂದ ಪ್ರತಿಷ್ಠಿತ ಬ್ಯಾಂಕ್ ವಿರುದ್ಧ ಹೋರಾಡಿ ಬಡ್ಡಿ, ದಂಡ ಸಮೇತವಾಗಿ ಬರೋಬ್ಬರಿ 40 ಲಕ್ಷವನ್ನು ವಸೂಲಿ ಮಾಡುವ ಮೂಲಕ ಮಾಜಿ ಸಂಸದೆ ಸುಮಲತಾ ಅಂಬರೀಷ್(Sumalatha Ambarish) ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.
Cabinet Ministers: ಮೋದಿ ಸಂಪುಟದ 69 ಸಚಿವರ ಪಟ್ಟಿ ಇಲ್ಲಿದೆ !!
ಹೌದು, ನಟಿ, ರಾಜಕಾರಣಿ ಸುಮಲತಾ ಅಂಬರೀಶ್ ಅವರು 2017 ರಿಂದ ಪ್ರತಿಷ್ಠಿತ ಎಚ್‌ಡಿಎಫ್‌ಸಿ(HDFC Bank) ಬ್ಯಾಂಕ್‌ನ ಎಚ್‌ಡಿಎಫ್‌ಸಿ ಲೈಫ್ ಕಂಪನಿ ವಿರುದ್ಧ ಹೋರಾಡಿ ಬರೋಬ್ಬರಿ 40 ಲಕ್ಷ ರೂಪಾಯಿಗಳನ್ನು ಬಡ್ಡಿ, ದಂಡ ಸಮೇತ ವಸೂಲಿ ಮಾಡಿದ್ದಾರೆ. ಅವರ ಹೋರಾಟಕ್ಕೆ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ನ್ಯಾಯ ದೊರಕಿಸಿಕೊಟ್ಟಿದ್ದು ಬಡ್ಡಿ, ದಂಡ ಸಮೇತ 40 ಲಕ್ಷ ರೂಪಾಯಿ ವಾಪಸ್ ನೀಡುವಂತೆ ಬ್ಯಾಂಕ್ ಗೆ ಆದೇಶಿಸಿದೆ.
ಏನಿದು ಪ್ರಕರಣ?
ಸುಮಲತಾ ಅವರು ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದ್ದ ಹಣವನ್ನು ನವೆಂಬರ್ 2015 ಮತ್ತು ಜನವರಿ 2016 ರಲ್ಲಿ ಎರಡು ಬಾರಿ ಬ್ಯಾಂಕ್‌ಗೆ ಪತ್ರ ಬರೆದು ಖಚಿತವಾದ ಬಡ್ಡಿಯೊಂದಿಗೆ ಮರುಪಾವತಿಗೆ ಮನವಿ ಮಾಡಿದರು. ಲೀಗಲ್ ನೋಟಿಸ್ ಸಹ ನೀಡಿದ್ದರು. ಆದರೆ ಬ್ಯಾಂಕ್ ಹಣವನ್ನು ಹಿಂತಿರುಗಿಸಲಾಗಿಲ್ಲ. ಬಳಿಕ ಸುಮಲತಾ ಅವರು ಆಯೋಗವನ್ನು ಸಂಪರ್ಕಿಸಿದ್ದರು.
ಹೂಡಿಕೆ ಮಾಡಿದ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸದ ಎಚ್‌ಡಿಎಫ್‌ಸಿ ಲೈಫ್ ವಿರುದ್ಧ ಸುಮಲತಾ ಅವರು 2017ರಲ್ಲಿ ದೂರು ಸಲ್ಲಿಸಿದ್ದರು. ದೂರನ್ನು ಪುರಸ್ಕರಿಸಿ ಆಯೋಗದ ಸದಸ್ಯರಾದ ರವಿಶಂಕರ್ ಮತ್ತು ಸುನೀತಾ ಚನ್ನಬಸಪ್ಪ ಬಾಗೇವಾಡಿ ಅವರನ್ನೊಳಗೊಂಡ ಆಯೋಗ ಮೇ 31ರಂದು ಆದೇಶ ಹೊರಡಿಸಿತ್ತು.
ಇದೀಗ ಸುಮಲತಾ ಅಂಬರೀಶ್ ಅವರು ಮಾಡಿದ 40 ಲಕ್ಷ ರೂಪಾಯಿ ಹೂಡಿಕೆಯನ್ನು 2017 ರಿಂದ ವಾರ್ಷಿಕ 7.5% ಬಡ್ಡಿ, ರೂ 10 ಲಕ್ಷದ ಬೃಹತ್ ಪರಿಹಾರ ಮತ್ತು ರೂ 25,000 ವ್ಯಾಜ್ಯ ವೆಚ್ಚಗಳನ್ನು ಮರುಪಾವತಿಸುವಂತೆ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಎಚ್‌ಡಿಎಫ್‌ಸಿ ಲೈಫ್‌ಗೆ ಸೂಚಿಸಿದೆ.
ಆಗಿದ್ದೇನು?
2015ರ ಮೇ 15ರಂದು 40 ಲಕ್ಷ ರೂಪಾಯಿಯ ಚೆಕ್ ನೀಡಿದ್ದರು. ಬಳಿಕ ಎಚ್‌ಡಿಎಫ್‌ಸಿ ಲೈಫ್ ಉದ್ಯೋಗಿಯೊಬ್ಬರು ವಿಶಾಲಾಕ್ಷಿ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಮತ್ತು ಗ್ರಾಹಕರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸುಮಲತಾ ಅವರು ಎಚ್‌ಡಿಎಫ್‌ಸಿ ಲೈಫ್ ಕಚೇರಿಗೆ ಭೇಟಿ ನೀಡಿದಾಗ, ಫಿಕ್ಸೆಡ್ ಡೆಪಾಸಿಟ್ ಬದಲಿಗೆ ಪಿಂಚಣಿ ಪಾಲಿಸಿಯಲ್ಲಿ ಹಣವನ್ನು ಹೂಡಿಕೆ ಮಾಡಿದ ವಿಶಾಲಾಕ್ಷಿ ಅವರು ದಾರಿ ತಪ್ಪಿಸಿದ್ದರು.
Karnataka Rains: ರಾಜ್ಯದ ಹಲವೆಡೆ ರೆಡ್ ಅಲರ್ಟ್, ಉಡುಪಿ ಸೇರಿ ಹಲವೆಡೆ ಆರೆಂಜ್, ದಕ್ಷಿಣ ಕನ್ನಡ, ಕೆಲವೆಡೆ ಯಲ್ಲೋ !