For the best experience, open
https://m.hosakannada.com
on your mobile browser.
Advertisement

Government Schools: ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಶುಲ್ಕ ನಿಗದಿ !!

Government Schools: ಕರ್ನಾಟಕದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲೂ(Government And Added Schools) ಶುಲ್ಕ ನಿಗದಿ ಮಾಡಲಾಗಿದೆ. 
02:01 PM May 28, 2024 IST | ಸುದರ್ಶನ್
UpdateAt: 02:04 PM May 28, 2024 IST
government schools  ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಶುಲ್ಕ ನಿಗದಿ
Advertisement

Government Schools : ನಾಳೆಯಿಂದ(ಮೇ 29) ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು ಪ್ರಾರಂಭವಾಗಲಿದ್ದು 2024-25ರ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈ ಬೆನ್ನಲ್ಲೇ ಕರ್ನಾಟಕದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲೂ(Government And Added Schools) ಶುಲ್ಕ ನಿಗದಿ ಮಾಡಲಾಗಿದೆ.

Advertisement

ಇದನ್ನೂ ಓದಿ: Tulsi: ತುಳಸಿ ಎಲೆಯನ್ನು ತಲೆಯ ಕೆಳಗಿಟ್ಟು ಮಲಗಿದರೆ ಪಂಚಲಾಭ ದೊರೆಯಲಿದೆ!

ಹೌದು, 2024-25ನೇ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ/ ಅನುದಾನಿತ ಶಾಲೆಗಳ ಶುಲ್ಕಗಳನ್ನು ನಿಗದಿ ಮಾಡಲಾಗಿದ್ದು, ಪ್ರಾಥಮಿಕ ಶಾಲಾ ವಿಭಾಗ/ ಪ್ರೌಢ ಶಾಲಾ ವಿಭಾಗ ಎಂದು ವರ್ಗೀಕರಣ ಮಾಡಿ ಶುಲ್ಕ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಶುಲ್ಕ ಪಾವತಿಯ ಸಂಪೂರ್ಣ ವಿವರ ಇಲ್ಲಿದೆ.

Advertisement

ಇದನ್ನೂ ಓದಿ: Government Job: ಏರ್ ಫೋರ್ಸ್ ನ ಫೈನಾನ್ಸಿಯಲ್ ಡಿಪಾರ್ಟ್ಮೆಂಟ್ ನಲ್ಲಿ ಉದ್ಯೋಗವಕಾಶ! ಈಗಲೇ ಅರ್ಜಿ ಸಲ್ಲಿಸಿ

ಶುಲ್ಕ ಪಾವತಿ ವಿವರ:

* ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಇರುವ ಶಾಲೆಗಳಲ್ಲಿ ಪ್ರತಿ ಘಟಕಕ್ಕೆ ತಲಾ 5 ರೂ. ಸಂಗ್ರಹ ಮಾಡುವುದು.

* ವಿದ್ಯಾರ್ಥಿ ಕ್ರೀಡಾ ನಿಧಿ, ಶಿಕ್ಷಕರ ದಿನಾಚರಣೆ, ಬಾವುಟದ ನಿಧಿ (ಕ್ರಮ ಸಂಖ್ಯೆ 9, 10, 11 ಮತ್ತು 12)ಗಳಿಗೆ, ಶುಲ್ಕ ರಿಯಾಯಿತಿ ಇರುವುದಿಲ್ಲ.

* ಎಲ್ಲಾ ವಿದ್ಯಾರ್ಥಿಗಳು ಈ ನಿಧಿಗಳ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.

ಯಾವ ತರಗತಿಗೆ ಎಷ್ಟು ಶುಲ್ಕ:

* ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಕ್ರೀಡಾ ನಿಧಿ 1-5ನೇ ತರಗತಿ ಶುಲ್ಕವಿಲ್ಲ ,6-7ನೇ ತರಗತಿಗೆ 10 ರೂ.ಗಳು.

* ಶಿಕ್ಷಕ ದಿನಾಚರಣೆ ಬಾವುಟ 1-5 ಶುಲ್ಕವಿಲ್ಲ, 6-7ನೇ ತರಗತಿ 5 ರೂ.ಗಳು. ಒಟ್ಟು 15 ರೂ.ಗಳು.

ಪ್ರೌಢ ಶಾಲಾ ವಿಭಾಗ: 

8ನೇ ತರಗತಿ ಒಟ್ಟು 70 ರೂ

9-10ನೇ ತರಗತಿ ಒಟ್ಟು 220 ರೂ.ಗಳು.

ದಾಖಲಾತಿ ಶುಲ್ಕ

* 8ನೇ ತರಗತಿ 0

* 9-10ನೇ ತರಗತಿ 10 ರೂ.ಗಳು.

ಕ್ರೀಡಾ ಶುಲ್ಕ

* 8ನೇ ತಗರತಿ 0,

* 9-10ನೇ ತರಗತಿ 25 ರೂ.ಗಳು.

ರೀಡಿಂಗ್ ಶುಲ್ಕ

* 8ನೇ ತರಗತಿ-0

* 9-10ನೇ ತರಗತಿ 20 ರೂ.ಗಳು.

ಪ್ರಯೋಗಾಲಯ ಶುಲ್ಕ

* 8ನೇ ತರಗತಿ 0

* 9-10 20 ರೂ.ಗಳು.

ದೃಕ್ ಶ್ರವಣ ಶುಲ್ಕ (ಎ. ವಿ. ಇ) 

* 8ನೇ ತರಗತಿ 0,

* 9-10ನೇ ತರಗತಿ 10 ರೂ.

ಡ್ರಾಯಿಂಗ್/ ವೃತ್ತಿ ಶಿಕ್ಷಣ ಶುಲ್ಕ

* 8ನೇ ತರಗತಿ 0,

* 9-10ನೇ ತರಗತಿ 25 ರೂ.

ವೈದ್ಯಕೀಯ ಶುಲ್ಕ

* 8ನೇ ತರಗತಿ 0

* 9-10ನೇ ತರಗತಿ 5 ರೂ.ಗಳು.

ಶಾಲಾ ಸ್ವಚ್ಛತಾ ಶುಲ್ಕ

* 8ನೇ ತರಗತಿ 0,

* 9-10 15 ರೂ.ಗಳು.

ಶುಲ್ಕ ರಿಯಾಯಿತಿ:

ಸರ್ಕಾರದ ಮಾಹಿತಿ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಲ್ಲಾ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಇದೆ. ಎಲ್ಲಾ ಹೆಣ್ಣು ಮಕ್ಕಳಿಗೆ, ರೂ. 2ಲಕ್ಷ ಮಿತಿಯೊಳಗೆ ಪ್ರವರ್ಗ-1ರಡಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ, ರೂ. 44,500 ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಇದೆ.

Advertisement
Advertisement
Advertisement