FASTag new rule: ಇಂದಿನಿಂದಲೇ ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಹೊಸ ನಿಯಮ ಜಾರಿ!
FASTag New Rule: ಇನ್ಮುಂದೆ ಟೋಲ್ ಪಾವತಿಗಳನ್ನು ಸರಳಗೊಳಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಆಗಸ್ಟ್ 1ರಿಂದ ಅಂದರೆ ಇವತ್ತಿನಿಂದಲೇ ಫಾಸ್ಟ್ ಟ್ಯಾಗ್ ಗೆ ಸಂಬಂಧಿಸಿ ಹೊಸ ನಿಯಮಗಳು (FASTag new rule) ಜಾರಿಗೆ ಬರಲಿದ್ದು, ಇದಕ್ಕಾಗಿ ಗ್ರಾಹಕರು ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಈಗಾಗಲೇ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನವೀಕರಿಸಿದ ಮಾರ್ಗಸೂಚಿಗಳನ್ನು ಪರಿಚಯಿಸಿದ್ದು, ಇದಕ್ಕಾಗಿ ಗ್ರಾಹಕರು ಕೆವೈಸಿ (KYC) ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
ಟೋಲ್ ಪಾವತಿಗಳನ್ನು ಸರಳಗೊಳಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಫಾಸ್ಟ್ ಟ್ಯಾಗ್ ಅತ್ಯಗತ್ಯವಾಗಿದೆ. ಆದರೆ ಎನ್ ಪಿಸಿಐ ಮಾಡಿರುವ ಈ ಬದಲಾವಣೆಗಳು ಬಳಕೆದಾರರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ.
ಆಗಸ್ಟ್ 1ರಿಂದ ಫಾಸ್ಟ್‌ಟ್ಯಾಗ್ ಸೇವೆಗಳನ್ನು ಒದಗಿಸುವ ಕಂಪನಿಗಳು 3- 5 ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳಿಗೆ ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಆಗಸ್ಟ್ 1 ಮತ್ತು ಅಕ್ಟೋಬರ್ 31ರ ವರೆಗೆ ಸಮಯಾವಕಾಶವನ್ನು ನೀಡಲಿದೆ. ಈ ಸಮಯದೊಳಗೆ ಐದು ವರ್ಷಕ್ಕಿಂತ ಹಳೆಯದಾದ ಫಾಸ್ಟ್ ಟ್ಯಾಗ್ ಅನ್ನು ಬದಲಾಯಿಸಬೇಕು. ವಾಹನ ಮಾಲೀಕರು ತಮ್ಮ ಫಾಸ್ಟ್ ಟ್ಯಾಗ್ ಗಳ ವಿತರಣೆಯ ದಿನಾಂಕಗಳನ್ನು ಪರಿಶೀಲಿಸಬೇಕು ಮತ್ತು ಸಮಸ್ಯೆಗಳನ್ನು ತಪ್ಪಿಸಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು.
ಹೊಸ ನಿಯಮಗಳು ಆಗಸ್ಟ್ 1ರಿಂದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳನ್ನು ವಾಹನದ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಗೆ ಲಿಂಕ್ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಒಂದು ವೇಳೆ ಈ ಗಡುವುಗಳನ್ನು ತಪ್ಪಿಸಿಕೊಂಡರೆ ಮುಂದೆ ಹಲವು ತೊಂದರೆಗಳನ್ನು ಎದುರಿಸಬೇಕಾಗಬಹುದು.
ಮುಖ್ಯವಾಗಿ 5 ವರ್ಷಕ್ಕಿಂತ ಹಳೆಯದಾದ ಫಾಸ್ಟ್‌ಟ್ಯಾಗ್‌ಗಳನ್ನು ಬದಲಾಯಿಸಬೇಕು. 3 ವರ್ಷಗಳ ಹಿಂದೆ ನೀಡಲಾದ ಫಾಸ್ಟ್‌ಟ್ಯಾಗ್‌ಗಳಿಗೆ ಕೆವೈಸಿ ಅನ್ನು ನವೀಕರಿಸಬೇಕು. ಜೊತೆಗೆ ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ಫಾಸ್ಟ್‌ಟ್ಯಾಗ್‌ನೊಂದಿಗೆ ಲಿಂಕ್ ಮಾಡಬೇಕು. ಅದಲ್ಲದೆ ಹೊಸ ವಾಹನವನ್ನು ಖರೀದಿಸಿದ 90 ದಿನಗಳಲ್ಲಿ ನೋಂದಣಿ ಸಂಖ್ಯೆಯನ್ನು ನವೀಕರಿಸಬೇಕು. ನಂತರ ಫಾಸ್ಟ್ ಟ್ಯಾಗ್ ಪೂರೈಕೆದಾರರು ತಮ್ಮ ಡೇಟಾಬೇಸ್‌ಗಳನ್ನು ಪರಿಶೀಲಿಸಬೇಕು. ಇದಾದ ನಂತರ ಕಾರಿನ ಮುಂಭಾಗ ಮತ್ತು ಬದಿಯ ಕ್ಲಿಯರ್ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು. ನಂತರ ಫಾಸ್ಟ್ ಟ್ಯಾಗ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬೇಕು.