POK: ಕೆಲವರು ಮಾಡಿದ ತಪ್ಪಿನಿಂದ ಪಿಓಕೆ ಮೇಲೆ ಹಿಡಿತ ಕಳೆದುಕೊಂಡೆವು : ನೆಹರು ವಿರುದ್ಧ ಎಸ್ ಜೈಶಂಕರ್ ಪರೋಕ್ಷ ಟೀಕೆ
S Jayashankar POK: ವಿದೇಶಾಂಗ ಸಚಿವ(Forgin Minister) ಎಸ್ ಜೈಶಂಕರ್(S Jayshankar) ಅವರು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮೇಲಿನ ಭಾರತದ ನಿಯಂತ್ರಣವನ್ನು ತಾತ್ಕಾಲಿಕವಾಗಿ ಕಳೆದುಕೊಂಡಿರುವ ಕುರಿತು ವಿದೇಶಾಂಗ ಸಚಿವ ಜೈ ಶಂಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Reliance: ಭರ್ಜರಿ ಸುದ್ದಿ - ಇನ್ನು ರಿಲಯನ್ಸ್ ರಿಟೇಲ್‌ನಲ್ಲಿ ಸಿಗಲಿದೆ ಬ್ರಿಟನ್ ಫ್ಯಾಷನ್ ASOS ಬ್ರ್ಯಾಂಡ್‌ನ ಉತ್ಪನ್ನಗಳು
ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಆಗಿರುವ ತಪ್ಪುಗಳೇ ಇದಕ್ಕೆ ಕಾರಣ. ಇದಕ್ಕೆ ಒಬ್ಬ ವ್ಯಕ್ತಿ ಮಾಡಿದ ತಪ್ಪೇ ಕಾರಣ ಎಂದು ಜೈಶಂಕರ್(S Jayshankar) ಪರೋಕ್ಷವಾಗಿ ಭಾರತದ ಮೊದಲ ಪ್ರಧಾನಿ ನೆಹರೂ ವಿರುದ್ಧ ಆರೋಪಿಸಿದ್ದಾರೆ.
ಇದನ್ನೂ ಓದಿ: Parliment Election : ಕರ್ನಾಟಕದಲ್ಲಿ ಟುಸ್ ಆಯ್ತಾ ಮೋದಿ ಹವಾ - ಈ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಫಿಕ್ಸಾ ?!
ವಿಶ್ವಬಂಧು ಭಾರತ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಕಾಶ್ಮೀರವನ್ನು (POK) ಭಾರತ ವಶಪಡಿಸಿಕೊಳ್ಳುವ ವಿಚಾರದಲ್ಲಿ ಲಕ್ಷಣ ರೇಖೆ ಇದೆ ಎಂದು ನಾನು ನಂಬುವುದಿಲ್ಲ.
ಇದೇ ವೇಳೆ ಜೈ ಶಂಕರ್(S Jayshankar) ಚೀನಾ-ಪಾಕಿಸ್ತಾನ(China Pakistan ಆರ್ಥಿಕ ಕಾರಿಡಾರ್ ಮತ್ತು ಪಾಕಿಸ್ತಾನದೊಂದಿಗೆ (Pakistan) ಬೀಜಿಂಗ್‌ನ ಸಹಕಾರವನ್ನು ಟೀಕಿಸಿದ್ದಾರೆ. ಚೀನಾದ(China) ಲಾಯಭಾರಿ ಮತ್ತು ಚೀನಾದ ಹಿಂದಿನ ಕ್ರಮಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಪಾಕಿಸ್ತಾನವಾಗಲಿ ಅಥವಾ ಚೀನಾವಾಗಲಿ ಈ ಭೂಮಿಯನ್ನು ತಮ್ಮದೆಂದು ಹೇಳಿಕೊಳ್ಳುವುದಿಲ್ಲ ಎಂದು ನಾವು ಅವರಿಗೆ ಪದೇ ಪದೇ ಹೇಳಿದ್ದೇವೆ. ಯಾರಾದರೂ ಸಾರ್ವಭೌಮರಾಗಿದ್ದರೆ ಅದು ಭಾರತ. ನೀವು ಅತಿಕ್ರಮಣ ಮಾಡುತ್ತಿದ್ದೀರಿ, ಅಲ್ಲಿ ನಿರ್ಮಿಸುತ್ತಿದ್ದೀರಿ, ಆದರೆ ಕಾನೂನು ಹಕ್ಕು ನಮ್ಮದು' ಎಂದು ಹೇಳಿದರು.
ಕೆಲವರ ದೌರ್ಬಲ್ಯದಿಂದ ಪಿಒಕೆ (PoK) ಬಿಟ್ಟುಕೊಟ್ಟಿದ್ದು, ಅವರ ತಪ್ಪು ನಿರ್ಧಾರಗಳೇ ಪಿಓಕೆ ಮೇಲಿನ ಹಿಡಿತ ಕಳೆದುಕೊಳ್ಳಲು ಕಾರಣ ಎಂದು ನೆಹರೂ(Neharu) ಅವರ ಮೇಲೆ ಪರೋಕ್ಷವಾಗಿ ಆರೋಪಿಸಿದರು. ವಿಶ್ವ ವೇದಿಕೆಯಲ್ಲಿ ನಾವು ನಮ್ಮ ಸ್ಥಾನವನ್ನು ಗಟ್ಟಿಯಾಗಿಟ್ಟುಕೊಳ್ಳಬೇಕು ಮತ್ತು ಎಂದಿಗೂ ಆತ್ಮಸ್ಥೆರ್ಯವನ್ನು ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.