For the best experience, open
https://m.hosakannada.com
on your mobile browser.
Advertisement

Dingaleshwara Shri: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿದ್ದೇ ಪ್ರಹ್ಲಾದ್ ಜೋಶಿ - ದಿಂಗಾಲೇಶ್ವರ ಶ್ರೀಗಳಿಂದ ಸ್ಪೋಟಕ ಮಾಹಿತಿ

Dingaleshwara Shri: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿದ್ದೇ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಎಂದು ಜೋಶಿ ವಿರುದ್ಧ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ.
12:14 PM Mar 28, 2024 IST | ಸುದರ್ಶನ್
UpdateAt: 12:14 PM Mar 28, 2024 IST
dingaleshwara shri  ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿದ್ದೇ ಪ್ರಹ್ಲಾದ್ ಜೋಶಿ   ದಿಂಗಾಲೇಶ್ವರ ಶ್ರೀಗಳಿಂದ ಸ್ಪೋಟಕ ಮಾಹಿತಿ
Advertisement

Dingaleshwara Shri: ತಾನು ಮುಖ್ಯಮಂತ್ರಿ ಆಗಬೇಕೆಂದು ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿದ್ದೇ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಎಂದು ಜೋಶಿ ವಿರುದ್ಧ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ(Dingaleshwara Shri) ಕಿಡಿಕಾರಿದ್ದಾರೆ.

Advertisement

ಇದನ್ನೂ ಓದಿ: Actor Siddharth: ಖ್ಯಾತ ನಟ ಸಿದ್ಧಾರ್ಥ್‌ ಮೊದಲ ಪತ್ನಿ ಯಾರು?

ಹೌದು, ಬಿಎಸ್‌ ಯಡಿಯೂರಪ್ಪ(B S Yadiyurappa)ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಪ್ರಹ್ಲಾದ್‌ ಜೋಶಿ(Prahalad Joshi), ತಾವೇ ಸಿಎಂ ಆಗಬೇಕೆಂದು ಪ್ರಲ್ಹಾದ್ ಜೋಶಿ ಜಾಕೆಟ್ ಹೊಲಿಸಿದ್ರು, ನಮ್ಮ ಹೋರಾಟದಿಂದಾಗಿ ಅವರ ಜಾಕೆಟ್ ಪಾಕೆಟ್ ಸೇರಿತು, ನಾವು ಯಾರ ಒತ್ತಡಕ್ಕೂ ಒಳಗಾಗುವ ಸ್ವಾಮೀಜಿಗಳಲ್ಲ. ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಧಾರವಾಡ ಲೋಕಸಭಾ ಚುನಾವಣೆ ಟಿಕೆಟ್ ತಪ್ಪಿಸಲು ಹುನ್ನಾರ ನಡೆಸಲಾಯಿತು. ಆದ್ದರಿಂದ ಪ್ರತಿಯೊಂದು ರೀತಿಯಲ್ಲಿ ನಮಗೆ ಅನ್ಯಾಯ ಆಗಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿರುದ್ಧ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕಿಡಿಕಾರಿದ್ದಾರೆ.

Advertisement

ಇದನ್ನೂ ಓದಿ: Viral News: ತಲೆಗೆ ದುಪ್ಪಟ ಕಟ್ಟಿಕೊಂಡು ಫೋನಲ್ಲಿ ಮಾತನಾಡುತ್ತಾ ಸ್ಕೂಟಿ ಓಡಿಸುತ್ತಿದ್ದ ಮಹಿಳೆಯ ವಿಡಿಯೋ ವೈರಲ್

ಇಷ್ಟೇ ಅಲ್ಲದೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬದಲಾಯಿಸಿ, ಜೋಶಿ ಟಿಕೆಟ್ ವಾಪಸ್ ಪಡೆಯಿರಿ. ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿ- ಧಾರವಾಡ ಕ್ಷೇತ್ರದಿಂದ ಹೊರಗೆ ಹಾಕಿದಂತೆ, ಪ್ರಹ್ಲಾದ್ ಜೋಶಿಗೂ ಧಾರವಾಡ ಬಿಟ್ಟು ಬೇರೆ ಕ್ಷೇತ್ರದ ಟಿಕೆಟ್ ಕೊಡಿ. ಇಲ್ಲವಾದರೆ ಏ.2ನೇ ತಾರೀಕಿನ ನಂತರ ಕಾಯ್ದು ನೋಡಿ, ಮುಂದಿನದನ್ನು ನಾವು ತೀರ್ಮಾನ ಮಾಡುತ್ತೇವೆ ಎಂದರು.

ಇನ್ನು ಮುಂದುವರೆದು ಮಾತನಾಡಿದ ಅವರು ಪ್ರಲ್ಹಾದ್ ಜೋಶಿಯವರು ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ತೋರಿಸಿದ್ದಾರೆ. ಮಗಳ ಮದುವೆಗೆ ಹೋದರೆ ಅವಮಾನಿಸಿ ಕಳಿಸಿದ್ದಾರೆ. ಸ್ವಾಮೀಜಿಗಳಿಗೆ 2 ಸಾವಿರ ರೂ. ಕೊಟ್ಟು ಕಳಿಸಿದ್ದಾರೆ. ಹಣ, ಅಧಿಕಾರದ ಮದ ಬಂದಿದೆ. ಅವರನ್ನು ಕೆಳಗೆ ಇಳಿಸಬೇಕು ಅನ್ನೋ ನಿರ್ಣಯಕ್ಕೆ ಬಂದಿದ್ದಾರೆ. ಮಠಾಧೀಶರು ಯಾವ ಪಕ್ಷದ ವಿರೋಧಿಗಳೂ ಅಲ್ಲ, ಅಭಿಮಾನಿಗಳೂ ಅಲ್ಲ. ಪ್ರಲ್ಹಾದ್ ಜೋಶಿಯ ವ್ಯಕ್ತಿತ್ವದ ಕಾರಣ ಅವರನ್ನು ಕೆಳಗೆ ಇಳಿಸುವ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ.

Advertisement
Advertisement
Advertisement