Excise Policy Scam: ಇಡಿ ಬಂಧನದ ವಿರುದ್ಧ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ದೆಹಲಿ ಹೈ ಕೋರ್ಟ್
Excise Policy Scam: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
07:35 AM Apr 10, 2024 IST
|
ಸುದರ್ಶನ್
UpdateAt: 07:37 AM Apr 10, 2024 IST
Advertisement
Excise Policy Scam: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
Advertisement
ಕೇಜ್ರಿವಾಲ್ ಅವರ ಬಂಧನವು ಕಾನೂನಿಗೆ ವಿರುದ್ಧವಾಗಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಬಂಧನವನ್ನು ಕಾನೂನುಬಾಹಿರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಹೇಳಿದರು.
ವೀಡಿಯೊ ಕಾನ್ಸರೆನ್ಸಿಂಗ್ ಮೂಲಕ ನನ್ನನ್ನು ಪ್ರಶ್ನಿಸಬಹುದಿತ್ತು ಎಂಬ ಕೇಜ್ರಿವಾಲ್ ಅವರ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಲಯವು "ತನಿಖೆಯನ್ನು ಹೇಗೆ ಮಾಡಬೇಕೆಂದು ಆರೋಪಿಗೆ ನಿರ್ಧರಿಸಲು ಅವಕಾಶವಿಲ್ಲ. ಆರೋಪಿಯ ಅನುಕೂಲಕ್ಕೆ ತಕ್ಕಂತೆ ವಿಚಾರಣೆ ನಡೆಯುವುದಿಲ್ಲ. ಈ ನ್ಯಾಯಾಲಯವು
Advertisement
ಸಾರ್ವಜನಿಕರಿಗೊಂದು, ಸಾರ್ವಜನಿಕ ಸೇವಕರಿಗೆ
ಒಂದು ರೀತಿಯಲ್ಲಿ ವಿಚಾರಣೆ ಮಾಡಲಾಗುವುದಿಲ್ಲ" ಎಂದು ಹೇಳಿದೆ.
Advertisement