Excise Policy Scam: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಮತ್ತೆ ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನ
Excise Policy Scam: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಸೋಮವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದನ್ನೂ ಓದಿ: Iftar Party Mangalore: ಮಂಗಳೂರು; ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಆಯೋಜನೆ; ನೋಟಿಸ್ ಜಾರಿ
ಇಡಿ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಹಾಜರುಪಡಿಸಲಾಯಿತು.
ಇದನ್ನೂ ಓದಿ: Bantwala Crime: ಬಂಟ್ವಾಳ: ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪಟ್ರಮೆ ಹೊಳೆಯಲ್ಲಿ ಶವವಾಗಿ ಪತ್ತೆ
ಜಾರಿ ನಿರ್ದೇಶನಾಲಯದ (ಇಡಿ) ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಕೇಜ್ರಿವಾಲ್ ಅವರ ವಿಚಾರಣೆಯ ಸಮಯದಲ್ಲಿ ಸರಿಯಾದ ಉತ್ತರಗಳು ನೀಡುತ್ತಿಲ್ಲ ಮತ್ತು ಅವರು ತಮ್ಮ ಫೋನ್ ಪಾಸ್‌ವರ್ಡ್‌ಗಳನ್ನು ನೀಡಲು ನಿರಾಕರಿಸಿದ್ದಾರೆ ಎಂದು ವಾದ ಮಂಡಿಸಿದರು.
ನಂತರ ರಾಜು ಅವರು ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರಿದರು ಮತ್ತು "ನಾವು ಹೆಚ್ಚಿನ ಬಂಧನವನ್ನು ಕೇಳುತ್ತಿಲ್ಲ. ಸೆಂಥಿಲ್ ಬಾಲಾಜಿ ಪ್ರಕರಣದಲ್ಲಿ ಎಸ್‌ಸಿ ತೀರ್ಪಿನ ಪ್ರಕಾರ ಹೆಚ್ಚಿನ ಕಸ್ಟಡಿ ಕೇಳುವ ಹಕ್ಕಿಗೆ ಒಳಪಟ್ಟು ನಾವು ನ್ಯಾಯಾಂಗ ಬಂಧನವನ್ನು ಕೇಳುತ್ತಿದ್ದೇವೆ" ಎಂದು ಹೇಳಿದರು.
ಇದಕ್ಕೆ ಒಪ್ಪಿದ ನ್ಯಾಯಾಲಯ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.