For the best experience, open
https://m.hosakannada.com
on your mobile browser.
Advertisement

Relationship: ಎಲ್ಲವೂ ಪ್ರೀತಿಯ ಹೆಂಡ್ತಿಗಾಗಿ... ಈತ ಪ್ರಯಾಣಿಸುವ ದೂರ ನಿಮ್ಮ ಊಹೆಗೂ ಮೀರಿದ್ದು!

Relationship: ಇದು ತನ್ನ ಪ್ರೀತಿಯ ಮಡದಿಗಾಗಿ ದಿನನಿತ್ಯ ಬರೋಬ್ಬರಿ 320 ಕಿಲೋ ಮೀಟರ್ ಪ್ರಯಾಣಿಸುವ ಹೃದಯವಂತ ಪತಿಯೊಬ್ಬನ ಕಥೆ.
04:10 PM Jul 24, 2024 IST | ಕಾವ್ಯ ವಾಣಿ
UpdateAt: 04:10 PM Jul 24, 2024 IST
relationship  ಎಲ್ಲವೂ ಪ್ರೀತಿಯ ಹೆಂಡ್ತಿಗಾಗಿ    ಈತ ಪ್ರಯಾಣಿಸುವ ದೂರ ನಿಮ್ಮ ಊಹೆಗೂ ಮೀರಿದ್ದು
Advertisement

Relationship: ಇದು ತನ್ನ ಪ್ರೀತಿಯ ಮಡದಿಗಾಗಿ ದಿನನಿತ್ಯ ಬರೋಬ್ಬರಿ 320 ಕಿಲೋ ಮೀಟರ್ ಪ್ರಯಾಣಿಸುವ ಹೃದಯವಂತ ಪತಿಯೊಬ್ಬನ ಕಥೆ. ಛೆ ನನಗೂ ಇಂತಹ ಒಬ್ಬ ಅತಿ ಪ್ರೀತಿಯ ಪತಿ ಇರಬೇಕಿತ್ತು ಎಂದು ಮಹಿಳೆಯರು ಜೆಲಸ್ ಆಗುವಂತಹ ಸ್ಟೋರಿ ಇದು. ಜಸ್ಟ್ ರೀಡ್ !

Advertisement

ಹೌದು, 31 ವರ್ಷದ ವ್ಯಕ್ತಿಯೋರ್ವ ತನ್ನ ಪ್ರೀತಿಯ ಮಡದಿಗಾಗಿ ಪ್ರತಿನಿತ್ಯ 320 ಕಿ.ಮೀ ಪ್ರಯಾಣಿಸುತ್ತಾರೆ ಅಂದರೆ ನೀವು ನಂಬಲೇ ಬೇಕು. ತಮ್ಮ ಸುದೀರ್ಘ ಪ್ರಯಾಣದ ಮೂಲಕವೇ ಈ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ. ಲಿನ್ ಶು ಎಂಬವರು ಕೆಲಸಕ್ಕೆ ಹಾಜರಾಗಲು 160 ಕಿಮೀ ದೂರದಿಂದ ಪ್ರಯಾಣ ಮಾಡುತ್ತಾರೆ. ಒಟ್ಟು ಎರಡು ಕಡೆಯ ಪ್ರಯಾಣ 320 ಕಿಮೀ ಆಗುತ್ತೆ. ಒಟ್ಟಿನಲ್ಲಿ ಮನೆಯಿಂದ ಕಚೇರಿಗೆ ಬಂದು ಕೆಲಸ ಆರಂಭಿಸಲು ಲಿನ್ ಶು ಅವರಿಗೆ ಬರೋಬ್ಬರಿ ನಾಲ್ಕು ಗಂಟೆಗಳ ಸಮಯ ಬೇಕಾಗುತ್ತದೆ. ಮತ್ತೆ ಮನೆಗೆ ಹಿಂದಿರುಗಲು ಇದೇ ಮಾರ್ಗವನ್ನು ಬಳಸುತ್ತಾರಂತೆ.

Advertisement

ಲಿನ್ ಶು ಪೂರ್ವ ಚೀನಾದ ಶಾಂಡಾಂಗ್ ಪ್ರಾಂತ್ಯದ ವೈಫಾಂಗ್ ನಿವಾಸಿಯಾಗಿದ್ದು, ಬೆಳಗ್ಗೆ 5 ಗಂಟೆಗೆ ಏಳುವ ಲಿನ್, 5.20ಕ್ಕೆ ಮನೆಯಿಂದ ಹೊರಡುತ್ತಾರೆ. ಬೈಕ್ ಮೂಲಕ ಮನೆಯಿಂದ 30 ನಿಮಿಷದಲ್ಲಿ ರೈಲ್ವೆ ನಿಲ್ದಾಣ ತಲುಪುತ್ತಾರೆ. ಸರಿಯಾಗಿ ಬೆಳಗ್ಗೆ 6.15ಕ್ಕೆ ರೈಲು ಪ್ರಯಾಣ ಆರಂಭ ಆಗಿ  7.46ಕ್ಕೆ ಕ್ವಿಂಡ್ಗೊ ರೈಲು ನಿಲ್ದಾಣ ತಲುಪುತ್ತಾರೆ. ಇಲ್ಲಿಂದ 15 ನಿಮಿಷ ಸಬ್‌ವೇಯಲ್ಲಿ ತೆರಳಿದ್ರೆ ಕಚೇರಿ ತಲುಪುತ್ತಾರೆ.

9 ಗಂಟೆಗೆ ಕೆಲಸ ಆರಂಭಿಸುವ ಮೊದಲು ವಿಶ್ರಾಂತಿ ಪಡೆದುಕೊಂಡು ಊಟ ತಿಂಡಿ ಮುಗಿಸಿ ನಂತರ ಸರಿಯಾಗಿ 9 ಗಂಟೆಗೆ ಕೆಲಸಕ್ಕೆ ಹಾಜರಾಗುತ್ತಾರೆ. ಇಷ್ಟು ದೀರ್ಘ ಪ್ರಯಾಣದ ಬಗ್ಗೆ ಲಿನ್ ಶು ಅವರನ್ನು ಕೇಳಿದರೆ ಎಲ್ಲವೂ ತನ್ನ ಪ್ರೀತಿಗಾಗಿ ಎಂದು ಹೇಳಿ ಮುಗಳ್ನಗುತ್ತಾರೆ ಎನ್ನುವ ಉತ್ತರ ಸಿಗುತ್ತೆ. ಪತ್ನಿಯ ಪ್ರೀತಿಯಿಂದ ಪ್ರಯಾಣ ಬೇಸರವನ್ನುಂಟು ಮಾಡಲ್ಲ. ಪರಸ್ಪರ ಏಳು ವರ್ಷ ಪ್ರೀತಿಸಿದ ನಂತರ ಮೇನಲ್ಲಿ ಲಿನ್  ಮದುವೆಯಾಗಿದ್ದಾರೆ.

ಮದುವೆಗೂ (Relationship) ಮುನ್ನ ಬಾಡಿಗೆಯ ಫ್ಲ್ಯಾಟ್‌ನಲ್ಲಿ ಲಿನ್ ವಾಸವಾಗಿದ್ದು, ಇಲ್ಲಿಂದ ಕಚೇರಿಗೆ ಒಂದು ಗಂಟೆ ಪ್ರಯಾಣ ಮಾಡಬೇಕಿತ್ತು. ಆಗ ಲಿನ್ ಮಡದಿ ವೈಫಾಂಗ್‌ನಲ್ಲಿ ವಾಸವಾಗಿದ್ದರು ಮದುವೆ ಬಳಿಕ ವೈಫಾಂಗ್‌ನಲ್ಲಿಯೇ ಉಳಿಯಲು ಲಿನ್ ನಿರ್ಧರಿಸಿ, ಪ್ರೀತಿಯಿಂದ ಸುದೀರ್ಘವಾದ ಪ್ರಯಾಣವನ್ನು ಆಯ್ಕೆ ಮಾಡಿಕೊಂಡೆ ಎಂದು ಲಿನ್ ಹೇಳುತ್ತಾರೆ.

ನನ್ನ ಪ್ರಯಾಣದ ಪ್ರತಿ ಕ್ಷಣವನ್ನು ಆನಂದಿಸುತ್ತೇನೆ. ಇನ್ನು ಪತ್ನಿ ಸಹ ಕ್ವಿಂಡ್ಗೊದಲ್ಲಿ ಕೆಲಸ ಹುಡುಕುತ್ತಿದ್ದಾರೆ. ಕೆಲಸ ಸಿಕ್ಕ ಬಳಿಕ ಶಾಶ್ವತವಾಗಿ ಕ್ವಿಂಡ್ಗೊ ಅಥವಾ ಅದರ ಸಮೀಪದಲ್ಲಿಯೇ ಸುಂದರವಾದ ಮನೆ ಮಾಡ್ಕೊಂಡು ಜೀವನ ನಡೆಸಲು ಪ್ಲಾನ್ ಮಾಡಿಕೊಂಡಿದ್ದೇನೆ. ಇದು ತಾತ್ಕಾಲಿಕ ಪ್ರಯಾಣವಾಗಿದೆ. ಆದ್ರೆ ಈ ದಿನಗಳು ನನ್ನ ಜೀವನದಲ್ಲಿ ಮುಖ್ಯವಾದ ನೆನಪು ಆಗಿರಲು ಸಾಧ್ಯ ಅನ್ನೋದು ನನ್ನ ನಂಬಿಕೆಯಾಗಿದೆ ಎಂದು ಲಿನ್ ಹೇಳುತ್ತಾರೆ. ಸದ್ಯ  ಲಿನ್ ಶು ಕಥೆಯ ವಿಡಿಯೋ 70 ಲಕ್ಷ ಅಧಿಕ ವ್ಯೂವ್ ಪಡೆದುಕೊಂಡಿದ್ದು, ಲಿನ್ ಶು ಅವರ ಪ್ರೇಮ ಕಥೆ ಅದ್ಭುತ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಂತ ಪ್ರೇಮ ಕಥೆ ಇನ್ನೊಬ್ಬರ ಜೀವನಕ್ಕೂ ದಾರಿದೀಪ ಆಗಬಹುದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

Advertisement
Advertisement
Advertisement