For the best experience, open
https://m.hosakannada.com
on your mobile browser.
Advertisement

Shruti Haasan: ಕೋಟಿ ಕೋಟಿ ಆಸ್ತಿ ಇದ್ದರೂ 'ಅದೊಂದು ಸಮಸ್ಯೆ' ಇದೆ 'ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ' ಎಂದ ಶ್ರುತಿ ಹಾಸನ್!

Shruti Haasan: ಕೋಟಿ ಕೋಟಿ ಆಸ್ತಿ ಇದ್ದರೂ 'ಅದೊಂದು ಸಮಸ್ಯೆ' ಇದೆ 'ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ' ಎಂದು ಶ್ರುತಿ ಹಾಸನ್ ಎಂದಿದ್ದಾದ್ರೂ ಯಾಕೆ? ಆ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.
01:39 PM Jun 03, 2024 IST | ಸುದರ್ಶನ್
UpdateAt: 01:39 PM Jun 03, 2024 IST
shruti haasan  ಕೋಟಿ ಕೋಟಿ ಆಸ್ತಿ ಇದ್ದರೂ  ಅದೊಂದು ಸಮಸ್ಯೆ  ಇದೆ  ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ  ಎಂದ ಶ್ರುತಿ ಹಾಸನ್
Advertisement

Shruti Haasan: ಕೋಟಿ ಕೋಟಿ ಆಸ್ತಿ ಇದ್ದರೂ 'ಅದೊಂದು ಸಮಸ್ಯೆ' ಇದೆ 'ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ' ಎಂದು ಶ್ರುತಿ ಹಾಸನ್ ಎಂದಿದ್ದಾದ್ರೂ ಯಾಕೆ? ಆ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.

Advertisement

ಸೌತ್‌ನ ಸ್ಟಾರ್ ಆಗಿರುವ, ಕಮಲ್ ಹಾಸನ್ (kamal Haasan) ಮಗಳು ಶ್ರುತಿ ಹಾಸನ್‌ ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತ ಕೋಟಿ ಕೋಟಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಇದೀಗ ಶ್ರುತಿ (Shruti Haasan) ತಮಗಿರುವ ಪಿಸಿಓಎಸ್ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

ಈ ನಟಿ ಇತ್ತೀಚೆಗೆ ಬಾಯ್‌ಫ್ರೆಂಡ್‌, ಬ್ರೇಕಪ್‌ ಬಗ್ಗೆ ಸದ್ದು ಮಾಡಿದ್ದರು. ಬಹುಕಾಲದ ಗೆಳೆಯ ಶಾಂತನು ಹಜಾರಿಕಾ ಜತೆಗೆ ಲೀವ್‌ ಇನ್ ರಿಲೇಷನ್‌ಶಿಪ್‌ನಲ್ಲಿದ್ದ‌ ಶ್ರುತಿ, ಆತನಿಂದಲೂ ಇತ್ತೀಚೆಗಷ್ಟೇ ದೂರವಾಗಿದ್ದರು. ಇಬ್ಬರ ನಡುವಿನ ಪ್ರೀತಿಯೂ ಮುರಿದು ಬಿದ್ದಿತ್ತು. ಆತನ ಜತೆಗಿನ ಫೋಟೋಗಳನ್ನೂ ಅಳಿಸಿ ಹಾಕಿದ್ದರು. ಸೋಷಿಯಲ್‌ ಮೀಡಿಯಾದಲ್ಲೂ ಈ ವಿಚಾರ ವೈರಲ್‌ ಆಗಿತ್ತು. ಆದರೆ, ಈ ಬಗ್ಗೆ ಶ್ರುತಿ ಹಾಸನ್ ಮಾತ್ರ ಮಾತು ಬಿಚ್ಚಿರಲಿಲ್ಲ.‌ ಈ ಪ್ರೀತಿ, ಬ್ರೇಕಪ್‌ ವದಂತಿಗಳ ನಡುವೆಯೇ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆಯೂ ಶ್ರುತಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ತನಗೆ ಪಿಸಿಒಎಸ್‌ (Polycystic Ovary Syndrome) ಸಮಸ್ಯೆ ಇದೆ. ಅದರಿಂದ ಬಳಲುತ್ತಿದ್ದೇನೆ ಎಂದು ನೋವಿನ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

Advertisement

'ನನಗೆ ಬ್ಯಾಡ್ ಪಿರಿಯಡ್ಸ್ ಸಮಸ್ಯೆ ಇದೆ. ಮೊದಲಿನಿಂದಲೂ ಈ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಈಗಲೂ ಆ ನೋವಿನಿಂದ ನರಳುತ್ತಿದ್ದೇನೆ. ಮುಟ್ಟಿನ ಸಮಯದಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗುವುದಿಲ್ಲ. ಆ ಸಮಸ್ಯೆಯಿಂದ ನನ್ನ ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ' ಎಂದು ಮುಟ್ಟಿನ ದಿನಗಳ ನೋವನ್ನು ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.‌

ಇದನ್ನೂ ಓದಿ: ರಘುಪತಿ ಭಟ್‌ ಪರ ಪೋಸ್ಟ್‌ ಹಾಕಿದ ಪ್ರತಾಪ್‌ ಸಿಂಹ ; ತಕ್ಷಣ ಡಿಲೀಟ್‌, ಕಾರಣವೇನು?

ಇನ್ನು ಋತುಸ್ರಾವದ ಸಮಯದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಶ್ರುತಿ, ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ದೈಹಿಕ ಮಾತ್ರವಲ್ಲದೆ, ಮಾನಸಿಕವಾಗಿಯೂ ಆಕೆ ಬಳಲುತ್ತಾಳೆ. ಮಾಸಾಂತ್ಯದ ದಿನಗಳಲ್ಲಿ ಒಂದು ರೀತಿ ಆಕೆ ತನ್ನ ದೇಹದ ಜತೆಗೆ ಯುದ್ದಕ್ಕೆ ನಿಂತಿರುತ್ತಾಳೆ. ಅದೊಂದು ರೀತಿ ಎರಡು ಅಂಚಿನ ಕತ್ತಿ.

ಇನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡುತ್ತಿರುವಾಗ, ಪಿರಿಯಡ್ ಪ್ರಾಬ್ಲಂ ಆದರೆ, ಅದರಂಥ ನರಕ ಇನ್ನೊಂದಿಲ್ಲ. ಇದರಿಂದಾಗಿ ನಾನು ಸಾಕಷ್ಟು ದೊಡ್ಡ ದೊಡ್ಡ ಆಫರ್‌ಗಳನ್ನು ಕಳೆದುಕೊಂಡಿದ್ದೇನೆ. ಆದರೆ ಕೆಲವು ನಿರ್ಮಾಪಕರು ಕೋಟಿಗಟ್ಟಲೆ ಖರ್ಚು ಮಾಡಿ ಶೂಟಿಂಗ್ ಮಾಡುತ್ತಿರುವಾಗ ನಿಮ್ಮ ಆರೋಗ್ಯ ಸಮಸ್ಯೆಯಿಂದ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.‌ ಅಂಥ ಎಷ್ಟೋ ಸಂದರ್ಭಗಳನ್ನು ನಾನು ಎದುರಿಸಿದ್ದೇನೆ. ಪಿರಿಯಡ್‌ ಸಮಯದಲ್ಲಿಯೇ ಅತಿಯಾದ ನೋವಿನಲ್ಲಿಯೂ ಡಾನ್ಸ್‌ ಮಾಡಿದ್ದೇನೆ. ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದು ಅನಿವಾರ್ಯ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

ಇದನ್ನೂ ಓದಿ: Air show plane crash: ಏರ್ ಶೋ ವೇಳೆ ಯುದ್ಧ ವಿಮಾನಗಳ ಭೀಕರ ಡಿಕ್ಕಿ - ಭಯಾನಕ ವಿಡಿಯೋ ವೈರಲ್ !!

Advertisement
Advertisement
Advertisement