Gauri Khan: ಶಾರುಖ್ ಖಾನ್'ನ ಮದ್ವೆ ಆಗಿ 30 ವರ್ಷ ಆದ್ರೂ ಪತ್ನಿ ಗೌರಿ ಖಾನ್ ಪಾಲಿಸೋ ಧರ್ಮ ಯಾವುದು?
Gauri Khan: "ನಾನು ಶಾರೂಖ್ ಖಾನ್ ಧರ್ಮಕ್ಕೆ ಗೌರವ ನೀಡುವೆ. ಹಾಗಂತ ನಾನು ಮತಾಂತರ ಆಗಿದ್ದೇನೆ ಎಂದಲ್ಲ. ಶಾರೂಖ್ ಖಾನ್ ಕೂಡ ನನ್ನ ಧರ್ಮಕ್ಕೆ ಗೌರವ ನೀಡುತ್ತಾನೆ" ಎಂದು ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್(Gauri Khan) ಹೇಳಿದ್ದಾರೆ.
https://www.instagram.com/reel/C7b3zmlyzbg/?igsh=MXY0azF1Z3BzODlk
ಬಾಲಿವುಡ್ ನಟ ಶಾರೂಖ್ ಖಾನ್(Shah rukh Khan) ಮತ್ತು ಇಂಟೀರಿಯರ್ ಡಿಸೈನರ್ ಗೌರಿ ಅಕ್ಟೋಬರ್ 25, 1991ರಂದು ವಿವಾಹವಾಗಿದ್ದರು. ಅವರು ಮದುವೆಯಾಗಿ ಸುಮಾರು 30 ವರ್ಷಗಳೇ ಕಳೆದಿವೆ. ಆದರೂ ಇಂದಿಗೂ ಮೂರು ಮಕ್ಕಳ ತುಂಬು ಸಂಸಾರದೊಂದಿಗೆ ಅನ್ಯೋನ್ಯವಾಗಿ ಜೀವಿಸುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಂದಹಾಗೆ ಇತ್ತೀಚೆಗೆ ಕಾಫಿ ವಿತ್ ಕರಣ್ ಮೊದಲ ಸೀಸನ್‌ನಲ್ಲಿ ಗೌರಿ ಖಾನ್ ವಿವಾಹದ ಬಳಿಕ ತಮ್ಮ ಧಾರ್ಮಿಕತೆ, ನಂಬಿಕೆ ಇತ್ಯಾದಿ ವಿಚಾರಗಳ ಕುರಿತು ತಮ್ಮ ಅಭಿಪ್ರಾಯ, ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Bhavani Revanna: ಭವಾನಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ - ಕೋರ್ಟ್ ನಲ್ಲಿ ನಡೆದ ವಾದ, ಪ್ರತಿವಾದಗಳು ಏನು?
ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಿರ್ಮಾಪಕಿ ಗೌರಿ ಖಾನ್ ಪ್ರೀತಿಸಿ ಮದುವೆಯಾದ್ರು. ಇಬ್ಬರ ಧರ್ಮ ಬೇರೆಯಾಗಿರುವುದರಿಂದ ಎರಡೂ ಫ್ಯಾಮಿಲಿ ಕೂಡ ವಿರೋಧ ವ್ಯಕ್ತಪಡಿಸಿದ್ರಂತೆ. ಎಲ್ಲರನ್ನ ಒಪ್ಪಿಸಿ ಒಂದಾದ ಈ ಜೋಡಿ ಬಾಲಿವುಡ್ ಪವರ್ಫುಲ್ ಕಪಲ್ ಆಗಿದ್ದಾರೆ. ಸಿಂಪಲ್ ಆಗಿ ಮದುವೆ ಮಾಡಿಕೊಂಡು ಮುಂಬೈನತ್ತ ಬಂದ ಈ ಜೋಡಿ ಆರಂಭದಲ್ಲಿ ನಾನಾ ಕಷ್ಟ ಕೂಡ ಎದುರಿಸಿದ್ದಾರೆ.
ಇನ್ನು ತಮ್ಮ ಜೀವನದ ಕುರಿತು ಮಾತನಾಡಿದ ಗೌರಿ, ತಾವು ಮತಾಂತರ ಆಗಿದ್ದಾರ ಎಂಬ ಪ್ರಶ್ನೆಗೆ ಬಹಳ ಖಡಕ್ ಆಗಿ, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುವಂತಹ ಉತ್ತರವನ್ನೇ ನೀಡಿದ್ದಾರೆ. ಅದೇನೆಂದರೆ ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ. ಇದರಲ್ಲಿ ಒಂದು ಸಮತೋಲವಿದೆ. ನಾನು ಶಾರೂಖ್ ಖಾನ್ ಧರ್ಮಕ್ಕೆ ಗೌರವ ನೀಡುತ್ತೇನೆ. ಇದರ ಅರ್ಥ ನಾನು ಮುಸ್ಲಿಂ ಧರ್ಮಕ್ಕೆ ಕನ್ವರ್ಟ್ ಆಗಿದ್ದೇನೆ ಎಂದಲ್ಲ. ನಾನು ಮುಸ್ಲಿಂ ಆಗಿದ್ದೇನೆ ಎಂದಲ್ಲ. ನನಗೆ ಇವುಗಳಲ್ಲಿ ನಂಬಿಕೆ ಇಲ್ಲ. ನನ್ನ ಪ್ರಕಾರ ಪ್ರತಿಯೊಬ್ಬರೂ ಇಂಡಿವ್ಯೂಜಲ್ ವ್ಯಕ್ತಿಗಳಾಗಿದ್ದಾರೆ. ಎಲ್ಲರೂ ಅವರ ಧರ್ಮವನ್ನು ಅನುಸರಿಸುತ್ತಾರೆ. ಇಂತಹ ಸಮಯದಲ್ಲಿ ಯಾವುದೇ ಅಗೌರವ ಇರುವುದಿಲ್ಲ. ಶಾರೂಖ್ ಖಾನ್ ಕೂಡ ನನ್ನ ಧರ್ಮಕ್ಕೆ ಅಗೌರವ ನೀಡುವುದಿಲ್ಲ ಎಂದಿದ್ದಾರೆ.
ಅಲ್ಲದೆ ಮನೆ ಹಾಗೂ ಮಕ್ಕಳ ಬಗ್ಗೆ ಮಾತಾಡಿದ ಗೌರಿ ‘ಆರ್ಯನ್ ಖಾನ್ ಆಗಾಗ ನಾನು ಮುಸ್ಲಿಂ ಎಂದು ಹೇಳುತ್ತಿರುತ್ತಾನೆ. ಹೀಗಾಗಿ ಅವನು ಶಾರುಖ್ ಧರ್ಮವನ್ನೇ ಫಾಲೋ ಮಾಡಬಹುದು ಎಂದುಕೊಂಡಿದ್ದೇನೆ ಎಂದ್ರು. ಇವು ಸಾಮಾನ್ಯವಾಗಿದೆ ಎಂದ್ರು. ಸದ್ಯ ಗೌರಿ ಅವರ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.