ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ester Noronha: 'ಒಂಟಿ ಜೀವನ ನನ್ನಿಂದ ಸಾಧ್ಯವಿಲ್ಲ' ಮತ್ತೊಬ್ಬ ಜೊತೆಗಾರ ಬೇಕೆಂದ ಕನ್ನಡ ನಟಿ!

Ester Noronha: 2023ರಲ್ಲಿ ತೆರೆಕಂಡ ಇನಾಮ್‌ದಾರ್‌ ಸಿನಿಮಾದಲ್ಲಿ ನಟಿಸಿದ್ದ ನಟಿ ಎಸ್ತರ್‌ ನರೋನ್ಹಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದಾರೆ
11:17 AM May 15, 2024 IST | ಸುದರ್ಶನ್
UpdateAt: 11:20 AM May 15, 2024 IST
Advertisement

Ester Noronha: ಕನ್ನಡದೊಂದಿಗೆ ತೆಲುಗಿನಲ್ಲಿ ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುವ ಎಸ್ತರ್‌ ನರೋನ್ಹಾ (Ester Noronha) ಒಂದು ಹೇಳಿಕೆಯಿಂದ ಈಗ ಭರ್ಜರಿ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ 'ಉಸಿರಿಗಿಂತ ನೀನೇ ಹತ್ತಿರ', ನಾವಿಕ, ಚೇತನ್‌ ಕುಮಾರ್‌ ಅಹಿಂಸಾ ನಟಿಸಿದ್ದ ಅತಿರಥ, ನುಗ್ಗೇಕಾಯಿ, ಲಂಕೇ, ಡಿಎನ್‌ಎ, ಲೋಕಲ್‌ ಟ್ರೇನ್‌ 2023ರಲ್ಲಿ ತೆರೆಕಂಡ ಇನಾಮ್‌ದಾರ್‌ ಸಿನಿಮಾದಲ್ಲಿ ನಟಿಸಿದ್ದ ನಟಿ ಎಸ್ತರ್‌ ನರೋನ್ಹಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದಾರೆ.

Advertisement

ಇದನ್ನೂ ಓದಿ: Health Tip: ನಿದ್ದೆ ಮಾಡುವಾಗ ಈ ಭಂಗಿಯಲ್ಲಿ ಮಲಗ್ತೀರಾ? ಹಾಗಿದ್ರೆ ನೀವು ತುಂಬಾ ಅದೃಷ್ಟವಂತರು!

2019ರಲ್ಲಿ ಗಾಯಕ ಹಾಗೂ ರಾಪರ್‌ ನೋಯೆಲ್‌ ಸೀನ್‌ರನ್ನು ವಿವಾಹವಾಗಿದ್ದ ಎಸ್ತರ್‌ ನ ವೈವಾಹಿಕ ಜೀವನ ಕೇವಲ 16 ದಿನಗಳಷ್ಟೇ ಇತ್ತು. ಅಷ್ಟರಲ್ಲೇ ನೋಯೆಲ್‌ನಿಂದ ಬೇರೆಯಾಗಿದ್ದ ಎಸ್ತರ್‌, ಒಂದು ವರ್ಷದ ಬಳಿಕ ಆತನಿಂದ 2020 ರಲ್ಲಿ ವಿಚ್ಛೇದನ ಪಡೆದರು.

Advertisement

ಇದನ್ನೂ ಓದಿ: Accident: ಪುತ್ತೂರು; ಬಸ್ ಮತ್ತು ಬೈಕ್‌ ನಡುವೆ ಭೀಕರ ಅಪಘಾತ! ಬೈಕ್ ಸವಾರ ಸ್ಥಳದಲ್ಲೇ ಮೃತ್ಯು!

ಸಾಕಷ್ಟು ಚಿತ್ರಗಳಲ್ಲಿ ಮುಂಬೈ ಮೂಲದ ಬ್ಯೂಟಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಕಲ್ಯಾಣ್ ರಾಮ್ ಅಭಿನಯದ ಡೆವಿಲ್: ಬ್ರಿಟಿಷ್ ಸೀಕ್ರೆಟ್ ಏಜೆಂಟ್ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಸ್ತುತ ಕನ್ನಡದಲ್ಲಾಗಲಿ, ತೆಲುಗು ಸಿನಿಮಾದಲ್ಲಾಗಲಿ ಎಸ್ತರ್‌ಗೆ ಅಷ್ಟಾಗಿ ಅವಕಾಶವಿಲ್ಲ. ಇತ್ತೀಚೆಗಷ್ಟೇ ಟೀನಂಟ್‌ ಚಿತ್ರದಲ್ಲಿ ತನಿಖಾ ಅಧಿಕಾರಿಯಾಗಿ ನಟಿಸಿದ್ದರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಎಸ್ತರ್ ನೊರೊನ್ಹಾ ಶಾಕಿಂಗ್‌ ಕಾಮೆಂಟ್ ಮಾಡಿದ್ದು, ಇದು ವೈರಲ್‌ ಆಗಿದೆ. ತಾವು ಎರಡನೇ ಮದುವೆಯಾಗಲು ಸಿದ್ಧ ಎಂದು ಹೇಳಿದ್ದಾರೆ.

ನಾನು ಮತ್ತೊಮ್ಮೆ ಮದುವೆಯಾಗುತ್ತೇನೆ. ನನಗೆ ಜೀವನದಲ್ಲಿ ಒಬ್ಳೇ ಇರೋಕೆ ಆಗಲ್ಲ. ಒಬ್ಬಳೇ ಬದುಕೋಕೆ ನನಗೆ ಸಾಧ್ಯವಿಲ್ಲ. ನನಗೊಂದು ಸುಂದರ ಬದುಕು ಬೇಕು. ಅದಕ್ಕಾಗಿ ಸರಿಯಾದ ಸಂಗಾತಿಯ ಹುಡುಕಾಟದಲ್ಲಿದ್ದೇನೆ. ಆದರೆ, ಯಾವ ರೀತಿಯ ಹುಡುಗನನ್ನು ಮದುವೆಯಾಗಬೇಕು ಅನ್ನೋದರ ಬಗ್ಗೆ ನನಗೆ ಯಾವುದೇ ಸ್ಪಷ್ಟತೆ ಇಲ್ಲ. ಈಗಾಗಲೇ ಒಮ್ಮೆ ಮದುವೆಯಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ. ಈಗ ನನಗೆ ನನ್ನನ್ನು ಅರಿತುಕೊಳ್ಳುವಂಥ ಹುಡುಗ ಬೇಕು ಅಂತಾ ಅನಿಸಿದೆ. ಇದು ಯಾವುದೇ ಶೋ ಆಫ್‌ನ ಹೇಳಿಕೆಯಲ್ಲ ಎಂದೂ ಸ್ಪಷ್ಟ ಪಡಿಸಿದ್ದಾರೆ.

ಇನ್ನು ಮೊದಲ ಪತಿಯ ಬಗ್ಗೆ ಮಾತನಾಡಿರುವ ಎಸ್ತರ್‌, ಆತನೊಂದಿಗೆ ನಾನು 16 ದಿನ ಮಾತ್ರವೇ ಸಂಸಾರ ಮಾಡಿದೆ. ಅಷ್ಟರಲ್ಲೇ ಆತನ ನಿಜರೂಪ ನನಗೆ ಗೊತ್ತಾಗುತ್ತಾ ಹೋಯಿತು ಎಂದು ಎಸ್ತರ್‌ ಹೇಳಿದ್ದಾರೆ.

Advertisement
Advertisement