For the best experience, open
https://m.hosakannada.com
on your mobile browser.
Advertisement

Environment Day: ಅನುದಿನವು ಪರಿಸರ ದಿನವಾಗಲೀ

Environment Day: ಪರಿಸರವೆಂಬ ಉಯ್ಯಾಲೆಯನ್ನು ಸಂರಕ್ಷಿಸುವುದು ಈ ವಿದ್ಯಮಾನ ಯುಗದಲ್ಲಿ ಹೇಗೆ ತಾಯಿಯಾದವಳು ಮಗುವನ್ನು ಮಮತೆ,ಮಮಕಾರದಿಂದ ಸಲಹುವಳು ಹಾಗೆಯೇ ಈ ಪರಿಸರವನ್ನು ತಾಯಿಯಾಗಿ ಪೂಜಿಸಿ ಮಗುವಂತೆ ರಕ್ಷಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
11:11 AM Jun 05, 2024 IST | ಸುದರ್ಶನ್
UpdateAt: 11:11 AM Jun 05, 2024 IST
environment day  ಅನುದಿನವು ಪರಿಸರ ದಿನವಾಗಲೀ
Advertisement

Environment Day: ನಮಗೆ ಹಸಿರು ಹೊದಿಕೆಯಾಗಿ ರೂಪುಗೊಂಡಿರುವ ಈ ನೆಲವು ತಾಯಂದಿರ ದಿನ, ತಂದೆಯಂದಿರ ದಿನ, ಗೆಳೆಯರ ದಿನ ಅಷ್ಟಕ್ಕೆ ಸೀಮಿತವಾಗಿರದೆ ಜೀವಸಂಕುಲಗಳ ದಿನವನ್ನು ಆಚರಿಸುತ್ತೇವೆ. ಹೀಗೆ ಪ್ರತಿದಿನವೂ ವೈಶಿಷ್ಟ್ಯತೆಯನ್ನು ಪಡೆದಿದೆ. ಪರಿಸರವೆಂಬ ಉಯ್ಯಾಲೆಯನ್ನು ಸಂರಕ್ಷಿಸುವುದು ಈ ವಿದ್ಯಮಾನ ಯುಗದಲ್ಲಿ ಹೇಗೆ ತಾಯಿಯಾದವಳು ಮಗುವನ್ನು ಮಮತೆ,ಮಮಕಾರದಿಂದ ಸಲಹುವಳು ಹಾಗೆಯೇ ಈ ಪರಿಸರವನ್ನು ತಾಯಿಯಾಗಿ ಪೂಜಿಸಿ ಮಗುವಂತೆ ರಕ್ಷಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

Advertisement

ಇಲ್ಲಿ ಪರಿಸರವು ನಮಗೆ ಭೌತಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ನೈತಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಆದರೆ ಇಂದು ಬೆಳವಣಿಗೆ ಓಟದಲ್ಲಿ ಮಾನವರು ಹಾದಿ ತಪ್ಪಿದ್ದು, ಕೇವಲ ಆಡಂಬರದ ಬಗೆಗೆ ಪ್ರಕೃತಿಯನ್ನು ಮರೆತಿದ್ದಾರೆ. ಇಲ್ಲಿ ಮುಖ್ಯವಾದ ಅಂಶವೆಂದರೆ ಪ್ರಕೃತಿಯ ನಾಶದಿಂದಾಗಿ ಸಕಲ ಜೀವಿಗಳು ತನ್ನ ವಾಸಸ್ಥಾನವನ್ನು ಕಳೆದುಕೊಳ್ಳುತ್ತಿವೆ. ಅವುಗಳಿಗೆ ಜೀವಿಸಲು ಬೇಕಾದ ಜಾಗ ಸಿಗದಂತಾಗಿದೆ. ಹೀಗಾಗಿ ಪರಿಸರವು ನಮ್ಮ ಜೀವನಕ್ಕೆ ಅತ್ಯಮೂಲ್ಯ ರೂಪದರ್ಶಿ ವಸ್ತುವಾಗಿದೆಂದು ಮರೆಯಬಾರದು.

ನಾವು ಪರಿಸರವನ್ನು “ ಪ್ರಕೃತಿ” ಎಂದು ಕರೆಯುತ್ತೇವೆ. ನಿಸರ್ಗದಲ್ಲಿ ದೊರೆಯುವ ಹೂವು,ಹಣ್ಣು ಸಕಲ ಜೀವಿಗಳ ಸಂಕುಲಗಳಲ್ಲದೆ ಜಲಮೂಲ ಇತ್ಯಾದಿಗಳವೆ. ನೈಸರ್ಗಿಕ ಅಂಶಗಳ ಮೂಲಕ ನಿಸರ್ಗದ ಸೊಬಗು ಬೆಳೆಯುವುದು. ನಾವು ಯಾವಾಗಲೂ ನಮ್ಮ ಸ್ವಭಾವವನ್ನು ರಕ್ಷಿಸಿಕೊಳ್ಳುತ್ತೇವೆಯೋ ಹಾಗೆಯೇ ಅನುದಿನವು ಪರಿಸರ ದಿನವೆಂಬ ಮನೋಭಾವವನ್ನು ಈಗಿನ ಯುವ ಜನಾಂಗ ಹಾಗೂ ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ನಮ್ಮ ನಿಮ್ಮೆಲ್ಲರ ಮಹತ್ವಪೂರ್ಣ ಕಾಯಕವಾಗಬೇಕಿದೆ.

Advertisement

Advertisement
Advertisement
Advertisement