Kichcha Sudeep: ರಾಮನ ಕುರಿತು ಕವನ ಬರೆದ ಕಿಚ್ಚ!
Kichcha Sudeep: ಇಡೀ ದೇಶದ ಜನತೆ ಎದುರು ನೋಡುತ್ತಿದ್ದ ರಾಮ ಮಂದಿರದ (Ram Mandir) ಕನಸು ನನಸಾಗಿದೆ. ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸಲಾಗಿದೆ. ಈ ನಡುವೆ, ನಟ ಕಿಚ್ಚ ಸುದೀಪ್ ಅವರು ಮನೆಯಲ್ಲಿಯೇ ಇದ್ದು ಬಾಲ ರಾಮನ ಮುಂದೆ ಹೂಗಳನ್ನ ಇಟ್ಟು ಪೂಜೆ ಸಲ್ಲಿಸಿದ್ದಾರೆ. ದೀಪ ಬೆಳಗಿಸಿ ಶ್ರೀರಾಮ ನಾಮನ ಸ್ಮರಣೆ ಮಾಡಿದ್ದಾರೆ. ಶ್ರೀರಾಮನಿಗೆ ದೀಪ ಬೆಳಗುವ ವಿಡಿಯೋವನ್ನು ಕಿಚ್ಚ ಸುದೀಪ್ (Kichcha Sudeep)ಅವರು ಶೇರ್ ಮಾಡಿದ್ದರು. ಇದೀಗ, ನಟ ಸುದೀಪ್ ಇನ್ನೊಂದು ಪೋಸ್ಟ್ ಮಾಡಿದ್ದಾರೆ.
ಈ ಕ್ಷಣವನ್ನು ಒದಗಿಸಿಕೊಟ್ಟಿದ್ದಕ್ಕಾಗಿ ನಮ್ಮ ಹೆಮ್ಮೆಯ ಪ್ರಧಾನಿಗೆ ಧನ್ಯವಾದಗಳು ಎಂದು ಸುದೀಪ್ ಬರೆದಿದ್ದಾರೆ. ಇದರಲ್ಲಿ ಮೋದಿ ಅವರನ್ನು ಟ್ಯಾಗ್ ಮಾಡಿ ಜೈ ಶ್ರೀರಾಮ್ ಎಂದು ಹ್ಯಾಶ್ಟ್ಯಾಗ್ ಹಾಕಿದ್ದಾರೆ. ಸುದೀಪ್ ಅವರು ರಾಮನ ಕುರಿತಾದ ಒಂದು ಕವನವನ್ನೂ ಕೂಡ ಬರೆದಿದ್ದಾರೆ
ಕವನದ ಸಾಲುಗಳು ಹೀಗಿವೆ:
ರಾಮ ಜಯ ರಾಮ ಆದಿ ಗುರು ಮಹರ್ಷಿ ಶ್ರೀ ವಾಲ್ಮೀಕಿ ಮೊದಲು ನಿಮ್ಮ ಕಥೆ ಹೇಳಿದರು…
ವಾಲ್ಮೀಕಿಗಳು ರೂಪಿಸಿದ ಶ್ರೀ ರಾಮ ನೀನು ನಮ್ಮ ಎದೆಯಲ್ಲಿ ಶಾಶ್ವತವಾಗಿ ನಿಂತೆ ವರ್ಷಗಳ ಕಾಯುವಿಕೆ ನಂತರ ಇಂದು ವಿರಾಜಮಾನನಾದೆ ಗುಡಿಯೊಳಗೆ,
ನಿನ್ನ ಕಣ್ತುಂಬಿಕೊಳ್ಳಲು ಎರಡೇ ಕಣ್ಣನ್ನೇಕೆ ಕೊಟ್ಟೆ? ನಿನ್ನ ಕೀರ್ತನೆಗೆ ಎರಡೇ ಕಿವಿಗಳು,
ನಮ್ಮದು ಎಂತಹ ಪುಣ್ಯ ಕರುನಾಡಿನಿಂದ ವಿಗ್ರಹವಾಗಿ ರೂಪುಗೊಂಡೆ
ಕರ್ನಾಟಕದ ಮಣ್ಣ ಗರ್ಭದಿಂದ ಎದ್ದು ಬಂದೆ ನಿನ್ನ ಆಲಯ ಕಟ್ಟಲು ಶ್ರೀ ವಿಶ್ವ ಪ್ರಸನ್ನ ತೀರ್ಥ ಗುರುಗಳಿಗೆ ಅದೃಷ್ಟ ಕೊಟ್ಟೆ, ಅರುಣ್ ಯೋಗಿರಾಜ್ ಅವರಿಗೆ ನಿನ್ನ ಕೆತ್ತಲು ಕಲಾಶಿರ್ವಾದವಾದೆ.
ನಿನ್ನ ಪರಮ ಭಕ್ತ ಕನ್ನಡದ ಮಣ್ಣಿನ ವೀರ ಹನುಮಾನ ಇದು ಕರ್ನಾಟಕಕ್ಕೆ ನಿಜದ ಸಮ್ಮಾನ, ಜೈ ಶ್ರೀರಾಮ್
ಎಂದು ರಾಮನ ಬಗ್ಗೆ ಕಿಚ್ಚ ಸುದೀಪ್ ಕವನ ಬರೆದಿದ್ದಾರೆ.
ಅವನ ತೋಳುಗಳು ನಮ್ಮ ಬಲ, ಅವನ ಎದೆ ನಮ್ಮ ಮಹತ್ವಾಕಾಂಕ್ಷೆ, ಅವನ ಕೈಗಳು ನಮ್ಮ ಶೌರ್ಯ, ಅವನ ಪಾದ ನಮ್ಮ ಮುಕ್ತಿ, ಅವನ ರೂಪದಲ್ಲಿ, ಎಲ್ಲಾ ಸೃಷ್ಟಿಯ ಸಾರವಿದೆ. ಹೀಗಾಗಿ, ಇದು ಪ್ರಾರಂಭವಾಗುತ್ತದೆ. ಇಲ್ಲಿಂದ ನಾವು ಏರುತ್ತೇವೆ! 500 ವರ್ಷಗಳ ಕತ್ತಲೆಯ ಬಳಿಕ ಒಂದು ರಾಷ್ಟ್ರದ, ಜನರ, ಬೆಳಕಿನ ಪ್ರಾಣ-ಪ್ರತಿಷ್ಠೆ, ಜೈ ಶ್ರೀರಾಮ್ ಎಂದು ಸುದೀಪ್ ಬರೆದುಕೊಂಡಿದ್ದಾರೆ.