ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ram Mandir: ಯಾವ ಯಾವ ನಟ,ನಟಿಯರೆಲ್ಲ ರಾಮಮಂದಿರಕ್ಕೆ ದೇಣಿಗೆ ನೀಡಿದ್ರು ಗೊತ್ತೇ? ಮೊತ್ತ ಕೇಳಿದರೆ ಶಾಕ್‌ ಆಗುವುದು ಖಂಡಿತ!!!

04:25 PM Jan 22, 2024 IST | ಅಶ್ವಿನಿ ಹೆಬ್ಬಾರ್
UpdateAt: 04:25 PM Jan 22, 2024 IST
Advertisement

Cinema Celebrities: ಅಯೋಧ್ಯೆ ರಾಮ ಮಂದಿರದಲ್ಲಿ(Ram Mandir) ರಾಮಲಲ್ಲಾ ಮೂರ್ತಿ(Ram Lalla Idol)ಪ್ರಾಣ ಪ್ರತಿಷ್ಠಾಪನೆ ನಡೆದಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಇಡೀ ದೇಶದ ಜನತೆ ಎದುರು ನೋಡುತ್ತಿದ್ದರು. ಇದೀಗ, ಕೋಟ್ಯಂತರ ಭಾರತೀಯರ ಶತಮಾನಗಳ ಕನಸು ನನಸಾಗಿದೆ. ರಾಮ ಮಂದಿರಕ್ಕೆ ಯಾವ್ಯಾವ ನಟರು(Cinema Celebrities) ಎಷ್ಟು ದೇಣಿಗೆ ನೀಡಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ!!

Advertisement

ರಾಮ ಮಂದಿರ ನಿರ್ಮಾಣಕ್ಕೆ ಇಲ್ಲಿಯವರೆಗೆ ₹ 1,100 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಗೋವಿಂದ್ ದೇವ್ ಗಿರಿ ಹೇಳಿದ್ದಾರೆ ಎಂದು ವರದಿಯಾಗಿದೆ. ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಅನೇಕ ಮಂದಿದೇಣಿಗೆ ನೀಡಿದ್ದಾರೆ. ಅಕ್ಷಯ್ ಕುಮಾರ್ , ಅನುಪಮ್ ಖೇರ್ ಮತ್ತು ಗುರ್ಮೀತ್ ಚೌಧರಿ ಸೇರಿದಂತೆ ಚಲನಚಿತ್ರ ಮತ್ತು ದೂರದರ್ಶನ ಉದ್ಯಮದ ಹಲವಾರು ಸೆಲೆಬ್ರಿಟಿಗಳು ದೇವಾಲಯದ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

# ಅನುಪಮ್ ಖೇರ್
ಕಾಶ್ಮೀರಿ ಫೈಲ್ಸ್ ಖ್ಯಾತಿಯ ಬಾಲಿವುಡ್ ನಟ ಅನುಪಮ್ ಖೇರ್ ಅವರು ಕಳೆದ ಅಕ್ಟೋಬರ್ ನಲ್ಲಿ ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ Instagram ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ರೆಕಾರ್ಡ್ ಮಾಡಿದ ಕ್ಲಿಪ್ ಅನ್ನು ಕೂಡಾ ನಟ ಶೇರ್ ಮಾಡಿದ್ದರು. ಈ ಸಂದರ್ಭ ಈ ದೇವಾಲಯಕ್ಕೆ ಇಟ್ಟಿಗೆ ನೀಡಲು ನಾನು ಅದೃಷ್ಟಶಾಲಿ ಎಂದು ಹೇಳಿಕೊಂಡಿದ್ದರು.

Advertisement

# ಪವನ್ ಕಲ್ಯಾಣ್
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪವನ್ ಕಲ್ಯಾಣ್ ₹ 30 ಲಕ್ಷ ದೇಣಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

# ಮುಖೇಶ್ ಖನ್ನಾ
ನಟ ಮುಖೇಶ್ ಖನ್ನಾ ದೇವಾಲಯದ ನಿರ್ಮಾಣಕ್ಕಾಗಿ ₹ 1.1 ಲಕ್ಷದ ಚೆಕ್ ಅನ್ನು ಫೆಬ್ರವರಿ 2021 ರಲ್ಲಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.

# ಪ್ರಣಿತಾ ಸುಭಾಷ್
ನಟಿ ಪ್ರಣಿತಾ ಸುಭಾಷ್ ಜನವರಿ 12, 2021 ರಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದು, ನಾನು ಅಯೋಧ್ಯೆ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕಾಗಿ ₹ 1 ಲಕ್ಷ ನೀಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಅಷ್ಟೆ ಅಲ್ಲದೇ, ನೀವೆಲ್ಲರೂ ಕೈಜೋಡಿಸಿ ಮತ್ತು ಭಾಗವಹಿಸಲು ವಿನಂತಿಸುತ್ತೇನೆ ಎಂದು ಹೇಳಿದ್ದರು.

# ಅಕ್ಷಯ್ ಕುಮಾರ್
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅವರು ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಜನವರಿ 2021 ರಲ್ಲಿ, ನಟ ತನ್ನ ವೀಡಿಯೊವನ್ನು ಹಂಚಿಕೊಂಡು ದೇವಾಲಯ ನಿರ್ಮಾಣ ಕಾರ್ಯಕ್ಕಾಗಿ ದೇಣಿಗೆ ನೀಡಲು ಮನವಿ ಸಲ್ಲಿಸಿದ್ದರು.

# ಮನೋಜ್ ಜೋಶಿ
ಕೆಲ ಬಲ್ಲ ವರದಿಯ ಅನುಸಾರ, ಮನೋಜ್ ಜೋಶಿಯವರು ರಾಮ ಮಂದಿರಕ್ಕೆ ಕೊಡುಗೆ ನೀಡಿದ್ದಾರೆ ಎನ್ನಲಾಗಿದೆ.

# ಹೇಮಾಮಾಲಿನಿ
Indiatimes.com ವರದಿಯ ಅನುಸಾರ, ದೇವಾಲಯದ ನಿರ್ಮಾಣಕ್ಕಾಗಿ ನಟಿ ಹೇಮಾ ಮಾಲಿನಿ ಅವರು ಕೂಡ ದೇಣಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಎಷ್ಟು ಮೊತ್ತ ನೀಡಿದ್ದಾರೆ ಎಂಬುದು ಬಹಿರಂಗವಾಗಿಲ್ಲ.

# ಗುರ್ಮೀತ್ ಚೌಧರಿ
ಜನವರಿ 2021 ರಲ್ಲಿ, ಗುರ್ಮೀತ್ ಚೌಧರಿ ಕೂಡಾ ದೇಣಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Advertisement
Advertisement