ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

BBK Season 10: ಬಿಗ್ ಬಾಸ್ ಕಾರ್ತಿಕ್'ಗೆ ಎರಡು ಮದುವೆ ಯೋಗ- ಹೇಳಿದ್ಯಾರು? ಹೆಣ್ಣುಗಳ್ಯಾರು ಗೊತ್ತಾ ?!

03:19 PM Nov 21, 2023 IST | ಕಾವ್ಯ ವಾಣಿ
UpdateAt: 03:25 PM Nov 21, 2023 IST
Advertisement

BBK Season 10: ಬಿಗ್‌ ಬಾಸ್‌ ಮನೆಗೆ (BBK Season 10) ಅತಿಥಿಯಾಗಿ, ಖ್ಯಾತ ಬ್ರಹ್ಮಾಂಡ ಗುರೂಜಿ ಈಗಾಗಲೇ ಎಂಟ್ರಿ ಕೊಟ್ಟಿದ್ದು, ಗುರೂಜಿ ಒಳಬರುತ್ತಿದ್ದಂತೆಯೇ ಎಲ್ಲರ ಮುಖದಲ್ಲಿಯೂ ನಗು. ಮನೆಯಿಡೀ ಓಡಾಡುತ್ತ, ಕ್ಯಾಮೆರಾಗಳಿಗೆ ಆರ್ಡರ್ ಮಾಡುತ್ತ, ಬಾಳೆಹಣ್ಣು ತಿನ್ನುತ್ತ ಬ್ರಹ್ಮಾಂಡ ಗುರೂಜಿ ಸ್ಪೆಷಲ್‌ ವೈಬ್ ಕ್ರಿಯೇಟ್ ಮಾಡಿದ್ದೂ ಆಗಿದೆ. ವಿಶೇಷ ಎಂದರೆ ಬಿಗ್ ಬಾಸ್ ಮನೆಯಲ್ಲಿ, ಗುರೂಜಿ (Brahmanda Guruji) ಅವರು ಕಾರ್ತಿಕ್‌ ಹಾಗೂ ತುಕಾಲಿ ಸಂತುವಿನ ಭವಿಷ್ಯ ನುಡಿದಿದ್ದಾರೆ.

Advertisement

ತುಕಾಲಿ ಸಂತುಗೆ ಮೊದಲಿಗೆ ಕುಂಭ ರಾಶಿ ನಂದು, ಅದಿಕ್ಕೆ ನೀಲಿ ಬಣ್ಣದ ಉಂಗುರ ಹಾಕಿಕೊಂಡೆ ಎಂದು ಬ್ರಹ್ಮಾಂಡ ಗುರೂಜಿಗೆ ಹೇಳಿದ್ದಾರೆ. “ಕುಂಭ ರಾಶಿಗೆ ನೀಲಿ ಹಾಕ್ಕೊಳದಲ್ಲ, ಇರಲಿ ಬಿಡು” ಅಂತ ಬ್ರಹ್ಮಾಂಡ ಗುರೂಜಿ ಅವರು ಸಂತುಗೆ ಹೇಳಿದ್ದಾರೆ. ಕಾರ್ತಿಕ್ ಅವರನ್ನು ನೋಡಿ ಗುರೂಜಿ ಅವರು “ನೋಡು ಅವನು ಬ್ಲ್ಯಾಕ್. ನೀಲಿ ಅಂದ್ರೆ ಶನಿ. ಬ್ಲ್ಯಾಕ್ ಅಂದ್ರೂ ಶನಿ” ಎಂದು ಹೇಳಿದ್ದಾರೆ.

Advertisement

ಇನ್ನು ಕಾರ್ತಿಕ್‌ ಮದುವೆ ವಿಚಾರವಾಗಿ ಗುರೂಜಿ ಮಾತನಾಡಿ ʻʻಕಾರ್ತಿಕ್ ಮದುವೆ ಟೈಮ್‌ನಲ್ಲಿ ಮದುವೆ ಆಗುವ ಹುಡುಗಿ ಇವನನ್ನು ನೋಡಿಕೊಂಡು ಮದುವೆ ಆಗಬೇಕು. ಅವನಿಗೆ ದ್ವಿಕಳ ತ್ರಿಯೋಗ ಇದೆ. ಒಬ್ಬಳನ್ನು ಅವನು ಎರಡು ಸಲ ಮದುವೆ ಆದರೆ ಪರವಾಗಿಲ್ಲ, ಇಬ್ಬಿಬ್ಬರನ್ನು ಮದುವೆ ಆದರೆ ಏನು ಕಥೆ?ʼʼಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾರ್ತಿಕ್‌ ಕೂಡ ʻʻನಾನು ಅವಳನ್ನು ನೋಡಿಕೊಂಡು ಮದುವೆ ಆಗಬೇಕಾ? ಅವಳು ನನ್ನ ನೋಡಿಕೊಂಡು ಮದುವೆ ಆಗಬೇಕಾ?ಆ ತರ ಏನಿಲ್ಲʼʼಎಂದೆ. ಗುರೂಜಿ ಅವರು ʻಇದೆ ಕಣೋʼ ಎಂದರು.

ಇತ್ತ ತುಕಾಲಿಗೂ ಬೇಗ ಮಗು ಮಾಡಿಕೊಳ್ಳಲು ಗುರೂಜಿ ಹೇಳಿದರು. ಗುರೂಜಿ ಅವರು ತುಕಾಲಿಗೆ ʻʻಮಗು ಆಯ್ತಾ?ನೀನು ಆದಷ್ಟು ಬೇಗ ಮಗು ಮಾಡಿಕೊಳ್ಳಬೇಕು, ಬುಧ ಬಂದ್ರೆ ಅದು ಮುಂದಕ್ಕೆ ಹೋಗಿಬಿಡತ್ತೆ. ಹೆಂಡ್ತಿ ಸ್ವಂತನಾ? ಅತ್ತೆ ಮಗಳೋ?
ದೂರದವಳೋ?ʼʼಎಂದು ಪ್ರಶ್ನೆ ಇಟ್ಟರು. ತುಕಾಲಿ ಕೂಡ ʻʻಇನ್ನು ಮಗು ಆಗಿಲ್ಲ ಗುರೂಜಿ. ಶೋ ಅದು ಇದು ಅದೇ ಆಯ್ತು. ಹೆಂಡತಿ ದೂರದ ಸಂಬಂಧಿʼʼಎಂದರು. ನೀತುಗೆ ಕೂಡ ವಿದೇಶಕ್ಕೆ ಹೋಗುವ ಯೋಗ ಇದೆ ಎಂದು ಗುರೂಜಿ ಹೇಳಿದರು.

ಸದ್ಯಕ್ಕೆ ಬ್ರಹ್ಮಾಂಡ ಗುರೂಜಿ ಬಿಗ್‌ಬಾಸ್ ಮನೆಯಲ್ಲಿ ಗುರೂಜಿ ಎಷ್ಟು ಸಮಯ ಇರುತ್ತಾರೆ? ಯಾರು ಯಾರಿಗೆ ಏನು ಹೇಳುತ್ತಾರೆ? ಎಂಬದು ಕಾದುನೋಡಬೇಕಿದೆ.

Advertisement
Advertisement