BBK Drone Pratap: ಡ್ರೋನ್ ವಿಚಾರದಲ್ಲಿ ನನಗೆ ಏನೆಲ್ಲಾ ಹಿಂಸೆ ಕೊಟ್ರು ಗೊತ್ತಾ?! ಅಯ್ಯೋ ದೇವ್ರೇ.... ಎಂದು ಬಿಕ್ಕಿ ಬಿಕ್ಕಿ ಅತ್ತ ಡ್ರೋನ್ ಪ್ರತಾಪ್
BBK Drone Pratap: ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದ ಹಾಗೇ ಕಾಂಪಿಟೇಷನ್ ಟಫ್ ಆಗುತ್ತಿದೆ. ಈ ನಡುವೆ, ಬಿಗ್ ಬಾಸ್ (Bigg Boss Kannada Season 10 ) ಕಾರ್ಯಕ್ರಮದ ಎಂಟನೇ ವಾರದ ಆಟದಲ್ಲಿ ಡ್ರೋನ್ ಪ್ರತಾಪ್ (BBK Drone Pratap)ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಎಂಟನೇ ವಾರ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ನೀಡಲಾಗಿತ್ತು. ಈ ಸಂದರ್ಭ ಸ್ಪರ್ಧಿಗಳು ತಮ್ಮ ಜೀವನದಲ್ಲಿ ಅನುಭವಿಸಿದ ಎಂದಿಗೂ ಮರೆಯಲಾಗದ ಕಹಿ ನೆನಪುಗಳನ್ನು ಬಿಚ್ಚಿಡುವ ಟಾಸ್ಕ್ ನೀಡಲಾಗಿತ್ತು. ಮನಸ್ಸಿನ ಭಾರವನ್ನ ಇಳಿಸಿಕೊಳ್ಳುವ ಸಲುವಾಗಿ ಎಲ್ಲಾ ಸ್ಪರ್ಧಿಗಳು ತಮ್ಮ ಜೀವನದಲ್ಲಿ ಎದುರಿಸಿದ ಸನ್ನಿವೇಶವನ್ನು ಹಾಗೂ ಅದರಿಂದಾದ ಪರಿಣಾಮವನ್ನು ವಿವರಿಸಬೇಕಿತ್ತು.
‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಎಂಟನೇ ವಾರ ಡ್ರೋನ್ ಪ್ರತಾಪ್ ಗೊಳೋ ಎಂದು ಕಣ್ಣೀರು ಹಾಕಿದ್ದು, ತಾವು ತಮ್ಮ ಜೀವನದಲ್ಲಿ ಎದುರಿಸಿದ ಸಮಸ್ಯೆಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ವಿವಾದದಲ್ಲಿ ಸಿಲುಕಿದಾಗ ‘’Mentally Unstable ಎಂದು ಬರೆದುಕೊಡು’ ಎಂದು ತಲ್‌ತಲೆ ಮೇಲೆ ಹೊಡೆದರು’’ ಎಂದು ಡ್ರೋನ್ ಪ್ರತಾಪ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಜೀವನದಲ್ಲಿ ಒಂದೆರಡು ಮಾತುಗಳನ್ನ ಬಾಯ್ತಪ್ಪಿ ಹೇಳಿದ್ದು ನಿಜ !!. ಆ ವಿಚಾರದಿಂದ ನಾನು ಸಾಕಷ್ಟು ಅನುಭವಿಸಿದ್ದೀನಿ. ಆ ಸಮಯದಲ್ಲಿ ನನಗೆ ಪ್ಯಾನಿಕ್ ಆಗುವ ಸಮಸ್ಯೆ ಶುರುವಾಯಿತು. ನಾನು ಸರಿಯಿದ್ದರು, ಆ ಟೈಮ್‌ನಲ್ಲಿ ಮಾತನಾಡೋಕೆ ಆಗಲ್ಲ. ನನ್ನ ಜೀವನದ ಒಂದು ಭಾಗದ ಕಥೆ, ನನ್ನ ಜೀವನದಲ್ಲಿ ಏನಾಯಿತು ಅಂತ ಎಲ್ಲರಿಗೂ ಗೊತ್ತಿರುವಂತದ್ದೇ!!ನಾನು ದೇಶ ಬಿಟ್ಟು ಹೊರಗೆ ಹೋಗಿದ್ದಾಗ ಒಂದಷ್ಟು ಬ್ಲಾಗರ್ಸ್, ನನ್ನ ಜೊತೆ ಕೆಲಸ ಮಾಡಿದವರು ನನ್ನ ಬಗ್ಗೆ ಒಂದಷ್ಟು ಕಥೆಗಳನ್ನ ಕ್ರಿಯೇಟ್ ಮಾಡಿದ್ದರು. ಅದರಲ್ಲಿ ಮುಖ್ಯವಾಗಿ ಅವರು ಹೇಳುತ್ತಾ ಇದ್ದದ್ದು, ‘’ಡ್ರೋನ್ ಪ್ರತಾಪ್ ದುಡ್ಡು ತಗೊಂಡಿದ್ದಾನೆ’’ ಎಂದು ಕಥೆಗೆ ರೆಕ್ಕೆ ಪುಕ್ಕ ಸೇರಿಸಿ ಆ ಕಥೆಗೆ ರೆಕ್ಕೆ ಪುಕ್ಕ ಸೇರಿಸಿದ್ದರು.
ಫೈನಲ್ ಆಗಿ ಯಾಕೆ ಹೆದರಿಕೊಂಡು ಕೂತಿದ್ದು, ನನ್ನ ಕೈಗೆ ಕ್ವಾರಂಟೈನ್ ಸಿಂಬಲ್ ಹಾಕಿದ್ದರು. ಅಷ್ಟರಲ್ಲಾಗಲೇ ಇಂಟರ್‌ವ್ಯೂ ಮುಗಿದಿದ್ದು, ಅದಾದ್ಮೇಲೆ ನಾನು ನನ್ನ ಸ್ನೇಹಿತರ ಮನೆಯಲ್ಲೇ ಉಳಿದುಕೊಂಡೆ. ಬೆಂಗಳೂರು ಬಿಟ್ಟು ಚಿಕ್ಕಮಗಳೂರಿಗೆ ಹೊರಟಿದ್ದು, ನನ್ನ ಬಳಿ ಏನೂ ಇರಲಿಲ್ಲ. ಆದರೂ ಕಥೆಯನ್ನ ಹಬ್ಬಿಸಿದರು. ಬೆಂಗಳೂರಿನಲ್ಲಿ ನನ್ನ ಅಪಾರ್ಟ್‌ಮೆಂಟ್ ಬೀಗ ಒಡೆದು, ಒಳಗೆ ವಿಡಿಯೋ ಮಾಡಿಕೊಂಡರು. ಅಂತ. ಮಾಧ್ಯಮಗಳಲ್ಲಿ ‘’ಪ್ರತಾಪ್ ಮೇಲೆ ಕೇಸ್’’ ಎಂದೆಲ್ಲ ಬರುತ್ತಿತ್ತು. ನಾನು ಇಲ್ಲಿಯವರೆಗೆ ಒಂದು ರೂಪಾಯಿ ಹಣ ತಗೊಂಡಿಲ್ಲ. ಒಂದು ರೂಪಾಯಿ ಹಣವನ್ನೂ ನಾನು ಯಾರ ಹತ್ತಿರವೂ ತಗೊಂಡಿಲ್ಲ’’
ಚಿಕ್ಕಮಗಳೂರಿನಲ್ಲಿದ್ದಾಗ ನನ್ನ ತಂದೆ ಕರ್ಕೊಂಡು ಹೋಗಿ ಕ್ವಾರಂಟೈನ್ ಕೇಸ್‌ಗೆ ಪೊಲೀಸ್ ಸ್ಟೇಷನ್‌ನಲ್ಲಿ ಇರಿಸಿದ್ದಾರೆ. ಕ್ವಾರಂಟೈನ್ ಆಗಿಲ್ಲ. ಫೋನ್ ಮಾಡಿದರೆ, ಊರೆಲ್ಲಾ ಪುಕಾರು.. ‘’ಶೂಟ್ ಅಟ್ ಸೈಟ್ ಆರ್ಡರ್ ಕೊಟ್ಟಿದ್ದಾರೆ ಇವ್ರ ಮಗನಿಗೆ’’ ಎಂದೆಲ್ಲ ಬರುತ್ತಿತ್ತು. ನನ್ನ ಅಪ್ಪ - ಅಮ್ಮ ಹೊರಗಡೆ ಬಂದಿಲ್ಲ. ನನ್ನ ತಾಯಿ ಬಾಗಿಲು ಹಾಕಿಕೊಂಡು ತೋಟದ ಕಡೆ ಓಡಿದ್ದಾರೆ. ಊರೆಲ್ಲಾ ನನ್ನ ಮೇಲೆ ಕಥೆ ಹಬ್ಬಿಸುತ್ತಿದ್ದಾರೆ. ‘’ಇವ್ನು ಸುಳ್ಳ, ಕಳ್ಳ.. ಊಟದಲ್ಲಿ ವಿಷ ಹಾಕಿ ಸಾಯಿಸಬೇಕಿತ್ತು.. ಯಾಕೆ ಬಿಟ್ಟಿದ್ದೀರಾ ಇನ್ನೂ ಅಂತ ನೆಂಟರೆಲ್ಲಾ ಹೇಳುತ್ತಿದ್ದರು. ಅದನ್ನ ನನ್ನ ತಾಯಿ ನನಗೆ ಹೇಳುತ್ತಿದ್ದರು. ನಾನು ಹೇಳಿರುವ ಎರಡು ಮಾತಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ’’
‘’ಚಿಕ್ಕಮಗಳೂರಿನಿಂದ ಬಂದ ನಂತರ ಬೆಂಗಳೂರಿನ ಶಾಂತಿನಗರದಲ್ಲಿರುವ ಹೋಟೆಲ್‌ನಲ್ಲಿ ನನ್ನನ್ನ ಇರಿಸಿದ್ದರು. ಅಲ್ಲಿ ಸ್ಕ್ರೀನ್ ಓಪನ್ ಮಾಡಿದರೆ ಸುತ್ತ ಕ್ಯಾಮರಾಗಳು.. ಯಾವ ಪ್ರತಾಪ್‌ನ ಮೆರೆಸಿದ್ರೋ, ಹೋಟೆಲ್ ಸುತ್ತ ಪೊಲೀಸ್ ರಿಸರ್ವ್. ಆಮೇಲೆ ಆ ನ್ಯೂಸ್ ಜೊತೆ ಮಾತನಾಡು, ಈ ನ್ಯೂಸ್ ಜೊತೆ ಮಾತನಾಡು, ಆ ಪೇಪರ್‌ನವರ ಬಳಿ ಮಾತನಾಡು.. ಎಲ್ಲವನ್ನೂ ಒಪ್ಪಿಕೋ ಅಂತ ಕೊಡಬಾರದ ಹಿಂಸೆ ನೀಡಿದ್ದರು. ನಿನ್ನ ತಂಗಿಯನ್ನ ಯಾರು ಮದುವೆ ಆಗ್ತಾರೆ? ನಿನ್ನ ತಂಗಿಗೆ ಮದುವೆಯಾಗದ ಹಾಗೆ ಮಾಡ್ತೀವಿ. ನಿನ್ನ ಅಮ್ಮ ಹುಚ್ಚಿ ತರಹ ರೋಡ್‌ನಲ್ಲಿ ಅಲೆಯಬೇಕು. ನಿನ್ನ ತಂದೆಗೆ ಯಾರೂ ಇರಬಾರದು. ಯಾರೂ ಸಹಾಯ ಮಾಡಬಾರದು ಅಂತ ಹೇಳಿದ್ರು’’ ‘’ಮೆಂಟಲ್ ಆಸ್ಪತ್ರೆಯಿಂದ ಡಾಕ್ಟರ್‌ನ ಕರ್ಕೊಂಡ್ ಬಂದರು. ಮೆಂಟಲಿ ಅನ್‌ಸ್ಟೇಬಲ್ ಅಂತ ಬರೆದುಕೊಡು ಎಂದೆಲ್ಲ ಹೇಳುತ್ತಿದ್ದರು.
ನನ್ನ ಪಾಸ್‌ಪೋರ್ಟ್, ಐಪ್ಯಾಡ್ ಕಿತ್ತುಕೊಂಡರು. ಎಲ್ಲಾ ಕಿತ್ತುಕೊಂಡು.. ಮೆಂಟಲಿ ಅನ್‌ಸ್ಟೇಬಲ್ ಅಂತ ಬರಿ ಅಂತ ಸ್ಟೇಟ್‌ಮೆಂಟ್ ಎಲ್ಲಾ ರೆಡಿ ಮಾಡಿಸಿದ್ದರು. ಇದರಲ್ಲಿ ನಾನು ಯಾವುದಕ್ಕೂ ಸಹಿ ಹಾಕಲಿಲ್ಲ. ನನ್ನ ತಂದೆ - ತಾಯಿ ಜೊತೆಗೆ ಮಾತನಾಡಿ ಇದೊಂದಕ್ಕೆ ಸಹಿ ಹಾಕಿ, ನಿಮ್ಮ ಮಗನನ್ನ ಉಳಿಸಿ ಕಳುಹಿಸ್ತೀವಿ ಎಂದು ಹೇಳಿದ್ದರು. ಮೆಂಟಲಿ ಅನ್‌ಸ್ಬೇಬಲ್ ಅಂತ ಬರೆದುಕೊಡು ಅಂತ ತಲ್‌ತಲೆ ಮೇಲೆ ಹೊಡೆಯುತ್ತಿದ್ದರು ಎಂದೆಲ್ಲ ಪ್ರತಾಪ್ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ.