For the best experience, open
https://m.hosakannada.com
on your mobile browser.
Advertisement

Bigg Boss-Sangeetha: ಬಿಗ್ ಬಾಸ್ ಒಳಗಿರೋ ಸಂಗೀತಾಗೆ ದೊಡ್ಡ ಆಘಾತ- ಮನೆ ಹೊರಗೆ ಕಾದಿದೆ ಬಿಗ್ ಶಾಕ್

bigg boss sangeetha  ಬಿಗ್ ಬಾಸ್ ಒಳಗಿರೋ ಸಂಗೀತಾಗೆ ದೊಡ್ಡ ಆಘಾತ  ಮನೆ ಹೊರಗೆ ಕಾದಿದೆ ಬಿಗ್ ಶಾಕ್

Bigg Boss-Sangeetha: ಬಿಗ್ ಬಾಸ್ ಮನೆಯಲ್ಲಿರುವ(BBK 10)ಸಂಗೀತಾ (Bigg Boss-Sangeetha)ಶೃಂಗೇರಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಕುಚಿಕು- ಕುಚಿಕು ಗೆಳೆಯರಂತೆ ಇದ್ದ ಕಾರ್ತಿಕ್-ಸಂಗೀತಾ(Bigg Boss-Sangeetha)ಜೋಡಿ ಹೆಚ್ಚಿನ ಮಂದಿಯ ಹಾಟ್ ಫೇವರೆಟ್ ಆಗಿತ್ತು. ಆದರೆ, ಇದೀಗ ಹಾವು ಮುಂಗುಸಿಯಂತಿದ್ದ ಜೋಡಿಯ ನಡುವೆ ಕಿತ್ತಾಟ ಜಗಳ ಹೆಚ್ಚಾಗಿದೆ. ಇದರಿಂದಾಗಿ ಅಭಿಮಾನಿಗಳಿಗೆ ಸಂಗೀತಾ ಅವರ ಮೇಲೆ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ.

Advertisement

Advertisement

ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಅವರ ಆಟ-ಕಿತ್ತಾಟ ನೋಡಿದ ಫ್ಯಾನ್ಸ್ ಸಂಗೀತಾ ಮೇಲೆ ಬೇಜಾರಾಗಿದ್ದಾರೆ. ಕಾರ್ತಿಕ್ಗೆ ತಲೆ ಬೋಳಿಸುವ ಚಾಲೆಂಜ್ ಕೊಟ್ಟ ಸಂಗೀತಾ ಶೃಂಗೇರಿ ಮೇಲೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ಸ್ಪರ್ಧಿಗಳ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತದೆ. ಆದರೆ, ಸಂಗೀತಾ ಶೃಂಗೇರಿ ಅವರ ವಿಚಾರದಲ್ಲಿ ತದ್ವಿರುದ್ದ ಬೆಳವಣಿಗೆ ಕಾಣುತ್ತಿದೆ. ಸಂಗೀತಾ ಅವರ ವರ್ತನೆಗಳಿಂದ ದಿನೇ ದಿನೇ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಗೀತಾ ಶೃಂಗೇರಿ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 11 ಸಾವಿರ ಫಾಲೋವರ್ಸ್ ಅನ್ನು ಕಳೆದುಕೊಂಡಿದ್ದಾರೆ. ಸಂಗೀತಾ ಅವರು ಕಾರ್ತಿಕ್ ಮತ್ತು ತುಕಾಲಿ ಅವರಿಗೆ ತಲೆ ಬೋಳಿಸುವ ಟಾಸ್ಕ್ ನೀಡುವ ಮೊದಲು ಸಂಗೀತಾ ಅವರಿಗೆ 4.49 ಲಕ್ಷ ಫಾಲೋವರ್ಸ್ ಇದ್ದರು.ಆದರೆ, ಈ ಎಪಿಸೋಡ್ ನಂತರ ಈ ಸಂಖ್ಯೆ 4.38 ಲಕ್ಷಕ್ಕೆ ಇಳಿಕೆಯಾಗಿದೆ.

ಸಂಗೀತಾ ಮತ್ತು ಟೀಮ್ ತಲೆ ಬೋಳಿಸಬೇಕು ಹಸಿ ಮೆಣಸಿನಕಾಯಿ ತಿನ್ನಬೇಕು ಎಂಬ ಚಾಲೆಂಜ್ ನೀಡಿದ ಸಂದರ್ಭ ಬಿಗ್ ಬಾಸ್ ಕೂಡ ಚಾಲೆಂಜ್ ನೀಡುವಾಗ ಮಾನವೀಯತೆಯನ್ನು ಮರೆಯದಂತೆ ಸಲಹೆ ನೀಡಿದ್ದರು. ಕಾರ್ತಿಕ್-ತುಕಾಲಿ ಅವರಿಗೆ ಕೂದಲು ತೆಗೆಯುವ ಚಾಲೆಂಜ್ ಅನ್ನು ಸಂಗೀತಾ ಅವರ ತಂಡ ನೀಡಿದಕ್ಕೆ ಪ್ರೇಕ್ಷಕ ಬಂಧುಗಳು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಮೊನ್ನೆಯಷ್ಟೆ ಕಿಚ್ಚ ಸುದೀಪ್ ಅವರು ಸಂಗೀತಾ ಅವರಿಗೆ ಕ್ಲಾಸ್ ತೆಗೆದುಕೊಂಡರು ಕೂಡ ತಾನು ಮಾಡಿದ್ದೇ ಸರಿ ಎಂಬಂತೆ ವರ್ತನೆ ತೋರುತ್ತಿರುವುದು ಅಭಿಮಾನಿಗಳಿಗೆ ಸಂಗೀತಾ ಅವರ ಈವರೆಗೆ ಇದ್ದ ಅಭಿಪ್ರಾಯ ಬದಲಾಗಲು ಕಾರಣವಾಗುತ್ತಿದೆ ಎಂಬುದು ಸುಳ್ಳಲ್ಲ. ಈ ನಡುವೆ, ಕಾರ್ತಿಕ್ ಜೊತೆಗೆ ಕಿತ್ತಾಡಿಕೊಂಡಿದ್ದ ನಟಿ ಸಂಗೀತಾ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ತೀರ್ಮಾನ ಕೂಡ ಮಾಡಿದ್ದರು. ಈ ಸಂದರ್ಭ ಮನೆಯವರೆಲ್ಲ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: PSI Recruitment: ಪೋಲೀಸ್ ಆಗೋ ಕನಸು ಕಂಡವರಿಗೆ ಭರ್ಜರಿ ಗುಡ್ ನ್ಯೂಸ್- ಈ ದಿನ ನಡೆಯಲಿದೆ 4,000 ಹೆಚ್ಚು ಹುದ್ದೆಗಳ ನೇಮಕಾತಿ!!

Advertisement
Advertisement