For the best experience, open
https://m.hosakannada.com
on your mobile browser.
Advertisement

CET Seat allotment: ನೀಟ್ ಪರೀಕ್ಷೆಯ ನಂತರವಷ್ಟೇ ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟು ಹಂಚಿಕೆ, KEA ಸ್ಪಷ್ಟನೆ !

CET Seat allotment: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (Neet) ಫಲಿತಾಂಶ ಬಂದ ನಂತರವೇ ಎಂಜಿನಿಯರ್ ಸೀಟು ಹಂಚಿಕೆ ಮಾಡಲಾಗುವುದು' ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನರವರು ತಿಳಿಸಿದ್ದಾರೆ.
06:36 PM Jun 02, 2024 IST | ಸುದರ್ಶನ್ ಬೆಳಾಲು
UpdateAt: 06:36 PM Jun 02, 2024 IST
cet seat allotment  ನೀಟ್ ಪರೀಕ್ಷೆಯ ನಂತರವಷ್ಟೇ ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟು ಹಂಚಿಕೆ  kea ಸ್ಪಷ್ಟನೆ
Advertisement

CET Seat allotment: 'ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸಿದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (Neet) ಫಲಿತಾಂಶ ಬಂದ ನಂತರವೇ ಎಂಜಿನಿಯರ್ ಸೀಟು ಹಂಚಿಕೆ ಮಾಡಲಾಗುವುದು' ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನರವರು ತಿಳಿಸಿದ್ದಾರೆ. ಈ ಮೂಲಕ ಆತಂಕದಲ್ಲಿದ್ದ ವಿದ್ಯಾರ್ಥಿ ಮತ್ತು ಪೋಷಕರಿಗೆ ಕೊಂಚ ನಿರಾಳವಾಗಿದೆ.

Advertisement

"ನೀಟ್ ಅರ್ಹತಾ ಫಲಿತಾಂಶಕ್ಕೂ ಮೊದಲೇ ರಾಜ್ಯದಲ್ಲಿ ಎಂಜಿನಿಯರಿಂಗ್ ಗೆ ಸೀಟ್ ಹಂಚಿಕೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ, ಮೊದಲು ವೈದ್ಯಕೀಯ ಕೋರ್ಸ್ ಸೀಟ್ ಹಂಚಿಕೆ ಮಾಡಿ ನಂತರವೇ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಲಾಗುವುದು" ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭವಾನಿ ರೇವಣ್ಣ ಸಿಕ್ಕ ತಕ್ಷಣ ಅರೆಸ್ಟ್‌ ; ಜಿ. ಪರಮೇಶ್ವರ್ ಸ್ಪಷ್ಟನೆ 

Advertisement

ಈಗಾಗಲೇ ರಾಜ್ಯದ ಹಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ ಎಂಬ ಪೋಷಕರ ಆತಂಕ ಭರಿತ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, 'ಸಿಇಟಿಯಲ್ಲಿ ಒಳ್ಳೆಯ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೀಟ್ ಖಂಡಿತಾ ಸಿಗುತ್ತದೆ. ಸೀಟ್ ಸಿಗುವುದಿಲ್ಲ ಎಂಬ ಆತಂಕದಲ್ಲಿ ಡೋನೇಷನ್ ಕೊಟ್ಟು ಪ್ರವೇಶ ಮಾಡಿಸಬೇಡಿ ಎಂದು ಪೋಷಕರಿಗೆ ನಿರ್ದೇಶಕರು ಕಿವಿಮಾತು ಹೇಳಿದ್ದಾರೆ. "ಒಳ್ಳೆಯ ರ್ಯಾಂಕ್ ಪಡೆದವರಿಗೆ ಒಳ್ಳೆಯ ಕಾಲೇಜು ಸಿಗಲಿದೆ" ಎಂದು ಅವರು ಪೋಷಕರಿಗೆ ಭರವಸೆ ನೀಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, 'ರಾಜ್ಯದಲ್ಲಿ 1.24 ಲಕ್ಷ ಎಂಜಿನಿಯರಿಂಗ್ ಸೀಟುಗಳು ಲಭ್ಯವಿದೆ. ರಾಂಕ್ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ಕಾಲೇಜುಗಳಲ್ಲಿನ ಕೋರ್ಸ್ ಶುಲ್ಕವನ್ನು ಇನ್ನೂ ನಿಗದಿ ಮಾಡಿಲ್ಲ" ಎಂದು ಅವರು ಹೇಳಿದ್ದಾರೆ.
'ಸೀಟು ಹಂಚಿಕೆಯ ಎಲ್ಲ ಪ್ರಕ್ರಿಯೆಗಳು ಆನ್‌ ಲೈನ್‌ ಮೂಲಕವೇ ನಡೆಯಲಿದೆ. ಶೇಕಡಾ 100 ರಷ್ಟು ದಾಖಲೆಗಳ ಪರಿಶೀಲನೆ ಆನ್‌ಲೈನ್‌ನಲ್ಲಿಯೇ ಮಾಡಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ಕೆಇಎ ಮುಂದೆ ಬಂದು ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ ಅರ್ಹರಿಗೆ ಒಳ್ಳೆಯ ಅವಕಾಶ ಲಭ್ಯವಾಗುತ್ತದೆ' ಎಂದೂ ಅವರು ಸ್ಪಷ್ಟಪಡಿಸಿದರು.

ಸಿಇಟಿ ಫಲಿತಾಂಶವನ್ನು ಏಕಾಏಕಿ ಪತ್ರಿಕಾ ಪ್ರಕಟಣೆಯ ಮೂಲಕ ಶನಿವಾರವೇ (ಜೂ.1) ಕೆಇಎ ಪ್ರಕಟಿಸಿದೆ. ಈ ಬಗ್ಗೆ ಪೋಷಕರಿಂದ ಮತ್ತು ಕಾಲೇಜು ಆಡಳಿತ ಮಂಡಳಿಗಳಿಂದಲೂ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಅದಕ್ಕೆ ನಂತರ ಕೆಇಎ ಸ್ಪಷ್ಟನೆ ಕೂಡ ನೀಡಿತ್ತು. ಸ್ಪಷ್ಟನೆ ನೀಡಿದ ಪ್ರಸನ್ನ, 'ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಪತ್ರಿಕಾಗೋಷ್ಠಿ ನಡೆಸದೆ ಶನಿವಾರವೇ ಫಲಿತಾಂಶ ಪ್ರಕಟಿಸಿದ್ದೇವೆ' ಎಂದು ಸಮಜಾಯಿಸಿ ನೀಡಿದ್ದಾರೆ. ಜೊತೆಗೆ ಮುಂದೆ ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: CET Result: KEA ಯಿಂದ ನಿನ್ನೆ ದಿಢೀರ್​ CET ರಿಸಲ್ಟ್ ಪ್ರಕಟ! ಸುದ್ದಿಗೋಷ್ಠಿಯಲ್ಲಿ KEA ಎಡವಟ್ಟಿನ ಸ್ಪಷ್ಟನೆ

Advertisement
Advertisement
Advertisement