For the best experience, open
https://m.hosakannada.com
on your mobile browser.
Advertisement

Kadaba: ಉತ್ಸಾಹದಿಂದ ಮತಗಟ್ಟೆಯಲ್ಲೇ ಮತದಾನ ಮಾಡಿದ ಶತಾಯುಷಿ ನಾಡೋಳಿಯ ಕುಜುಂಬಜ್ಜ

02:22 PM Apr 26, 2024 IST | ಸುದರ್ಶನ್
UpdateAt: 02:50 PM Apr 26, 2024 IST
kadaba  ಉತ್ಸಾಹದಿಂದ ಮತಗಟ್ಟೆಯಲ್ಲೇ ಮತದಾನ ಮಾಡಿದ ಶತಾಯುಷಿ ನಾಡೋಳಿಯ ಕುಜುಂಬಜ್ಜ
Advertisement

Advertisement

Kadaba: ಲೋಕಸಭಾ ಚುನಾವಣಾ ದಿನವಾದ ಇಂದು ಮುಂಜಾನೆಯಿಂದಲೇ ಎಲ್ಲಾ ಮತದಾನ ಕೇಂದ್ರದಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದೆ.ಮತದಾನದ ಸಮಯ ಆರಂಭವಾಗುತ್ತಲೇ ಮತದಾರರು ತಮ್ಮ ನೆಚ್ಚಿನ ನಾಯಕನ ಆಯ್ಕೆಗಾಗಿ ಮತ ಚಲಾಯಿಸಲು ಸಾಲುಗಟ್ಟಿ ನಿಂತಿದ್ದರು.

ಇದನ್ನೂ ಓದಿ:  Master Dating: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಮಾಸ್ಟರ್ ಡೇಟಿಂಗ್ : ಒಂಟಿಯಾಗಿರಲು ಬಯಸುವವರಿಗೆ ಇದು ಉತ್ತಮ ಆಯ್ಕೆ

Advertisement

ಇದನ್ನೂ ಓದಿ:  Mrunal Takur: ನನಗೆ ಮಗು ಬೇಕು, ಆದ್ರೆ ಎಗ್ ಫ್ರೀಜ್ ಮಾಡಿ ಪಡೆಯುವೆ - ನಟಿ ಮೃಣಾಲ್ !!

ಗ್ರಾಮೀಣ ಭಾಗದಲ್ಲೆಲ್ಲಾ ನಿತ್ಯ ಕೆಲಸಕ್ಕೆ ತೆರಳುವ ಮಂದಿ, ಗೃಹಿಣಿಯರ ಸಹಿತ ಯುವ ಮತದಾರರು ಹಾಗೂ ಹಿರಿಯ ನಾಗರಿಕರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಕಡಬ ತಾಲೂಕಿನ ಕುಟ್ರುಪಾಡಿ ಕಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಶತಾಯುಷಿ ಕುಜುಂಬ ಅಜಿಲ ನಾಡೋಳಿ ತಮ್ಮ ಮತ ಚಲಾಯಿಸಿ ಹರುಷ ವ್ಯಕ್ತಪಡಿಸಿದರು.

ಸುಮಾರು 104 ವರ್ಷ ವಯಸ್ಸಿನ ಕುಜುಂಬಜ್ಜ ಸದ್ಯ ವಿಶ್ರಾಂತ ಜೀವನ ನಡೆಸುತ್ತಿದ್ದು, ಒಂದು ಕಾಲದಲ್ಲಿ ಕೃಷಿಕರಿಗೆ ಅತ್ಯಗತ್ಯವಾದ 'ಮುಟ್ಟಾಳೆ' ತಯಾರಿಸಿ ಕಡಬ, ಹೊಸ್ಮಠ ಪರಿಸರದಲ್ಲಿ ಜನರ ಪ್ರೀತಿ ಗಳಿಸಿದ್ದ ಇವರು ಕಿರಿಯರಿಗೆ ಗೌರವದ ಮಾರ್ಗದರ್ಶಕರಾಗಿ, ನಲಿಕೆ ಸಮುದಾಯದ ಹಿರಿಜೀವ ಕಳೆದ ವರ್ಷವಷ್ಟೇ ಕುಟುಂಬ ಸದಸ್ಯರು ಹಾಗೂ ಊರವರ ಸಮ್ಮುಖದಲ್ಲಿ ಅದ್ದೂರಿಯ ಶತಾಬ್ಧಿ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.

85 ಕ್ಕಿಂತ ಹೆಚ್ಚು ಪ್ರಾಯದ ಹಿರಿಯ ನಾಗರಿಕರಿಗೆ ಮನೆಯಲ್ಲೇ ಮತದಾನ ಮಾಡುವ ವ್ಯವಸ್ಥೆ ಮಾಡುವ ಬಗ್ಗೆ ಚುನಾವಣಾ ಆಯೋಗದ ನಿರ್ದೇಶನವಿದ್ದರೂ ಕುಟ್ರುಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರ ಅದು ಜಾರಿಯಾಗಿಲ್ಲ, ಹಾಗಾಗಿ ತಮ್ಮ ಹಕ್ಕನ್ನು ಚಲಾಯಿಸಲು ಸುಮಾರು ನಾಲ್ಕು ಕಿಲೋ ಮೀಟರ್ ದೂರದಿಂದ ಮತಗಟ್ಟೆಗೆ ಕರೆದುಕೊಂಡು ಬಂದೆವು ಎಂದು ಕುಜಂಬ ಅಜಿಲರ ಪುತ್ರ ಕುಕ್ಕ ನಾಡೋಳಿ ಬೇಸರ ವ್ಯಕ್ತಪಡಿಸಿದರು.

Advertisement
Advertisement
Advertisement