For the best experience, open
https://m.hosakannada.com
on your mobile browser.
Advertisement

Seized Money And Liquor: ಚುನಾವಣೆಯಲ್ಲಿ ಅಕ್ರಮವಾಗಿ ವಶಪಡಿಸಿಕೊಂಡ ಮದ್ಯ ಹಾಗೂ ಹಣ ಮುಂದೆ ಏನಾಗುತ್ತೆ ? : ಇಲ್ಲಿದೆ ಉತ್ತರ

05:30 PM Mar 20, 2024 IST | ಕೆ. ಎಸ್. ರೂಪಾ
UpdateAt: 05:27 PM Mar 26, 2024 IST
seized money and liquor  ಚುನಾವಣೆಯಲ್ಲಿ ಅಕ್ರಮವಾಗಿ ವಶಪಡಿಸಿಕೊಂಡ ಮದ್ಯ ಹಾಗೂ ಹಣ ಮುಂದೆ ಏನಾಗುತ್ತೆ      ಇಲ್ಲಿದೆ ಉತ್ತರ

Seized Money And Liquor: ಸಾಮಾನ್ಯವಾಗಿ ಚುನಾವಣೆಗಳ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು ಜನರಿಗೆ ದುಡ್ಡು, ಮಧ್ಯ ಸೇರಿದಂತೆ ವಿವಿಧ ರೀತಿಯಲ್ಲಿ ಆಮೀಷ ಒಡ್ಡಲು ಮುಂದಾಗುತ್ತಾರೆ. ಅದರಲ್ಲೂ ಕೆಲವೊಮ್ಮೆ ಈ ರೀತಿ ಅಕ್ರಮವಾಗಿ ಹಂಚಲು ತೆಗೆದುಕೊಂಡು ಹೋಗುವಾಗ ಪೊಲೀಸರು ಅಥವಾ ಚುನಾವಣಾ ಆಯೋಗದ ಕೈಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆದರೆ ಇದೆಲ್ಲ ಆದ ಬಳಿಕ ವಶಪಡಿಸಿಕೊಂಡ ಹಣ ಮತ್ತು ಮದ್ಯ ಮುಂದೆ ಏನಾಗುತ್ತದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

Advertisement

ಇನ್ನೇನು ಕೆಲವೇ ದಿನಗಳಲ್ಲಿ 2024ರ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಅಭ್ಯರ್ಥಿಗಳ ಮೊದಲನೇ ಹಂತದ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ. ಇನ್ನೊಂದೆಡೆ ಮೋದಿಯವರು ಚುನಾವಣಾ ಪ್ರಚಾರಕ್ಕೆ ಕರ್ನಾಟಕದಿಂದಲೇ ಚಾಲನೆ ನೀಡಿದ್ದಾರೆ.

ಚುನಾವಣೆ ಘೋಷಣೆಯಾದ ದಿನವೇ ಚುನಾವಣಾ ನೀತಿ ಸಂಹಿತೆಯು ಸಹ ಜಾರಿಯಾಗಿದೆ. ಈ ಸಂದರ್ಭದಲ್ಲಿ ರಾಜಕಾರಣಿಗಳು ಕಳ್ಳ ಮಾರ್ಗದಲ್ಲಿ ಜನರಿಗೆ ಹಣ, ಮದ್ಯ, ಸೇರಿದಂತೆ ಇತರೆ ಆಮೀಷಗಳನ್ನು ಒಡ್ಡಲು ಮುಂದಾಗುತ್ತಾರೆ. ಆದರೆ ಆಯೋಗದ ನಿಯಮದಂತೆ ಈ ವೇಳೆ ದಾಖಲೆ ಇಲ್ಲದ ಹಣವನ್ನಾಗಲಿ ಮದ್ಯವನ್ನಾಗಲಿ ಸಾಗಿಸುವುದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿರುತ್ತದೆ. ಹಾಗಾದರೆ ಈ ರೀತಿ ವಶಪಡಿಸಿಕೊಂಡ ಹಣ ಮತ್ತು ಮದ್ಯ ಮುಂದೆ ಏನಾಗುತ್ತದೆ ಬನ್ನಿ ತಿಳಿಯೋಣ.

Advertisement

Interesting Facts: ಸೂರ್ಯನ ಬಗ್ಗೆ ನಮಗೆ ಗೊತ್ತಿಲ್ಲದ, ತಿಳಿದುಕೊಳ್ಳಲೇ ಬೇಕಾದ ಆಕರ್ಷಕ ವಿಷಯಗಳು !

ಹೀಗೆ ಚುನಾವಣೆ ಮಧ್ಯದಲ್ಲಿ ಕಪ್ಪು ಹಣ ಹೆಚ್ಚಾಗಿ ಹರಿದಾಡುವ ಸಂದರ್ಭದಲ್ಲಿ ಪೊಲೀಸರು ಚೆಕ್ ಪೋಸ್ಟ್ಗಳನ್ನು ಹಾಕಿ ಆ ಹಣವನ್ನು ವಶಪಡಿಸಿಕೊಳ್ಳುತ್ತಾರೆ. ಬಳಿಕ ಆ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಹಣವು ನ್ಯಾಯಯುತವಾಗಿದ್ದರೆ ಅದರ ಮಾಲೀಕರು ಆ ಮೊತ್ತವನ್ನು ಪುನಃ ವಾಪಸ್ ಪಡೆಯುವ ಅವಕಾಶವಿರುತ್ತದೆ.

ಈ ಹಣವನ್ನು ವಾಪಸ್ ಪಡೆಯಲು ಪ್ರಮುಖವಾಗಿ ಹಣ ಸಂದಾಯದ ರಿಶೀದಿ, ಎಟಿಎಂ ಕಾರ್ಡ್ ವಹಿವಾಟು, ಹೀಗೆ ಕೆಲವು ದಾಖಲಾತಿಗಳನ್ನು ಒದಗಿಸ ಬೇಕಾಗುತ್ತದೆ ಆನಂತರ ಹಣವನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲಾಗುತ್ತದೆ. ಒಂದು ವೇಳೆ ಹಣದ ಬಗ್ಗೆ ಯಾವುದೇ ರೀತಿ ಮಾಹಿತಿ ಕೊಡದೆ ಹೋದಲ್ಲಿ ಆ ಮೊತ್ತವು ಸರ್ಕಾರದ ಖಜಾನೆ ಸೇರುತ್ತದೆ ತ್ತದೆ.

ಇನ್ನು ಹಣದ ರೀತಿಯಲ್ಲಿಯೇ ಅಕ್ರಮ ಮದ್ಯವನ್ನು ಸಹ ಹಂಚಲಾಗುತ್ತದೆ. ಈ ವೇಳೆ ಪೊಲೀಸರು ಮದ್ಯದ ಬಾಟಲಿಗಳನ್ನ ವಶಪಡಿಸಿಕೊಳ್ಳುತ್ತಾರೆ. ಒಂದು ವೇಳೆ ಅವು ಸಕ್ರಮ ಮಾರಾಟದದ ಪರವಾನಿಗೆ ಇದ್ದರೆ ಅವನ್ನು ಮತ್ತೆ ಮಾಲೀಕರಿಗೆ ಹಿಂದಿರುಗಿಸಲಾಗುತ್ತದೆ. ಒಂದು ವೇಳೆ ಅದಕ್ಕೆ ಯಾವುದೇ ದಾಖಲೆ ಇಲ್ಲವೆಂದಾದರೆ ಆ ಮದ್ಯ ದ ಬಾಟಲಿಗಳನ್ನೆಲ್ಲ ಒಂದೆಡೆ ಶೇಖರಣೆಮಾಡಿ ನಂತರ ಅವುಗಳನ್ನು ಬುಲ್ಡೋಜರ್ ಹತ್ತಿಸುವ ಮೂಲಕ ಅಥವಾ ನಿರ್ಜನ ಪ್ರದೇಶದಲ್ಲಿ ಮದ್ಯವನ್ನೆಲ್ಲ ಸುರಿದು ಅದನ್ನು ನಾಶಪಡಿಸಲಾಗುತ್ತದೆ.

ಇದನ್ನೂ ಓದಿ: J C Madhuswamy: ಯಡಿಯೂರಪ್ಪ ಆಪ್ತ, ಬಿಜೆಪಿ ಪ್ರಬಲ ನಾಯಕ ಜೆ. ಸಿ ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆ ?!

Advertisement
Advertisement
Advertisement