For the best experience, open
https://m.hosakannada.com
on your mobile browser.
Advertisement

Madhu bangarappa: ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಬಂತು ಹೊಸ ರೂಲ್ಸ್- ಶಿಕ್ಷಣ ಸಚಿವರಿಂದ ಖಡಕ್ ಆದೇಶ

06:47 AM Nov 30, 2023 IST | ಹೊಸ ಕನ್ನಡ
UpdateAt: 06:47 AM Nov 30, 2023 IST
madhu bangarappa  ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಬಂತು ಹೊಸ ರೂಲ್ಸ್  ಶಿಕ್ಷಣ ಸಚಿವರಿಂದ ಖಡಕ್ ಆದೇಶ
Advertisement

Madhu bangarappa: ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರು ತಮ್ಮ ವೃತ್ತಿಗೆ ವಿರುದ್ಧವಾಗಿ, ಕಾನೂನು ಬಾಹಿರವಾಗಿ ಖಾಸಗಿ ಕೆಸಲಗಳಲ್ಲಿ ತೊಡಗಿರುವ ಕುರಿತು ಅನೇಕ ದೂರುಗಳು ಬಂದಿರುವುದರಿಂದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು(Madhu bangarappa) ಹೊಸ ಆದೇಶವೊಂದುನ್ನು ಹೊರಡಿಸಿದ್ದಾರೆ.

Advertisement

ಹೌದು, ಶಿಕ್ಷಕ ವೃತ್ತಿ ಎಂಬುದು ಪವಿತ್ರವಾದ ಹಾಗೂ ಆತ್ಮ ತೃಪ್ತಿ ನೀಡುವ ಕೆಲಸ. ಆದರೆ ಇಂತಹ ಉದ್ಯೋಗದಲ್ಲಿದ್ದುಕೊಂಡು ಕೆಲವು ಸರ್ಕಾರಿ ಶಿಕ್ಷಕರು ಬಿಡುವಿನ ವೇಳೆ ಖಾಸಗೀ ಕೆಲಸಗಳಲ್ಲೂ ತೊಡಗಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಹೀಗಾಗಿ ಇಂತವರ ಕುರಿತು ಸದ್ಯದಲ್ಲೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಡಕ್ ಸೂಚನೆಯನ್ನು ನೀಡಿದ್ದಾರೆ.

ಅಂದಹಾಗೆ ಹಾಸನದಲ್ಲಿ ಮಾತನಾಡಿದ ಅವರು ಕೆಲವು ಶಿಕ್ಷಕರು ಶಾಲೆಗಳಿಗೆ ಸರಿಯಾಗಿ ಹೋಗುತ್ತಿಲ್ಲ. ಸರ್ಕಾರ ಸಂಬಳ ನೀಡಿದರೂ ಕೆಲವರು ಅದಕ್ಕೆ ತಕ್ಕಂತೆ ದುಡಿಯುತ್ತಿಲ್ಲ. ಸರ್ಕಾರದ ಸಂಬಳದ ಜೊತೆಗೆ ಬಡ್ಡಿ ದಂಧೆ, ರಾಜಕೀಯ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ನಿರತರಾಗಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಸಂಬಂಧ ಶೀಘ್ರದಲ್ಲೇ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ:Pneumonia Case: ಚೀನಾದಲ್ಲಿ ನಿಗೂಢ ನ್ಯುಮೋನಿಯಾ ಸೋಂಕು ಹೆಚ್ಚಳ ಭೀತಿ: ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ಕೇಂದ್ರ ಇಲಾಖೆ ಸೂಚನೆ!!

Advertisement
Advertisement
Advertisement