ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Education Board : 2024-25ನೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ- ಶಾಲಾ ರಜೆಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Education Board: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗುವ 2024-2025ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ್ದು, ಶಾಲೆಗಳ ಚಟುವಟಿಕೆಗಳು ಹಾಗೂ ರಜೆಗಳ ಮಾಹಿತಿಯನ್ನು ನೀಡಿದೆ
11:21 PM Apr 05, 2024 IST | ಸುದರ್ಶನ್
UpdateAt: 11:23 PM Apr 05, 2024 IST
Advertisement

Education Board : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು(Education Board)ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗುವ 2024-2025ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ್ದು, ಶಾಲೆಗಳ ಚಟುವಟಿಕೆಗಳು ಹಾಗೂ ರಜೆಗಳ ಮಾಹಿತಿಯನ್ನು ನೀಡಿದೆ.

Advertisement

ಇದನ್ನೂ ಓದಿ: Study Astrology: ರೂಂ ನ ಗೋಡೆಯ ಮೇಲೆ ಈ ಫೋಟೋ ಹಾಕಿದ್ರೆ ಸಾಕು, ನಿಮ್ಮ ಮಕ್ಕಳು ಟಾಪರ್ ಆಗ್ತಾರೆ!

ಹೌದು, ಇಲಾಖೆಯು ಪ್ರಕಟಿಸಿರುವ ವೇಳಾಪಟ್ಟಿಯಲ್ಲಿ ಮೊದಲನೇ ಅವಧಿಯು 2024ರ ಮೇ 29 ರಿಂದ ಅಕ್ಟೋಬರ್ 2 ರವರೆಗೆ, ಎರಡನೇ ಅವಧಿಯು ಅಕ್ಟೋಬರ್‌ 21ರಿಂದ 2025ರ ಏಪ್ರಿಲ್‌ 10 ರವರೆಗೆ ಇರಲಿದೆ. ಇದರ ನಡುವೆ, ಅಕ್ಟೋಬರ್ 3 ರಿಂದ 20 ರವರೆಗೆ ದಸರಾ ರಜೆ(Dasara Holidays) , 2025ರ ಏ.11ರಿಂದ ಮೇ 28ರವರೆಗೆ ಬೇಸಿಗೆ ರಜೆ(Summer Vacation ಯನ್ನು ನಿಗದಿ ಮಾಡಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

Advertisement

ಇದನ್ನೂ ಓದಿ: Garlic Price: ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ ಪಕ್ಕಾ! 

ಅಲ್ಲದೆ ಒಟ್ಟು 244 ಶಾಲಾ ಕರ್ತವ್ಯದ ದಿನಗಳು ಇರಲಿದ್ದು, ಇದರಲ್ಲಿ ಪರೀಕ್ಷೆ ಮೌಲ್ಯಾಂಕನ ಕಾರ್ಯಕ್ಕೆ 26 ದಿನಗಳು, ಪಠ್ಯೇತರ ಚಟುವಟಿಕೆಗೆ 24 ದಿನಗಳು, ಮೌಲ್ಯಮಾಪನ, ಫಲಿತಾಂಶ ವಿಶ್ಲೇಷಣೆಗೆ 10 ದಿನ, ಶಾಲಾ ಸ್ಥಳೀಯ ರಜೆ 4 ದಿನ, ಬೋಧನಾ ಕಲಿಕೆಗೆ 180 ದಿನಗಳು ಎಂದು ವಿಂಗಡಿಸಲಾಗಿದೆ.

ಜೊತೆಗೆ ಈ ವಾರ್ಷಿಕ ಮಾರ್ಗಸೂಚಿಯಲ್ಲಿ ಮಾಸಿಕ ಪಾಠ ಹಂಚಿಕೆ, ಪಠ್ಯತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಲಿತಾಂಶಮುಖಿ ಚಟುವಟಿಕೆಗಳು, ಸಂಭ್ರಮ ಶನಿವಾರ ಸೇರಿ ಇತರೆ ಯೋಜನೆಗಳನ್ನು ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

Related News

Advertisement
Advertisement