ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Diet Plan: ಡಯಟ್ ಮಾಡೋ ಪ್ಲಾನ್ ಉಂಟಾ? ಈ ಉಪಹಾರ ತಿಂದ್ರೆ ಈಸಿಯಾಗಿ ತೂಕ ಇಳಿಯುತ್ತೆ

02:17 PM Feb 17, 2024 IST | ಹೊಸ ಕನ್ನಡ
UpdateAt: 02:27 PM Feb 17, 2024 IST
Advertisement

Dayat food: ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಚಂದವಾಗಿ ಕಾಣಬೇಕು, ಸ್ಮಾರ್ಟ್ ಆಗಿ ಕಾಣಬೇಕು ಎಂಬ ಆಸೆ. ಆದರೆ ಏನು ಮಾಡೋದು, ಅವರಿರುವ ಎತ್ತರ, ವಿಪರೀತವಾಗಿ ಬೆಳೆದ ಬೊಜ್ಜು, ದಡೂತಿ ದೇಹ ಇದೆಲ್ಲದಕ್ಕೂ ಅಡ್ಡಿ ಬರುತ್ತದೆ. ಇದಕ್ಕಾಗಿ ಕೆಲವರು ಜಿಮ್, ಯೋಗ, ವ್ಯಾಯಾಮ ಮಾಡಿದರೆ ಮತ್ತೆ ಕೆಲವರು ಡಯಟ್ ಮಾಡುತ್ತಾರೆ. ಹಾಗಿದ್ರೆ ಯಾವ ಫುಡ್ ತಂಗೊಂಡ್ರೆ(Dayat food) ದೇಹದ ತೂಕ ಬೇಗ ಇಳಿಯುತ್ತೆ ಗೊತ್ತಾ? ಇಲ್ಲಿದೆ ನೋಡಿ ಲಿಸ್ಟ್

Advertisement

ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಮೊದಲು ತಕ್ಷಣ ಈ ಸುದ್ದಿ ನೋಡಿ !!

ಪಾಲಕ್‌ ಪನೀರ್‌ : ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪ್ರೋಟೀನ್ ಹೊಂದಿದೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇದರಿಂದಾಗಿ ತೂಕ ನಿಯಂತ್ರಣದಲ್ಲಿರುತ್ತದೆ.

Advertisement

ಮೊಳಕೆ ಕಾಳು : ಇವುಗಳಲ್ಲಿ ಹೆಸರು ಕಾಳು ತೂಕ ಇಳಿಸಿಕೊಳ್ಳಲು ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ಕ್ಯಾಲೋರಿ ಕಡಿಮೆಯಿರುತ್ತದೆ. ಇದನ್ನು ಜೀರ್ಣಿಸಿಕೊಳ್ಳುವುದು ಕೂಡ ತುಂಬಾ ಸುಲಭ. ಇದು ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ತೂಕವನ್ನು ಬೇಗನೆ ಕಡಿಮೆ ಮಾಡುತ್ತದೆ.

ಇಡ್ಲಿ ಸಾಂಬಾರ್‌ : ದಕ್ಷಿಣ ಭಾರತದ ಆಹಾರಗಳನ್ನು ತಿನ್ನಲು ಬಯಸಿದರೆ ಇಡ್ಲಿ ಸಾಂಬಾರ್ ಉತ್ತಮ ಆಯ್ಕೆ. ಇದು ವೇಗವಾಗಿ ತೂಕವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಆರೋಗ್ಯ ತಜ್ಞರು ಕೂಡ ಇಡ್ಲಿ ಸಾಂಬಾರ್ ದೇಹಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸುತ್ತಾರೆ.

ಮೊಟ್ಟೆಯ ಆಮ್ಲೆಟ್‌ – ಮೊಟ್ಟೆಯ ಆಮ್ಲೆಟ್ ತೂಕ ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ. ಇದನ್ನು ರೊಟ್ಟಿ, ಬ್ರೆಡ್ ಅಥವಾ ಅನ್ನದೊಂದಿಗೆ ತಿನ್ನಬಹುದು. ಆದರೆ ಆಮ್ಲೆಟ್‌ಗೆ ಹೆಚ್ಚು ಎಣ್ಣೆ ಬಳಸಬೇಡಿ.

ಮೊಸರುಬಜ್ಜಿ : ಇದು ರುಚಿಕರ ಮಾತ್ರವಲ್ಲ ಆರೋಗ್ಯಕರವೂ ಹೌದು. ತೂಕ ಕಡಿಮೆ ಮಾಡಲು ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಕ್ಯಾಲ್ಸಿಯಂ ಇದರಲ್ಲಿ ಸಮೃದ್ಧವಾಗಿದೆ ಜೊತೆಗೆ ನಾರಿನಂಶವು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಡುತ್ತದೆ.

Advertisement
Advertisement