For the best experience, open
https://m.hosakannada.com
on your mobile browser.
Advertisement

DSP Demoted to Constable: ಸಹೋದ್ಯೋಗಿಯೊಂದಿಗೆ ಹೋಟೆಲ್ನಲ್ಲಿ ಸರಸ! DSPಗೆ ಕಾನ್‌ಸ್ಟೆಬಲ್ ಆಗಿ ಹಿಂಬಡ್ತಿ!

DSP Demoted to Constable: ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅಂತೆಯೇ  ಪೊಲೀಸ್ ಒಬ್ಬರು ಕರ್ತವ್ಯಕ್ಕೆ ಮತ್ತು ಕುಟುಂಬಕ್ಕೆ ಮಾಡಿದ ಮೋಸಕ್ಕೆ ಸರಿಯಾದ ಶಿಕ್ಷೆ ನೀಡಲಾಗಿದೆ.
03:44 PM Jun 23, 2024 IST | ಕಾವ್ಯ ವಾಣಿ
UpdateAt: 03:44 PM Jun 23, 2024 IST
dsp demoted to constable   ಸಹೋದ್ಯೋಗಿಯೊಂದಿಗೆ ಹೋಟೆಲ್ನಲ್ಲಿ ಸರಸ  dspಗೆ ಕಾನ್‌ಸ್ಟೆಬಲ್ ಆಗಿ ಹಿಂಬಡ್ತಿ
Advertisement

DSP Demoted to Constable: ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅಂತೆಯೇ  ಪೊಲೀಸ್ ಒಬ್ಬರು ಕರ್ತವ್ಯಕ್ಕೆ ಮತ್ತು ಕುಟುಂಬಕ್ಕೆ ಮಾಡಿದ ಮೋಸಕ್ಕೆ ಸರಿಯಾದ ಶಿಕ್ಷೆ ನೀಡಲಾಗಿದೆ. ಹೌದು, ಸಹೋದ್ಯೋಗಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಹೋಟೆಲೊಂದರಲ್ಲಿ ಸಿಕ್ಕಿಬಿದ್ದಿದ್ದ ಉತ್ತರ ಪ್ರದೇಶದ (Uttar Pradesh) ಡಿಎಸ್‌ಪಿ ಅಧಿಕಾರಿಯೊಬ್ಬರನ್ನ ಕಾನ್‌ಸ್ಟೇಬಲ್‌ (Constable) ಆಗಿ ಹಿಂಬಡ್ತಿಗೊಳಿಸಿರುವ (DSP Demoted to Constable) ಘಟನೆ ನಡೆದಿದೆ.

Advertisement

Basavangouda Patil Yatnal: ದೇಶದಲ್ಲಿರೋ 12 ಲಕ್ಷ ಎಕರೆ ವಕ್ಫ್ ಜಮೀನು ಬಡವರಿಗೆ ಹಂಚಿಕೆ ?! ಹೊಸ ಬಾಂಬ್ ಸಿಡಿಸಿದ ಯತ್ನಾಳ್

Advertisement

 ಮಾಹಿತಿ ಪ್ರಕಾರ ಮೂರು ವರ್ಷಗಳ ಹಿಂದೆ (ಡಿಎಸ್‌ಪಿ) ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಕೃಪಾ ಶಂಕರ್ ಕನೌಜಿಯ 2021ರ ಜು.6ರಂದು ಕೌಟುಂಬಿಕ ಕಾರಣಗಳಿಗಾಗಿ ಅಂದಿನ ಉನ್ನಾವೋ ಎಸ್ಪಿ ಅವರಿಂದ ರಜೆ ಪಡೆದಿದ್ದರು. ಆದ್ರೆ ಆತ ಮನೆಗೆ ಹೋಗುವ ಬದಲಿಗೆ ಕಾನ್ಪುರ ಬಳಿಯ ಹೋಟೆಲ್‌ಗೆ ಹೋಗಿದ್ದರು. ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡು ಮಹಿಳಾ ಸಹೋದ್ಯೋಗಿಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರು.

ಇದೇ ಸಮಯದಲ್ಲಿ ಆತನ ಪತ್ನಿ ಸಹ ಕನೌಜಿಯಾಗೆ ಕರೆ ಮಾಡಿದ್ದಾರೆ‌, ಫೋನ್‌ ಸ್ವಿಚ್‌ ಆಫ್‌ ಬಂದ ನಂತರ ಉನ್ನಾವೋ ಎಸ್ಪಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ಎಸ್ಪಿ ನೆಟ್‌ವರ್ಕ್‌ ಪರಿಶೀಲಿಸಿದಾಗ ಕನೌಜಿಯಾ ಅವರ ಫೋನ್‌ ಕೊನೆಯದ್ದಾಗಿ ಹೋಟೆಲ್‌ನಲ್ಲಿ ಸಕ್ರೀಯಾವಾಗಿದ್ದದ್ದು ಗೊತ್ತಾಗಿದೆ. ನಂತರ ಪೊಲೀಸರ ತಂಡವನ್ನು ಹೋಟೆಲ್‌ಗೆ ಕಳುಹಿಸಿದಾಗ ಸಹೋದ್ಯೋಗಿ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದಾರೆ.

ಸದ್ಯ ಉನ್ನಾವೊ ಪೊಲೀಸರು ಸಿಒಗೆ ಸಂಬಂಧಿಸಿದ ವೀಡಿಯೊ ಸಾಕ್ಷ್ಯವನ್ನು ತೆಗೆದುಕೊಂಡಿದ್ದರು. ನಂತರ, ಲಕ್ನೋ ರೇಂಜ್ ಪೊಲೀಸ್ ಮಹಾನಿರೀಕ್ಷಕ (IGP) ಅವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಇದೀಗ ಮೂರು ವರ್ಷಗಳ ನಂತರ ಅವರನ್ನ  ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PCP) ಗೋರಖ್‌ಪುರ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿ ನಿಯೋಜಿಸಲಾಗಿದೆ.

Paneer Fried Rice: ನೀವೂ ಸಹ ಸುಲಭ ಮತ್ತು ಅತೀ ಕಡಿಮೆ ಸಮಯದಲ್ಲಿ ಪನ್ನೀರ್ ಪ್ರೈಡ್ ರೈಸ್ ಮಾಡಿ!

Advertisement
Advertisement
Advertisement