For the best experience, open
https://m.hosakannada.com
on your mobile browser.
Advertisement

Bengaluru Rural: BJPಯ ಡಾ. ಸಿ ಎನ್ ಮಂಜುನಾಥ್ ವಿರುದ್ಧ ಕಣಕ್ಕಿಳಿದ ಮತ್ತೊಬ್ಬ ಡಾ. ಸಿ ಎನ್ ಮಂಜುನಾಥ್ !!

Bengaluru Rural: ಅಚ್ಚರಿ ಎಂಬಂತೆ ಮತ್ತೋರ್ವ ಡಾ ಸಿಎನ್ ಮಂಜುನಾಥ್ ಕಣಕ್ಕೆ ಇಳಿದಿದ್ದು, ಕ್ಷೇತ್ರದಲ್ಲಿ ಹೊಸ ತಂತ್ರಗಾರಿಕೆ ಶುರುವಾಗಿದೆ
01:39 PM Mar 28, 2024 IST | ಸುದರ್ಶನ್
UpdateAt: 01:41 PM Mar 28, 2024 IST
bengaluru rural  bjpಯ ಡಾ  ಸಿ ಎನ್ ಮಂಜುನಾಥ್ ವಿರುದ್ಧ ಕಣಕ್ಕಿಳಿದ ಮತ್ತೊಬ್ಬ ಡಾ  ಸಿ ಎನ್ ಮಂಜುನಾಥ್
Advertisement

Bengaluru Rural: ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತ(Bengaluru Rural)ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಹಾಗೂ ಬಿಜೆಪಿ ಅಭ್ಯರ್ಥಿ ಡಿ ಸಿ ಎನ್ ಮಂಜುನಾಥ್ ವಿರುದ್ಧ ನೇರ ಹಣಾಹಣಿ ನಡೆಯಲಿದೆ. ಆದರೀಗ ಅಚ್ಚರಿ ಎಂಬಂತೆ ಮತ್ತೋರ್ವ ಡಾ ಸಿಎನ್ ಮಂಜುನಾಥ್ ಕಣಕ್ಕೆ ಇಳಿದಿದ್ದು, ಕ್ಷೇತ್ರದಲ್ಲಿ ಹೊಸ ತಂತ್ರಗಾರಿಕೆ ಶುರುವಾಗಿದೆ.

Advertisement

ಇದನ್ನೂ ಓದಿ: Priyank Kharge: ನನ್ನ ಹೆಣ ಬೀಳಿಸಿಯಾದ್ರೂ ಚುನಾವಣೆ ಗೆಲ್ಲುವ ಪ್ಲಾನ್; ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ಹೌದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮತ್ತೊಬ್ಬ ಡಾ. ಸಿ ಎನ್ ಮಂಜುನಾಥ್‌(Dr C N Manjunath)ಬಹುಜನ ಭಾರತ್ ಪಾರ್ಟಿ(BSP) ಪಾರ್ಟಿಯಿಂದ ಚುನಾವಣಾ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದು, ಸಿನಿಮೀಯ ರೀತಿಯಲ್ಲಿ ಲೋಕಸಭಾ ಸಮರದಲ್ಲಿ ಹೊಸ ತಂತ್ರ ಮಾಡಲಾಗಿದ್ಯಾ ಎಂಬ ಪ್ರಶ್ನೆ ಮೂಡಿದೆ.

Advertisement

ಇದನ್ನೂ ಓದಿ: Dingaleshwara Shri: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿದ್ದೇ ಪ್ರಹ್ಲಾದ್ ಜೋಶಿ - ದಿಂಗಾಲೇಶ್ವರ ಶ್ರೀಗಳಿಂದ ಸ್ಪೋಟಕ ಮಾಹಿತಿ

ಅಂದಹಾಗೆ ಕುತೂಹಲದ ಸಂಗತಿ ಎಂದರೆ ಬಿಜೆಪಿ ಅಭ್ಯರ್ಥಿ ಹಾಗೂ ಜಯದೇವ ಮಾಜಿ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ಹಾಗೂ BSP ಯಿಂದ ಸ್ಪರ್ಧಿಸಲು ಮುಂದಾದ ಮಂಜುನಾಥ್ ಅವರದ್ದು ಒಂದೇ ಹೆಸರು. ತಂದೆಯ ಹೆಸರೂ ಕೂಡ ಒಂದೇ ಆಗಿದ್ದು, ಒಂದೇ ಜಿಲ್ಲೆ, ಒಂದೇ ತಾಲೂಕು ಹಾಗೂ ಇಬ್ಬರಿಗೂ ಗೌರವ ಡಾಕ್ಟರೇಟ್ ದೊರೆತಿರುವುದು ಅಚ್ಚರಿಯ ಸಂಗಿತಿಯಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

Advertisement
Advertisement
Advertisement