ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Double Crown: ತಲೆಯಲ್ಲಿ ಎರಡೂ ಸುರುಳಿಯಿದ್ದರೆ ಏನರ್ಥ ಗೊತ್ತಾ??

01:19 PM Jan 01, 2024 IST | ಅಶ್ವಿನಿ ಹೆಬ್ಬಾರ್
UpdateAt: 01:51 PM Jan 01, 2024 IST
Advertisement

Double Crown: ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ತಲೆಯಲ್ಲಿ ಒಂದು ಸುಳಿಯಿರುವುದನ್ನು ಗಮನಿಸಿರಬಹುದು. ಇದರ ಜೊತೆಗೆ ತಲೆಯಲ್ಲಿ ಎರಡು ಸುಳಿಯಿದ್ದರೆ(Double Crown)ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕೆಲವರು ಇದನ್ನು ಕೆಟ್ಟ ಸೂಚನೆ ಎಂದು ಹೇಳುತ್ತಾರೆ. ಹೆಚ್ಚಿನವರು ನೆತ್ತಿಯ ಮೇಲೆ ಎರಡು ಸುಳಿ ಹೊಂದಿರುತ್ತಾರೆ. ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣು ಇಬ್ಬರಿಗೂ ಎರಡು ಸುಳಿಯಿರುತ್ತದೆ. ಈ ರೀತಿ ಎರಡೂ ಸುರುಳಿ ಗಂಡಸರಿಗಿದ್ದರೆ ಎರಡನೇ ಮದುವೆ ಯೋಗವಿದೆ (second marriage)ಎಂದು ಹಾಸ್ಯ ಮಾಡುವುದು ಕೇಳಿರಬಹುದು. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ.

Advertisement

ಇದನ್ನು ಓದಿ: Sabarimala: ಶಬರಿಮಲೆಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್!!

ಜ್ಯೋತಿಷ್ಯ ಶಾಸ್ತ್ರದ ಅನುಸಾರ, ತಲೆಯಲ್ಲಿ ಎರಡು ಸುಳಿಗಳನ್ನು ಹೊಂದಿರುವವರು ಉತ್ತಮ ಗುಣಗಳನ್ನು ಹೊಂದಿರುತ್ತಾರಂತೆ . ಇದರ ಜೊತೆಗೆ ಈ ರೀತಿ ತಲೆಯಲ್ಲಿ ಎರಡೂ ಸುರುಳಿಯಿದ್ದವರು ಎಲ್ಲರಿಗೂ ಸಹಾಯ ಮಾಡುವ ಮನೋಭಾವವನ್ನು ಹೊಂದಿರುತ್ತಾರಂತೆ. ಅಧ್ಯಯನದ ಪ್ರಕಾರ, ಪ್ರಪಂಚದಾದ್ಯಂತ ಕೇವಲ 5% ಜನರು ಮಾತ್ರ ತಲೆಯಲ್ಲಿ ಎರಡು ಸುಳಿಯನ್ನು ಹೊಂದಿರುತ್ತಾರಂತೆ. ವಿಜ್ಞಾನದ(Science) ಪ್ರಕಾರ ಎರಡು ಸುಳಿಗಳ ರೂಪುಗೊಳ್ಳುವಿಕೆಯ ರಚನೆಯಲ್ಲಿ ಜೆನೆಟಿಕ್ಸ್ ಕೂಡ ಒಂದು ಅಂಶವಾಗಿದೆ. ವಿಜ್ಞಾನದ ಪ್ರಕಾರ ಕುಟುಂಬದಲ್ಲಿ ಹಿಂದಿನ ತಲೆಮಾರಿನಲ್ಲಿ ಯಾರಿಗಾದರೂ ತಲೆಯಲ್ಲಿ ಎರಡು ಸುಳಿ (Double crown)ಯಿದ್ದರೆ ಈ ರೀತಿ ಆಗುತ್ತದಂತೆ.

Advertisement

Advertisement
Advertisement