Google map: ಗೂಗಲ್ ಮ್ಯಾಪ್'ಗೆ ನಿಮ್ಮ ಮನೆ ಲೊಕೇಶನ್ ಸೇರಿಸಬೇಕೆ ?! ಹಾಗಿದ್ರೆ ಜಸ್ಟ್ ಹೀಗೆ ಮಾಡಿ
Google Map: ಗೂಗಲ್ ಮ್ಯಾಪ್ನ ಈ ಹೊಸ ಅಪ್ ಡೇಟ್ ಅನ್ವಯ,ಬಳಕೆದಾರರು ಪ್ರಸ್ತುತ ಮ್ಯಾಪ್(Google Map) ನಲ್ಲಿ ನಿಮ್ಮ ಮನೆಯನ್ನೂ ಸೇರಿಸಬಹುದಾಗಿದೆ. ಜೊತೆಗೆ ಇರುವ ರಸ್ತೆಗಳ ಹೆಸರು, ಮಾಹಿತಿ ಸೇರಿದಂತೆ ಯಾವುದಾದರೂ ಹೊಸ ಬದಲಾವಣೆಗಳು ಆಗಿದ್ದರೆ ಅಂತಹ ಬದಲಾವಣೆಗಳನ್ನು ಕೂಡ ನೀವೇ ಮಾಡಬಹುದಾಗಿದೆ.
ಇದನ್ನೂ ಓದಿ: Relationship: ನಿಮ್ಮವಳನ್ನು ಮೂಡ್‌ಗೆ ತರಲು ಸಂಗಾತಿಯಾದ ನೀವು ಮಾಡಬೇಕಾಗಿರುವುದು ಇಷ್ಟೇ!
ಹೌದು, ವಿಶ್ವದ ಪ್ರಸಿದ್ಧ ಸರ್ಚ್ ಇಂಜಿನ್(Serch Engine) ಆಗಿರುವ ಗೂಗಲ್ ಇತ್ತೀಚಿನ ದಿನಗಳಲ್ಲಿ ಹಲವಾರು ವಿಭಿನ್ನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಬಳಕೆದಾರರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಈ ಪೈಕಿ ವ್ಯಾಪಕವಾಗಿ ಬಳಸುವ ಗೂಗಲ್ ಮ್ಯಾಪ್ನಲ್ಲೂ ಅನೇಕದ ಅಪ್ಡೇಟ್ಗಳನ್ನು ನೀಡಿ ಸಹಕಾರಿಯಾಗಿದೆ.
ಇದನ್ನೂ ಓದಿ: June Astrology: ಜೂನ್ ತಿಂಗಳಲ್ಲಿ ಹುಟ್ಟಿದವರು ಇನ್ನೊಬ್ಬರ ಮಾತಿಗೆ ಮರಳಾಗುತ್ತಾರೆ! ಇನ್ನಷ್ಟು ಭವಿಷ್ಯದ ಗುಟ್ಟು ಇಲ್ಲಿದೆ
ಅಂದಹಾಗೆ ಯಾವುದೇ ಕೆಲಸಗಳನ್ನು ಅಥವಾ ವಿಳಾಸಗಳಿಗೆ ಹೋಗಬೇಕಾದರೆ ನಮಗೆ ಹೆಚ್ಚು ಸಹಾಯಕವಾಗುವುದು ಗೂಗಲ್ ಮ್ಯಾಪ್ ಆಗಿದೆ. ಅದರಂತೆ ಇದೀಗ ಮನೆಯ ಅಡ್ರೆಸ್ ಗಳನ್ನು ಕೂಡ ಸುಲಭವಾಗಿ ಗೂಗಲ್ ಮ್ಯಾಪ್ ನಲ್ಲಿ ಸೇರಿಸಬಹುದಾಗಿದೆ. ಹಾಗಿದ್ರೆ ಹೇಗೆ ಸೇರಿಸುವುದು ಎಂದು ನೋಡೋಣ ಬನ್ನಿ.
ಮನೆ ಲೊಕೇಶನ್ ಸೇರಿಸುವ ವಿಧಾನ:
* ಗೂಗಲ್ ಮ್ಯಾಪ್ ಅಪ್ಲಿಕೇಶನ್ ನಲ್ಲಿ ಕಾಂಟ್ರಿಬ್ಯೂಟ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಪರದೆಯ ಕೆಳಗಿನ ಬಲಭಾಗದಲ್ಲಿರುವ "ಕಾಂಟ್ರಿಬ್ಯೂಟ್" ಆಯ್ಕೆಯನ್ನು ಕ್ಲಿಕ್ಕಿಸಿದ ನಂತರ, ನಿಮ್ಮ ಮುಂದೆ ಒಂದು ಮೆನು ತೆರೆದುಕೊಳ್ಳುತ್ತದೆ,
* ಅದರಲ್ಲಿ ನೀವು "ಆಡ್ ಲೋಕೇಶನ್" ಆಯ್ಕೆಯನ್ನು ಆರಿಸಬೇಕಾಗುತ್ತದೆ.
* ಮನೆಯ ಹೆಸರು ಮತ್ತು ವಿಳಾಸವನ್ನು ನಮೂದಿಸಿ. "ಹೆಸರು" ಜಾಗದಲ್ಲಿ ನಿಮ್ಮ ಮನೆಯ ಹೆಸರನ್ನು ನಮೂದಿಸಿ. "ವಿಳಾಸ" ಜಾಗದಲ್ಲಿ ನಿಮ್ಮ ಪೂರ್ಣ ವಿಳಾಸವನ್ನು ನೀವು ನಮೂದಿಸಬೇಕು. ಇದು ಪಿನ್ ಕೋಡ್ ಅನ್ನು ಸಹ ಒಳಗೊಂಡಿದೆ.
* ನಿಮ್ಮ ಮನೆಯ ಸ್ಥಳವನ್ನು ಆಯ್ಕೆಮಾಡಿ, ವಾಸ್ತವದಲ್ಲಿ ನೀವು ಮ್ಯಾಪ್ಸ್ ನಲ್ಲಿ ನಿಮ್ಮ ಮನೆಯ ನಿಖರವಾದ ಸ್ಥಳವನ್ನು ಆಯ್ಕೆ ಮಾಡಬೇಕು.
* ಝೂಮ್ ಇನ್/ಔಟ್ ಮತ್ತು ಪಿನ್ ಅನ್ನು ಡ್ರ್ಯಾಗ್ ಮಾಡುವ ಮೂಲಕ ನೀವು ಸ್ಥಳವನ್ನು ಸರಿಹೊಂದಿಸಬಹುದು.
* ಈಗ ನೀವು "ಪ್ರೋಸೀಡ್ " ಬಟನ್ ಮೇಲೆ ಕ್ಲಿಕ್ ಮಾಡಬೇಕು. ಈಗ ನೀವು ಅಪಾರ್ಟ್ಮೆಂಟ್, ಮನೆ ಇತ್ಯಾದಿಗಳನ್ನು ಒಳಗೊಂಡಿರುವ ಹೆಚ್ಚುವರಿ ಮಾಹಿತಿಯನ್ನು ನಮೂದಿಸಬೇಕು.
* "ಫೋನ್ ನಂಬರ್"ಜಾಗದಲ್ಲಿ ನೀವು ಮನೆಯ ಫೋನ್ ಸಂಖ್ಯೆಯನ್ನು ಸಹ ನಮೂದಿಸಬಹುದು.
* ಇದಾದ ಬಳಿಕ ನೀವು "ಸಬ್ಮಿಟ್" ಬಟನ್ ಕ್ಲಿಕ್ ಮಾಡುವ ಮೂಲಕ ಡೇಟಾವನ್ನು ಸಲ್ಲಿಸಬಹುದು.
ಆಂಡ್ರಾಯ್ಡ್ ಫೋನ್ ನಲ್ಲಿ ಗೂಗಲ್ ಮ್ಯಾಪ್‌ನಲ್ಲಿ ತಪ್ಪಾಗಿರುವ ವಿಳಾಸವನ್ನು ಬದಲಾಯಿಸಲು ಹೀಗೆ ಮಾಡಿ
* ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್ ತೆರೆಯಿರಿ
* ಇದರಲ್ಲಿ ನೀವು ಅಡ್ರೆಸ್ ಬದಲಾಯಿಸಲು ಬಯಸುವ ಸ್ಥಳದ ಹೆಸರಿನ ಮೇಲೆ ಟ್ಯಾಪ್ ಮಾಡಿ
* ಇದೀಗ ಮೇಲಕ್ಕೆ ಸ್ವೈಪ್ ಮಾಡಿ ಮತ್ತು ಎಡಿಟ್ ಅನ್ನು ಸೂಚಿಸು ಆಯ್ಕೆ ಟ್ಯಾಪ್ ಮಾಡಿ.
* ನಂತರ ಲಭ್ಯವಾಗುವ ಆಯ್ಕೆಗಳ ಮೂಲಕ ಹೆಸರು ಅಥವಾ ಇತರ ವಿವರಗಳನ್ನು ಬದಲಾಯಿಸಿ.
* ಇದಲ್ಲದೆ ನಿಮ್ಮ ಮನೆಯ ಅಡ್ರೆಸ್‌ನಲ್ಲಿ ಆಗಬೇಕಾದ ಬದಲಾವಣೆಗಳನ್ನು ಕೂಡ ಮಾಡಿರಿ.