For the best experience, open
https://m.hosakannada.com
on your mobile browser.
Advertisement

DK Suresh: ರಾಮನಗರ ಕ್ಷೇತ್ರದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಡಿಕೆ ಸುರೇಶ್ ಕಣ್ಣೀರು !

07:35 PM Jun 10, 2024 IST | ಸುದರ್ಶನ್
UpdateAt: 07:35 PM Jun 10, 2024 IST
dk suresh  ರಾಮನಗರ ಕ್ಷೇತ್ರದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಡಿಕೆ ಸುರೇಶ್ ಕಣ್ಣೀರು
Advertisement

DK Suresh: ರಾಮನಗರ: ಯಾರ್ಯಾರೆಲ್ಲ ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡ್ಕೊತಾನೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಗದ್ಗದಿತರಾಗಿ ಕಣ್ಣೀರು ಹಾಕಿದ್ದಾರೆ.ಈ ಸಂದರ್ಭದಲ್ಲಿ," ನಾನು ಬಾಳಬೇಕು- ಬದುಕಬೇಕು, ನನ್ನ ಕೆಲಸವನ್ನೆಲ್ಲಾ ಮಾಡಬೇಕು. ಅದೆಲ್ಲದರ ಜೊತೆ ನಿಮ್ಮ ಕೆಲಸವನ್ನೂ ಮಾಡಬೇಕು. ಧೈರ್ಯವಾಗಿರಿ ಯಾರಿಗೂ ಅಂಜಬೇಕಾಗಿಲ್ಲ, ಯಾರಿಗೂ ಹೆದರಿಕೊಳ್ಳಬೇಡಿ" ಎಂದು ಮಾರ್ಮಿಕವಾಗಿ ಮಾತಾಡಿದ್ದಾರೆ.

Advertisement

Suresh Gopi: ನರೇಂದ್ರ ಮೋದಿ ಸಂಪುಟದಿಂದ ಸುರೇಶ್‌ ಗೋಪಿ ಹೊರಕ್ಕೆ?

ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಹಾಲಿ ಡಿಸಿಎಂ, ಕಾಂಗ್ರೆಸ್ ದೈತ್ಯ ಡಿಕೆ ಶಿವಕುಮಾರ್ ತಮ್ಮ ಡಿಕೆ ಸುರೇಶ್ ಗೆ ಡಿಕೆ ಶಿವಕುಮಾರ್ ತವರು ಜಿಲ್ಲೆಯಲ್ಲಿ ಸೋಲಾಗಿದೆ. ಈ ಸೋಲಿನ ಹಿನ್ನೆಲೆಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿ, " ನಾನು ಸೋತಿದ್ದೀನಿ ಅಂತಾ ಸುಮ್ನೆ ಕೂರುವುದಿಲ್ಲ. ಚುನಾವಣೆಯಲ್ಲಿ ಅನುಭವಿಸಿದ ಸೋಲು ಆಕಸ್ಮಿಕ, ಇದು ಶಾಶ್ವತವಲ್ಲ. ಸೋತಿರುವ ಕಾರಣಕ್ಕೆ ಕ್ಷೇತ್ರದಿಂದ ದೂರವುಳಿಯಲ್ಲ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸೇರಿ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲು ಕಂಕಣ ಬದ್ಧನಾಗಿದ್ದೇನೆ" ಎಂದು ಅವರು ಹೇಳಿದ್ದಾರೆ.

Advertisement

ತದನಂತರ "ರಾಜಕಾರಣವೆಂದರೆ ಅಧಿಕಾರವಲ್ಲ, ಅಧಿಕಾರಕ್ಕಾಗಿ ತಾನು ಯಾವತ್ತೂ ಹಾತೊರೆದವನಲ್ಲ. ನಿಮ್ಮಲ್ಲಿ ಒಬ್ಬನಾಗಿ ಕೆಲಸ ಮಾಡುತ್ತೇನೆ ಎಂದು ಹೇಳುವಾಗ ಸುರೇಶ್ ಭಾವುಕರಾಗಿದ್ದಾರೆ. ಈಗ ನಿಮ್ಮೆಲ್ಲರ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ನಾನು ಅವರೊಂದಿಗೆ ಕೈ ಜೋಡಿಸಿ ಒಟ್ಟಾಗಿ ಕೆಲಸ ಮಾಡುವುದಾಗಿ ಡಿಕೆ ಸುರೇಶ್ ಹೇಳಿದ್ದಾರೆ. ಇದೀಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿಲ್ಲ, ಬಿಜೆಪಿಯೂ ಗೆದ್ದಿಲ್ಲ. ಕೇವಲ ನನ್ನ ಮೇಲಿನ ಆಕ್ರೋಶ ಮಾತ್ರ ಗೆಲುವು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

ಡಿವೋರ್ಸ್‌ ಬಳಿಕ ಚಂದನ್‌- ನಿವೇದಿತಾ ತುರ್ತು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

Advertisement
Advertisement
Advertisement