D.K.Shivakumar: ಸ್ವಂತ ತಮ್ಮನನ್ನೇ ಗೆಲ್ಲಿಸದ ಡಿಕೆಶಿ ತಮ್ಮ ಸ್ಥಾನ ಉಳಿಸಿಕೊಳ್ತಾರಾ? ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಫಿಕ್ಸಾ ?!
D.K. Shivakumar: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಜೊತೆಗೆ ಲೋಕಸಭಾ ಚುನಾವಣೆಯೂ ಮುಗಿದು ಫಲಿತಾಂಶ ಹೊರಬಿದ್ದಿದೆ. ಇದರ ಜೊತೆಗೆ ರಾಜ್ಯ ರಾಜಕೀಯದಲ್ಲಿ ಕೆಲವು ಮಹತ್ವದ ಬದಲಾವಣೆಗಳೂ ಸಂಭವಿಸಿವೆ, ಸಂಭವಿಸುತ್ತಿವೆ. ಅಂತೆಯೇ ಇದೀಗ ಕೆಪಿಸಿಸಿ(KPCC) ಅಧ್ಯಕ್ಷರ ಬದಲಾವಣೆ ಚರ್ಚೆ ಕೂಡ ಮುನ್ನಲೆಗೆ ಬಂದಿದೆ. ಸ್ವಂತ ತಮ್ಮನ ಸ್ಥಾನವನ್ನೇ ಉಳಿಸಿಕೊಳ್ಳಲಾಗದ ಡಿಕೆಶಿ(D.K Shivakumar)ತಮ್ಮ ಸ್ಥಾನವನ್ನೂ ಕಳೆದುಕೊಳ್ಳತ್ತಾರಾ? ಎಂಬ ವಿಚಾರ ಚರ್ಚೆಯಾಗುತ್ತಿದೆ
ಇದನ್ನೂ ಓದಿ: ರಾಜ್ಯದ ಈ ಮೂವರು ಸಂಸದರಿಗೆ ಮೋದಿ ಸಂಪುಟದಲ್ಲಿ ಸ್ಥಾನ ?!
ಹೌದು, ರಾಜ್ಯದಲ್ಲಿ ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇಟ್ಟಿತ್ತು. ಇದಕ್ಕಾಗಿಯೇ ಡಿಕೆ ಶಿವಕುಮಾರ್ ಕೆಪಿಸಿಸಿ ಅಧಿಕಾರವಧಿ ಮುಗಿದರೂ ಅವರನ್ನೇ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಮುಂದುವರೆಸಿಕೊಂಡು ಬಂದಿತ್ತು. ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ(DCM) ಹುದ್ದೆಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಲೋಕಸಭಾ ಚುನಾವಣೆವರೆ (Parliament Election) ಗೆ ನಿಭಾಯಿಸುವಂತೆ ಪಕ್ಷದ ಹೈಕಮಾಂಡ್ ಶಿವಕುಮಾರ್ ಅವರಿಗೆ ಸೂಚಿಸಿತ್ತು. ಆದರೀಗ ಚುನಾವಣೆಯಲ್ಲಿ 9 ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಗೆದ್ದಿದೆ.
ಅಲ್ಲದೆ ತಮ್ಮ ಸ್ವಂತ ತಮ್ಮನನ್ನೂ ಡಿಕೆಶಿ ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಇದೆಲ್ಲದರ ನಡುವೆ 'ಕನಕಪುರ ಬಂಡೆ' ಎಂಬ ಹವಾ ಇಟ್ಟಿರುವ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರಲ್ಲೇ ಅಸಮಾಧಾನ ಮೂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನ ಕೆಳಗೆ ಇಳಿಸಲು ಎಲ್ಲಾ ಸಿದ್ಧತೆ ಸಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹೀಗೆ ತಮ್ಮ ಸಹೋದರ ಡಿ.ಕೆ. ಸುರೇಶ್ ಕೂಡ ಸೋತಿರುವುದು ಡಿ.ಕೆ. ಶಿವಕುಮಾರ್ ಅವರಿಗೆ ಭಾರಿ ದೊಡ್ಡ ಹಿನ್ನಡೆ ತಂದಿರುವುದು ಒಂದು ಅಂಶವಾದರೆ ಈ ಸಲ ಲೋಕಸಭೆಯಲ್ಲಿ ಬೆಂಗಳೂರು, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿಸಿಲ್ಲ. ಡಿಕೆಶಿಈ ಪೈಕಿ ಬೆಂಗಳೂರು ನಗರದ ಮೇಲೆ ಡಿ.ಕೆ. ಶಿವಕುಮಾರ್ ಅವರು ಬಿಗಿ ಹಿಡಿತ ಹೊಂದಿದ್ದಾರೆ ಎಂಬ ಮಾತು ಇವೆ. ಇಷ್ಟೆಲ್ಲಾ ಹಿಡಿತ ಹೊಂದಿದ್ದರೂ, ಬೆಂಗಳೂರು ಭಾಗದಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆದ್ದಿಲ್ಲ. ಇದೆಲ್ಲಾ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಈಗ ಕಾಂಗ್ರೆಸ್ ನಾಯಕರು ಕೋಪಗೊಳ್ಳುವಂತೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ಎಲ್ಲಾ ಕಾರಣಗಳಿಂದ ಡಿಕೆಶಿ ಕೆಪಿಸಿಸಿ ಪಟ್ಟ ಬೇರೆಯವರ ಪಾಲಾಗುತ್ತಾ? ಎಂಬ ಗುಮಾನಿ ಶುರುವಾಗಿದೆ.