ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

D K Shivkumar: EVM ಏನೂ ಆಗದಿದ್ರೆ ಓಕೆ, ಜನ ಈಗ ನಮ್ಮ ಪರ ಇದ್ದಾರೆ ಎಂದ ಡಿಕೆಶಿ - ಇದು ಸೋಲಿನ ಭಯವೇ ಇಲ್ಲ ಗೆಲುವಿನ ಭರವಸೆಯೇ ?!

DK Shivkumar: ನೆಹರು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ ಅವರು ಇವಿಎಂ (EVM) ಯಂತ್ರಗಳು ಏನು ಆಗದೇ ಹೋದರೆ ಸರಿ. ಯಾಕೆಂದರೆ ಜನ ನಮ್ಮ ಪರವಾಗಿದ್ದಾರೆ.
06:36 AM May 28, 2024 IST | ಸುದರ್ಶನ್
UpdateAt: 06:36 AM May 28, 2024 IST
Advertisement

D K Shivkumar: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬೆನ್ನಲ್ಲೇ ಪಕ್ಷಗಳ ನಾಯಕರು ತಮ್ಮ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಅಂತೆಯೇ ಇದೀಗ ಡಿ ಕೆ ಶಿವಕುಮಾರ್(D K Shivkumar) ಅವರು EVM ಕುರಿತು ಅಚ್ಚರಿ ಹೇಳಿಕೆ ನೀಡಿದ್ದಾರೆ.

Advertisement

ಹೌದು, ಕೆಪಿಸಿಸಿ ಭಾರತ್ ಜೋಡೋ(KPCC Bharat Jodo Bhavan) ಭವನದಲ್ಲಿ ನಡೆದ ನೆಹರು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ ಅವರು ಇವಿಎಂ (EVM) ಯಂತ್ರಗಳು ಏನು ಆಗದೇ ಹೋದರೆ ಸರಿ. ಯಾಕೆಂದರೆ ಜನ ನಮ್ಮ ಪರವಾಗಿದ್ದಾರೆ. ಹೀಗಾಗಿ ಒಳ್ಳೆಯ ಶುಭ ಸೂಚನೆ ಬರುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ಆದರೆ ಡಿ ಕೆ ಶಿವಕುಮಾರ್ ಅವರ ಈ ಹೇಳಿಕೆ ಸೋಲಿನ ಭಯವೇ? ಅಥವಾ ಗೆಲುವಿನ ಭರವಸೆಯೇ? ಎಂಬುದು ಹಲವರ ಪ್ರಶ್ನೆಯಾಗಿದೆ. ಯಾಕೆಂದರೆ ಇತ್ತೀಚೆಗೆ ಚುನಾವಣೆ ಸಮೀಕ್ಷೆ ಕಾಂಗ್ರೆಸ್ ನಾಯಕರ ಕೈ ಸೇರಿದೆ. ಅದರಲ್ಲಿ ಕಾಂಗ್ರೆಸ್ ಗೆಲ್ಲುವ ಸ್ಥಾನಗಳ ಮಾಹಿತಿ ಇದೆ. ಹೀಗಾಗಿ ಗೆಲ್ಲುವ ಸ್ಥಾನಗಳು ವಿರಳವಿದ್ದು, ಇತ್ತ ತಾವು ಮಾತ್ರ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಾ ಬಂದಿರುವುದು ಫಲಿತಾಂಶ ಬಂದಾಗ ಇರುಸು ಮುರುಸು ಉಂಟು ಮಾಡಬಹುದು. ಹೀಗಾಗಿ ಆಕಂತ ಶುರುವಾಗಿದ್ದು EVM ಅನ್ನೇ ಹ್ಯಾಕ್ ಮಾಡಬಹುದು ಎಂದು ಅವರು ಪರೋಕ್ಷವಾಗಿ ನುಡಿದಿರಬಹುದು.

Advertisement

ಇಲ್ಲಾ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಗೆಲುವು ಎಂದು ಹೇಳಲಾಗಿದ್ದು ಗೆಲ್ಲುವ ಭರವಸೆಯಿಂದ ಡಿಕೆಶಿ ಹೀಗೆ ಹೇಳಿರಲೂ ಬಹುದು. ಇನ್ನೊಂದು ಅರ್ಥದಲ್ಲಿ ನೋಡುವುದಾದರೆ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಬರುವುದಿದ್ದು, EVM ಹ್ಯಾಕ್ ಮಾಡಿ ಸೋಲಿಸುವ ಸುಳಿವೇನಾದರೂ ಸಿಕ್ಕಿರಲೂ ಬಹುದು. ಅದಕ್ಕಾಗಿ ಇದುವರೆಗೂ ಬಾರದ EVM ವಿಚಾರ ಚುನಾವಣೆ ವೇಳೆ ಡಿಕೆಶಿ ಬಾಯಿಂದ ಬಂದಿದೆ ಎಂದು ಈ ಎಲ್ಲಾ ಆಯಾಮಗಳಿಂದ ಯೋಚಿಸಬಹುದು.

Advertisement
Advertisement