ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

D K Shivkumar: ಈ ದಿನದಿಂದ 'ಗ್ಯಾರಂಟಿ' ಯೋಜನೆಗಳು ರದ್ದು - ಡಿ ಕೆ ಶಿವಕುಮಾರ್ ಕೊಟ್ರು ಶಾಕಿಂಗ್ ಸ್ಟೇಟ್ಮೆಂಟ್ !!

12:12 PM Dec 16, 2023 IST | ಹೊಸ ಕನ್ನಡ
UpdateAt: 12:12 PM Dec 16, 2023 IST
Advertisement

D K Shivkumar: ರಾಜ್ಯದಲ್ಲಿ ಸಿದ್ದರಾಮಯ್ಯ(CM Siddaramaiah)ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನರಿಗೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಅದರಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಈ ಎಲ್ಲಾ ಯೋಜನೆಗಳು ಸುಮಾರು 10 ವರ್ಷಗಳ ಕಾಲ ಅಸ್ತಿತ್ವದಲ್ಲಿ ಇರುತ್ತದೆ, ಜನರಿಗೆ ಯಾವುದೇ ಚಿಂತೆ ಬೇಡ ಎಂದು ಕೂಡ ಸರ್ಕಾರ ಹೇಳಿದೆ. ಆದರೆ ಇದೀಗ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್(D K Shivkumar)ಅವರು ಗ್ಯಾರಂಟಿ ಯೋಜನೆಗಳು ರದ್ದಾಗುವ ಮಾತನ್ನಾಡಿದ್ದಾರೆ.

Advertisement

ಹೌದು, ಕಾಂಗ್ರೆಸ್ನ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳು(DCM) ಆದ ಡಿಕೆ ಶಿವಕುಮಾರ್ ಅವರು ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಾಗ ಬಿಜೆಪಿಯವರು ವಿರೋಧಿಸಿದರು. ಆದರೆ ಇಂದು ಎಲ್ಲ ಬಿಜೆಪಿ(BJP) ಕಾರ್ಯಕರ್ತರು ಕೂಡ ಈ ಗ್ಯಾರಂಟಿಗಳ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಅವರೆಲ್ಲರೂ ರಾಜ್ಯದ ಜನರೆಂದು ನಾವು ನೋಡುತ್ತೇವೆ. ಈ ಯೋಜನೆಗಳು ಇನ್ನು ಮುಂದೆಯೂ ನಿಮಗೆ ಸಿಗಬೇಕೆಂದರೆ ನೀವು ಕಾಂಗ್ರೆಸ್ ಗೆ ವೋಟ್ ಹಾಕಬೇಕು. ಲೋಕಸಭೆಯಲ್ಲಿ ಬಿಜೆಪಿ ಅಥವಾ ಜೆಡಿಎಸ್ ಗೆ ವೋಟ್ ಹಾಕಿ ಅವರನ್ನು ಗೆಲ್ಲಿಸಿದರೆ ನಾವು ಜಾರಿಗೆ ತಂದಿರುವ ಎಲ್ಲಾ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ. ಅವರು ಗೆದ್ದ ದಿನದಿಂದಲೇ ಇವು ರದ್ದಾಗುತ್ತವೆ. ಹೀಗಾಗಿ ನೀವು ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಡಿ' ಎಂದು ಹೇಳಿದರು.

ಅಲ್ಲದೆ ಗ್ಯಾರಂಟಿ ಲಾಭ ಪಡೆಯುವ ಎಲ್ಲಾ ಜನರಿಗೂ ಹೇಳಿ ಮನವರಿಕೆ ಮಾಡಬೇಕು. ಬಿಜೆಪಿ ಕಾರ್ಯಕರ್ತರು ಹಾಗೂ ಜೆಡಿಎಸ್ ಕಾರ್ಯಕರ್ತರಿಗೂ ತಿಳಿಸಿ, ಅವರ ಪರ ಒಲವಿರುವವರಿಗೂ ತಿಳಿಸಿ ಈ ಗ್ಯಾರಂಟಿ ಲಾಭ ಬೇಕೆಂದರೆ ನೀವು ಕಾಂಗ್ರೆಸ್ ಗೆ ವೋಟು ಮಾಡಲು ಎಂದು ಹೇಳಿದರು.

Advertisement

ಇದನ್ನು ಓದಿ: Dhiraj Sahu: IT ದಾಳಿಯಲ್ಲಿ ಪತ್ತೆಯಾದ 351 ಕೋಟಿಯಲ್ಲಿ 1ರೂ ಕೂಡ ನನ್ನದಲ್ಲ, ಎಲ್ಲಾ ಅವರದ್ದು! ಸ್ಫೋಟಕ ಸತ್ಯ ಹೊರಹಾಕಿದ ಕಾಂಗ್ರೆಸ್ ಸಂಸದ!

ಜೊತೆಗೆ ನಮ್ಮ ಸರ್ಕಾರ ಇರುವವರೆಗೂ ಅಥವಾ ನಮ್ಮ ಆಡಳಿತ ನಾವು ಎಲ್ಲಿವರೆಗೂ ಆಡಳಿತ ನಡೆಸುತ್ತೇವೆ ಅಲ್ಲಿಯವರೆಗೂ ನಾವು ಜಾರಿಗೆ ತಂದಿರುವಂತಹ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಾಗಲಿ, ಕಡಿಮೆ ಮಾಡುವುದಾಗಲಿ, ಅದನ್ನು ಹಿಂಪಡೆಯುವುದಾಗಲಿ ಮಾಡುವುದಿಲ್ಲ. ನಮ್ಮ ಸರ್ಕಾರ ಇರುವವರೆಗೂ ನಾವು ಎಲ್ಲಿವರೆಗೂ ಭರವಸೆ ಕೊಟ್ಟಿದ್ದೇವೆ ಅಲ್ಲಿಯವರೆಗೂ ಎಲ್ಲಾ ಗ್ಯಾರೆಂಟಿಗಳು ಅಸ್ತಿತ್ವದಲ್ಲಿ ಇರುತ್ತವೆ. ನಿಮಗೆ ಇದರ ಲಾಭ ಸಿಗುತ್ತದೆ ಎಂದು ಹೇಳಿದರು.

Advertisement
Advertisement